ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೌಚಾಲಯ ನಿರ್ಮಾಣಕ್ಕೆ ನೀಡುವ ಸಹಾಯಧನ ಹೆಚ್ಚಳ

|
Google Oneindia Kannada News

ನವದೆಹಲಿ, ಆ.27 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ಅನುಕೂಲವಾಗುವಂತೆ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸಲು ನೀಡುತ್ತಿದ್ದ ಸಹಾಯಧನವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಮನೆ, ಶಾಲೆ, ಮತ್ತು ಅಂಗನ­­ವಾಡಿ­ಗಳಲ್ಲಿ ನಿರ್ಮಾಣ­ವಾ­ಗುವ ಶೌಚಾಲಯಗಳಿಗೆ ನೀಡುವ ಸಹಾಯಧನ ಹೆಚ್ಚಾಗಲಿದೆ.

ಕೇಂದ್ರ ಸರ್ಕಾರ ಈ ಕುರಿತ ಯೋಜನೆ ಸಿದ್ಧಪಡಿಸುತ್ತಿದ್ದು, ಮನೆಯ ಶೌಚಾಲಯ ನಿರ್ಮಾಣಕ್ಕೆ ನೀಡುವ ಸಹಾಯ­ಧನವನ್ನು ರೂ 10 ಸಾವಿರ­­ದಿಂದ 15 ಸಾವಿ­ರಕ್ಕೆ, ಶಾಲಾ ಶೌಚಾಲಯ ನಿರ್ಮಾ­ಣಕ್ಕೆ ನೀಡುವ ಅನು­ದಾನ­­ವನ್ನು 35 ಸಾವಿರ­ದಿಂದ ರೂ 54 ಸಾವಿರಕ್ಕೆ, ಅಂಗನ­­ವಾಡಿ ಶೌಚಾಲಯಕ್ಕೆ ನೀಡುವ ಮೊತ್ತ­ವನ್ನು 8 ಸಾವಿರದಿಂದ 20 ಸಾವಿರಕ್ಕೆ ಮತ್ತು ಸಮು­­ದಾಯ ಶೌಚಾ­ಲಯ ನಿರ್ಮಾ­ಣಕ್ಕೆ ನೀಡುವ ಹಣ­ವನ್ನು ರೂ 2 ಲಕ್ಷ­ದಿಂದ ರೂ 6 ಲಕ್ಷಕ್ಕೆ ಏರಿ­ಸುವ ಪ್ರಸ್ತಾಪವಿದೆ.

India

ರಾಜ್ಯಗಳಿಗೆ ಸೂಚನೆ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿ­ದಂತೆ ದೇಶದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ನಿರ್ಮಿ­ಸಲು ಕ್ರಿಯಾ ಯೋಜನೆ ರೂಪಿಸುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದಾರೆ.[ಸ್ವಚ್ಛ ಭಾರತ ಕನಸಿಗೆ ಕೈ ಜೋಡಿಸಿದ ಟಿಸಿಎಸ್‌]

ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಹೆಚ್ಚುವರಿ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಸಚಿವ ನಿತಿನ್ ಗಡ್ಕರಿ ಅವರು ಸಹ ಶೌಚಾಲಯ ನಿರ್ಮಾಣ ಕಾರ್ಯ­ಕ್ರಮ­­ವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಪ್ರತ್ಯೇಕಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. [ಕೆಂಪುಕೋಟೆ ಮೇಲಿನ ನರೇಂದ್ರ ಮೋದಿ ಭಾಷಣದಲ್ಲೇನಿತ್ತು?]

English summary
Giving a big push to Prime Narendra Modi's ambitious Clean India mission, the government proposed a hike in funds provided for constructing household toilets in rural areas and providing better sanitation facilities in schools and anganwadis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X