ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಮೂಗಿಗೆ ಮೋದಿ ಗೆಲುವಿನ ವಾಸನೆ ಬಡಿದಿದೆಯಾ?

By Srinath
|
Google Oneindia Kannada News

ನವದೆಹಲಿ, ಏಪ್ರಿಲ್ 1: ಅಮೆರಿಕ ಮೂಗಿಗೆ ಮೋದಿ ಗೆಲುವಿನ ವಾಸನೆ ಬಡಿದಿದೆಯಾ? ಹೀಗೊಂದು ಅನುಮಾನ ಇಂದು ದಟ್ಟವಾಗಿ ಕೇಳಿಬರುತ್ತಿದೆ. ಭಾರತದಲ್ಲಿರುವ ತನ್ನ ರಾಯಭಾರಿ 65 ವರ್ಷದ ನ್ಯಾನ್ಸಿ ಪಾವೆಲ್ ಅವರಿಂದ ರಾಜೀನಾಮೆ ಪಡೆದ ಬೆನ್ನಿಗೆ ಬಿಜೆಪಿಯ ಘೋಷಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಮುಂದೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಾಗ ಭಾರತದ ಪ್ರಧಾನಿಗೆ ಅನ್ವಯವಾಗುವ ಶಿಷ್ಟಾಚಾರದಂತೆ ಅವರು ಯಾವುದೇ ಘಳಿಗೆ ಬೇಕಾದರೂ ನಮ್ಮ ಅಮೆರಿಕಕ್ಕೆ ಬರಬಹುದು ಎಂದು ಘೋಷಿಸಿದೆ.

ಅಷ್ಟೇ ಅಲ್ಲ. ಮುಂದೆ ಮೋದಿ ಗೆದ್ದು ಪ್ರಧಾನಿಯಾದರೆ ನವದೆಹಲಿಯ ಜತೆಜತೆಗೆ ಗುಜರಾತಿಗೂ ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗುತ್ತದೆ ಎಂಬುದು ಅಮೆರಿಕದ ಅರಿವಿಗೆ ಬಂದಿದೆ. ಆ ಪ್ರಯತ್ನದಲ್ಲಿ ಗುಜರಾತ್ ಮೂಲದ ವ್ಯಕ್ತಿಯನ್ನು ನ್ಯಾನ್ಸಿ ಪಾವೆಲ್ ಜಾಗಕ್ಕೆ ನೇಮಕ ಮಾಡಲು ಅಮೆರಿಕ ಆಲೋಚಿಸುತ್ತದೆ ಎಂಬ ಮಾತುಗಳು ದಟ್ಟಾವಾಗಿ ಕೇಳಿಬರುತ್ತಿದೆ.

ಯಾರು ಆ ಗುಜರಾತಿ!?

gujarati-rajiv-shah-may-replace-nancy-powell-as-us-ambassador-to-india
ಪ್ರಸ್ತುತ, USAID ವಿಭಾಗದ ಮುಖ್ಯಸ್ಥರಾಗಿರುವ ರಾಜೀವ್ ಷಾ ಮುಂದಿನ ಭಾರತದ ರಾಯಭಾರಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದು, ಅವರ ಸಂಪುಟದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಭಾರತೀರ ಸಂಜಾತ ರಾಜೀವ್ ಷಾ ಅವರಾಗಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

41 ವರ್ಷದ ರಾಜೀವ್ ಷಾ ಅವರು ಮೂಲತಃ ಗುಜರಾತಿನವರು. ರಾಜೀವ್ ಷಾ ಅವರ ತಂದೆ-ತಾಯಿ ಭಾರತದವರಾಗಿದ್ದು, ಆನ್ ಅರ್ಬರ್ ಮಿಚಿಗನ್ ನಲ್ಲಿ ಜನಿಸಿದವರಾಗಿದ್ದಾರೆ. ರಾಜೀವ್ ಷಾ, 2009ರ ಡಿಸೆಂಬರ್ 31ರಂದು ಒಬಾಮಾ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಒಬಾಮಾ ಸಂಪುಟದಲ್ಲಿ ಮೆರಿಟ್ ಆಫ್ ಆರ್ಡರ್ ನಲ್ಲಿ 16ನೆಯವರಾಗಿದ್ದಾರೆ. ಈಗಾಗಲೇ ಒಬಾಮಾ ವಹಿಸಿರುವ ಅನೇಕ ಮಹತ್ವದ ಜವಾಬ್ದಾರಿಗಳನ್ನು ರಾಜೀವ್ ಷಾ ಸಮರ್ಥವಾಗಿ ನಿಭಾಯಿಸಿದ್ದಾರೆ.

USAID ವಿಭಾಗದ ಮುಖ್ಯಸ್ಥರಾಗುವ ಮುನ್ನ ರಾಜೀವ್ ಷಾ, ಅಮೆರಿಕದ ಕೃಷಿ ವಿಭಾಗದಲ್ಲಿ (USDA) ಮುಖ್ಯಸ್ಥರಾಗಿದ್ದರು. ಅಲ್ಲಿಯೂ ಸಹ ರಾಜೀವ್ ಷಾ, ತಮ್ಮ ಕೈಚಳಕ ತೋರಿ, ಒಬಾಮಾ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದಾರೆ. ಒಬಾಮಾ ಆತ್ಮೀಯ ವಲಯಕ್ಕೆ ಸೇರುವ ಮುನ್ನ ರಾಜೀವ್ ಷಾ ಅವರು Bill & Melinda Gates Foundationನಲ್ಲಿ 7 ವರ್ಷ ಕಾಲ ದುಡಿದಿದ್ದಾರೆ.

ಡೆಟ್ರಾಯ್ಟ್ ಮೂಲದ ರಾಜೀವ್ ಷಾ, University of Pennsylvania Medical Schoolನಲ್ಲಿ ವೈದ್ಯಕೀಯ ಪದವಿ ಪಡೆದವರು. ಅದಾದ ನಂತರ Wharton School of Businessನಲ್ಲಿ ಮಾಸ್ಟರ್ಸ್ ಪದವಿ ಪಡೆದಿದ್ದಾರೆ. London School of Economics ಮತ್ತು University of Michigan ಗಳಿಂದಲೂ ಪದವಿ ಗಳಿಸಿದ್ದಾರೆ.

ದಿಢೀರ್ ಬೆಳವಣಿಗೆಯಲ್ಲಿ, ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿರುವ ಭಾರತದಲ್ಲಿ ಮೂರು ವರ್ಷದಿಂದ ತನ್ನ ರಾಜಭಾರಿಯಾಗಿರುವ ನ್ಯಾನ್ಸಿ ಪಾವೆಲ್ ಅವರನ್ನು ಅಮೆರಿಕ ಸೋಮವಾರ ವಾಪಸ್ ಕರೆಯಿಸಿಕೊಂಡಿದೆ. ಹಾಗಾಗಿ, ಅಮೆರಿಕ ತಕ್ಷಣವೇ ಭಾರತಕ್ಕೆ ತನ್ನ ನೂತನ ರಾಜಭಾರಿಯನ್ನು ನೇಮಕ ಮಾಡಬೇಕಿದ್ದು, ಬಹಗುತೇಕ ರಾಜೀವ್ ಷಾ ನೇಮಕವಾಗುವುದು ಖಚಿತ ಎಂದು ತಿಳಿದು ಬಂದಿದೆ.

English summary
Lok Sabha Election 2014: Gujarati Rajiv Shah may replace Nancy Powell as US Ambassador to India. With US Ambassador to India Nancy Powell quitting, one of the names being considered as her replacement is Rajiv Shah, head of USAID. Shah, who is 41 years of age, was born in Ann Arbor Michigan to immigrant parents from India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X