ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳಿ ದಾಟುವ ವೇಳೆ ಮೃತ್ಯುವಾಗಿ ಬಂದ ರೈಲು: 12 ಸಾವು

|
Google Oneindia Kannada News

ಹಿಸ್ಸಾರ್, ಜ. 26 : ಹಳಿ ದಾಟುತ್ತಿದ್ದ ವಾಹನಕ್ಕೆ ರೈಲು ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ 12 ಜನ ಸಾವಿಗೀಡಾಗಿದ್ದು ಮೂವರು ಗಂಭೀರ ಗಾಯಗೊಂಡಿದ್ದಾರೆ.

ಹರ್ಯಾಣದ ಹಿಸ್ಸಾರ್ ಜಿಲ್ಲೆಯ ಸಾರ್‌ಸೋಡ್‌ ಎಂಬಲ್ಲಿ ದುರ್ಘಟನೆ ನಡೆದಿದೆ.ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟಾಟಾ ಮ್ಯಾಜಿಕ್‌ ವಾಹನದಲ್ಲಿ ಒಂದೇ ಕುಟುಂಬದ 15 ಮಂದಿ ಪ್ರಯಾಣಿಸುತ್ತಿದ್ದು, ಹಳಿ ದಾಟುವ ವೇಳೆ ದುರಿ -ಸಿರ್ಸಾ ಪ್ಯಾಸೆಂಜರ್‌ ರೈಲು ಡಿಕ್ಕಿಯಾಗಿ ಅವಘಡ ಸಂಭವಿಸಿದೆ.[ರೈಲಿಗೆ ಶಾಲಾ ವಾಹನ ಡಿಕ್ಕಿ, ಐದು ಮಕ್ಕಳು ಸಾವು]

Indian railways

ಪ್ರದೇಶದಲ್ಲಿ ಮಂಜು ಕವಿದ ವಾತಾವರಣವಿದ್ದುದರಿಂದ ರೈಲು ಬರುತಿದ್ದುದು ಗೂಡ್ಸ್‌ ವಾಹನ ಚಾಲಕನಿಗೆ ಗೊತ್ತಾಗಿಲ್ಲ. ಈ ವೇಳೆ ಹಳಿ ದಾಟಿಸಿ ಇನ್ನೊಂದೆಡೆಗೆ ತೆರಳಲು ವಾಹನದ ಚಾಲಕ ಮುಂದಾಗಿದ್ದಾನೆ. ಸರಿಯಾಗಿ ರೈಲ್ವೆ ಹಳಿಯ ಮೇಲೆ ವಾಹನವಿದ್ದಾಗ ರೈಲು ಅಪ್ಪಳಿಸಿದೆ.

ಮೃತರಲ್ಲಿ ನಾಲ್ವರು ಮಕ್ಕಳು ಮತ್ತು ಐವರು ಮಹಿಳೆಯರು ಸೇರಿದ್ದಾರೆ.ಗಂಭೀರವಾಗಿ ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ. ಚಾಲಕ ಮತ್ತು ವಾಹನದ ಮಾಲೀಕ ಸಹ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

English summary
Twelve members of a family, including five women and four children, were killed and three others injured when the vehicle they were travelling in was hit by Dhuri-Sirsa passenger train at an unmanned rail crossing along the Chandigarh-Hisar road near Sarsod village in Barwala subdivision of Hisar district on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X