ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಮೇಲೆ ನೀರು ಹೊಯ್ದುಕೊಳ್ಳಿ, ಇಲ್ಲಾ ದೇಣಿಗೆ ನೀಡಿ

|
Google Oneindia Kannada News

ಬೆಂಗಳೂರು, ಆ, 22 : ಬೇಸಿಗೆಯ ಬೇಗೆ ತಾಳಲಾರದೇ ತಲೆ ಮೇಲೆ ಮಂಜುಗಡ್ಡೆಯನ್ನೋ, ತಣ್ಣೀರನ್ನೋ ಸುರಿದುಕೊಳ್ಳುವುದು ಸರ್ವೇ ಸಾಮಾನ್ಯ, ಆದರೆ ಯಾವುದೋ ಒಂದು ಸಂಸ್ಥೆಗೆ ದೇಣಿಗೆ ನೀಡಲು ಮೈ ಮೇಲೆ ಐಸ್‌ ಸುರಿದುಕೊಳ್ಳುವರನ್ನು ನೋಡಿದ್ದೀರಾ, ಅದು ಈಗ ಸಾಧ್ಯವಾಗಿದೆ. ತಾವು ಸುರಿದುಕೊಂಡು ಸ್ನೇಹಿತರನ್ನು ಆಹ್ವಾನಿಸುವ ಹೊಸ ರೀತಿಯ ಕ್ರೇಜ್‌ ಈಗ 'ಐಸ್‌ ಬಕೆಟ್‌ ಚಾಲೆಂಜ್‌' ಎಂದು ಪ್ರಖ್ಯಾತಿ ಗಳಿಸಿದೆ.

ಪ್ರತಿದಿನ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಐಸ್‌ ಬಕೆಟ್‌ ಚಾಲೆಂಜ್‌ ತೆಗೆದುಕೊಂಡ ವಿಡಿಯೋಗಳು ಹರಿದಾಡುತ್ತಿವೆ. ಪ್ರಪಂಚವನ್ನು ಅನೇಕ ರೋಗಗಳು ಬಾಧಿಸುತ್ತಿದ್ದು ಅದರಲ್ಲಿ ಎಎಲ್‌ಎಸ್‌ ಅಂದರೆ ಆಮೋಟ್ರೋಫಿಕ್‌ ಲಾಟರಲ್‌ ಸ್ಲಿರಿಯೋಸಿಸ್‌ ಕೂಡಾ ಒಂದು.

bil gates ice bucket

ಇದು ಒಂದು ರೀತಿಯ ನರರೋಗವಾಗಿದ್ದು ಮಾನವನ ಸ್ಪೈನಲ್‌ ಕಾರ್ಡ್‌, ಧ್ವನಿಪೆಟ್ಟಿಗೆ ಮತ್ತು ಸ್ನಾಯುಗಳ ಮೇಲೆ ತೀವ್ರತೆರನಾದ ಪರಿಣಾಮ ಬೀರುತ್ತದೆ. ಅಮೇರಿಕವನ್ನು ಬಹುವಾಗಿ ಕಾಡುತ್ತಿರುವ ರೋಗ ಮಾರಣಾಂತಿಕವಾಗಿದೆ.

ಐಸ್‌ ಬಕೆಟ್‌ ಚಾಲೆಂಜ್‌ ಎಂದರೇನು?
* ಐಸ್‌ ಬಕೆಟ್‌ ಚಾಲೆಂಜ್‌ನ್ನು ಎಎಲ್‌ಎಸ್‌ ಬಕೆಟ್‌ ಚಾಲೆಂಜ್‌ ಎಂದು ಕರೆಯಲಾಗುತ್ತದೆ.
* ಸವಾಲು ಸ್ವೀಕರಿಸಿದ ವ್ಯಕ್ತಿಯ ತಲೆಯ ಮೇಲೆ ಮತ್ತೊಬ್ಬ ವ್ಯಕ್ತಿ ನೇರವಾಗಿ ಐಸ್‌ ವಾಟರ್‌ ಸುರಿಯುತ್ತಾನೆ.
* ಚಾಲೆಂಜ್‌ ಸ್ವೀಕರಿಸಿದವ 24 ಗಂಟೆಗಯೊಳಗೆ ಐಸ್‌ ವಾಟರ್‌ ಸುರಿದುಕೊಳ್ಳಲು ಹಿಂದೇಟು ಹಾಕಿದವರು ಅಮೇರಿಕದ ಎಎಲ್‌ಎಸ್‌ ಸಂಸ್ಥೆಗೆ ದೇಣಿಗೆ ನೀಡಬೇಕಾಗುತ್ತದೆ.
* ತಲೆ ಮೇಲೆ ನೀರು ಸುರಿದುಕೊಂಡವರು ಸವಾಲು ಸ್ವೀಕರಿಸಲು ಬೇರೆಯವರನ್ನು ಆಹ್ವಾನಿಸುತ್ತಾರೆ ಅಂದರೆ ನಾಮಕರಣ ಮಾಡುತ್ತಾರೆ. ಆಹ್ವಾನಕ್ಕೊಳಗಾದವರು 24 ಗಂಟೆಯೊಳಗೆ ಚಾಲೆಂಜ್‌ ಪೂರೈಸದಿದ್ದರೆ ಅಂದರೆ ಐಸ್‌ ವಾಟರ್‌ ಸುರಿದುಕೊಳ್ಳದಿದ್ದರೇ ದೇಣಿಗೆ ನೀಡಬೇಕಾಗುತ್ತದೆ.

ಆರಂಭ ಹೇಗಾಯಿತು?
* 2014ರ ಬೇಸಿಗೆ ವೇಳೆ ಉತ್ತರ ಧ್ರುವ ಪ್ರದೇಶದಲ್ಲಿ ಮೊದಲು ಆರಂಭವಾದ ಐಸ್‌ ಬಕೆಟ್‌ನ ಚಾಲೆಂಜ್‌ ವಿಡಿಯೋಗಳು ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಇಂದು ದೊಡ್ಡ ಪರಂಪರೆ ರೀತಿ ಬೆಳೆದು ನಿಂತಿದೆ.
* ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಅತಿ ಹೆಚ್ಚಿನ ಪ್ರಖ್ಯಾತಿ ಗಳಿಸಿದ್ದು, ಸಿನಿಮಾ ತಾರೆಯರು, ರಾಜಕಾರಣಿಗಳು, ಕ್ರೀಡಾಪಟುಗಳು ತಾವು ತೆಗೆದುಕೊಂಡ ಸವಾಲಿನ ವಿಡಿಯೋಗಳನ್ನು ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ.
* ಜಾಲ ತಾಣಗಳಲ್ಲಿ ಈ ಬಗೆಯ ವಿಡಿಯೋಗಳು ಹರಿದಾಡಿದ ನಂತರ ಎಎಲ್‌ಎಸ್‌ ಬಗ್ಗೆ ಜನರಿಗೆ ಜಾಗೃತಿ ಉಂಟಾಯಿತು.
* 2014ರ ಆಗಸ್ಟ್‌ 18 ರಂದು ವರದಿ ನೀಡಿದ ಎಎಲ್‌ಎಸ್‌ ಸಂಸ್ಥೆ ಒಟ್ಟು 15.6 ಮಿಲಿಯನ್‌ ಡಾಲರ್‌ ದೇಣಿಗೆ ಪಡೆದಿರುವುದಾಗಿ ಹೇಳಿತು. ಈ ಐಸ್‌ ಬಕೆಟ್‌ ಚಾಲೆಂಜ್‌ ಜಾರಿಗೆ ಬರದ ಕಾಲದಲ್ಲಿ ಅಂದರೆ ಕಳೆದ ವರ್ಷ ಕೇವಲ 1.8 ಮಿಲಿಯನ್‌ ಡಾಲರ್‌ ದೇಣಿಗೆ ಪಡೆಯಲಾಗಿತ್ತು ಎಂದು ತಿಳಿಸಿದೆ.

ಸ್ಪರ್ಧೆಯ ನಿಯಮಾವಳಿಗಳೇನು?
* ನಾಮನಿರ್ದೇಶನಕ್ಕೆ ಒಳಗಾದ ವ್ಯಕ್ತಿ 24 ಗಂಟೆ ಕಾಲಾವಧಿಯಲ್ಲಿ ಚಾಲೆಂಜ್‌ ಸ್ವೀಕರಿಸಿದ ಅಂದರೆ ಐಸ್‌ ವಾಟರ್‌ ತಲೆ ಮೇಲೆ ಸುರಿದುಕೊಂಡ ವಿಡಿಯೋ ರೇಕಾರ್ಡ್‌ ಮಾಡಿ ಕಳಿಸಬೇಕು.
* ಮೊದಲು ನಾನು ಸವಾಲು ಸ್ವೀಕರಿಸುತ್ತಿದ್ದೇನೆ ಎಂದು ಘೋಷಣೆ ಮಾಡಬೇಕು.
* ಸ್ಪರ್ಧಿಯ ತಲೆಯ ಮೇಲೆ ಐಸ್‌ ತುಂಬಿದ ಬಕೆಟ್‌ ಸುರಿಯಬೇಕು ಮತ್ತು ಇದನ್ನು ವಿಡಿಯೋ ಮಾಡಲಾಗುವುದು.
* ಚಾಲೆಂಜ್‌ ಮುಗಿಸಿದ ವ್ಯಕ್ತಿ ಬೇರೆಯವರನ್ನು ನಾಮಿನೇಟ್‌ ಮಾಡಲು ಅರ್ಹರಾಗುತ್ತಾನೆ.
* ನಿಮ್ಮ ಹೆಸರು ನಾಮಕರಣವಾದರೆ ಒಂದು ಸವಾಲು ಸ್ವೀಕಾರ ಮಾಡಬೇಕು ಇಲ್ಲವೇ 100 ಡಾಲರ್‌ ದೇಣಿಗೆ ನೀಡಲು ಸಿದ್ಧರಾಗಬೇಕು.

ಆರಂಭಿಸಿದವ ಇಂದು ಬದುಕಿಲ್ಲ
ಐಸ್‌ ಬಕೆಟ್‌ ಚಾಲೆಂಜ್‌ ಆರಂಭಿಸಿದ ವರ್ಷದ ಕೋರಿ ಗಿರ್ಫಿನ್‌ ಇಂದು ಬದುಕಿಲ್ಲ. ಮೊನ್ನೆ ಆಗಸ್ಟ 16ರಂದು ನಡೆದ ಕಾರು ಅಪಘಾತದಲ್ಲಿ ಕೋರಿ ಗಾರ್ಫಿನ್‌ ತೀರಿಕೊಂಡಿದ್ದಾರೆ. ಎಎಲ್‌ಎಸ್‌ ಸಂಸ್ಥಗೆ ಲಕ್ಷಗಟ್ಟಲೇ ಡಾಲರ್‌ ದೇಣಿಗೆ ಸಂಗ್ರಹಿಸಿದ ನೀಡಿದ್ದ ಕೋರಿಯ ಬಕೆಟ್‌ ಚಾಲೆಂಜ್‌ ಮಾತ್ರ ನಮ್ಮೊಂದಿಗೆ ಉಳಿದುಕೊಂಡಿದೆ.

ಚಾಲೆಂಜ್‌ ಸ್ವೀಕರಿಸಿ ಜಯಿಸಿದ ಪ್ರಮುಖರು
ಅಮೇರಿಕದ ಅಧ್ಯಕ್ಷ ಬರಾಕ್‌ ಒಬಾಮ, ಬಿಲ್‌ ಗೇಟ್ಸ್‌, ಮಾರ್ಕ್ ಜುಕೆರ್‌ರ್ಗ್, ಲೇಡಿ ಗಾಗಾ, ಜಾಕೋವಿಕ್‌, ಕ್ರಿಸ್ಟಿಯನ್‌ ರೋನಾಲ್ಡೋ, ಕ್ರೀಸ್‌ ಗೇಲ್‌ ಸವಾಲು ಜಯಿಸಿದ್ದಾರೆ.

ಅಲ್ಲದೇ ಭಾರತದ ಸಾನಿಯಾ ಮಿರ್ಜಾ, ಬಿಪಾಷಾ ಬಸು, ರೋಹನ್‌ ಬೋಪಣ್ಣ, ರಿತೇಶ್‌ ದೇಶ್‌ಮುಕ್‌, ಅಶ್ವಿನಿ ಪೊನ್ನಪ್ಪ ಐಸ್‌ ಸುರಿದುಕೊಂಡಿದ್ದಾರೆ.

ಹಾಗಾದರೆ ಇನ್ಯಾಕೆ ತಡ, ನೀವು ಐಸ್‌ ಬಕೆಟ್‌ ಚಾಲೆಂಜ್‌ ಸ್ವೀಕರಿಸಿ, ಜಾಲತಾಣದಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿ ಸ್ನೇಹಿತರನ್ನು ಆಹ್ವಾನಿಸುವುದನ್ನು ಮರೆಯಬೇಡಿ....

ಕ್ರಿಸ್ಟಿಯನ್‌ ರೋನಾಲ್ಡೋ

ಬಿಲ್‌ ಗೇಟ್ಸ್‌


ಬ್ರಿಟ್ನಿ ಸ್ಪೇರ್ಸ್ಸ್


English summary
Ice Bucket Challenge is the new craze that has swept the world. Recently, you must have noticed people sharing videos where they are pouring buckets of ice over themselves. If you think, all this is happening because of the rising summer temperatures, then wait. The reason why people are pouring cold water on them is the Ice Bucket Challenge .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X