ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ರಾಜ್ಯಗಳ 18 ಅಸೆಂಬ್ಲಿ ಕ್ಷೇತ್ರಗಳ ಫಲಿತಾಂಶ

By Mahesh
|
Google Oneindia Kannada News

ಬೆಂಗಳೂರು, ಆ.25 : ನಾಲ್ಕು ರಾಜ್ಯಗಳ ಒಟ್ಟು 18 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿದ್ದು, ಫಲಿತಾಂಶ ಸೋಮವಾರ ಹೊರಬೀಳಲಿದೆ. ಬಿಹಾರ, ಕರ್ನಾಟಕ, ಪಂಜಾಬ್ ಹಾಗೂ ಮಧ್ಯಪ್ರದೇಶದಲ್ಲಿ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದ್ದು, ಕಾಂಗ್ರೆಸ್ ಎಲ್ಲೆಡೆ ಆರಂಭಿಕ ಮುನ್ನಡೆ ಪಡೆದುಕೊಂಡಿದೆ.

ಕರ್ನಾಟಕದ 3 ಕ್ಷೇತ್ರ : ಚಿಕ್ಕೋಡಿ-ಸದಲಗಾ, ಬಳ್ಳಾರಿ, ಶಿಕಾರಿಪುರಗಳ ಪೈಕಿ ಬಳ್ಳಾರಿ ಫಲಿತಾಂಶ ಬಂದಿದೆ. ಬಳ್ಳಾರಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ ಸಂಸದ ಶ್ರೀರಾಮುಲು ಬೆಂಬಲಿತ ಓಬಳೇಶ್ ಗೆ ಮುಖಭಂಗವಾಗಿದೆ. ಕಾಂಗ್ರೆಸ್ಸಿನ ಗೋಪಾಲಕೃಷ್ಣ 33,144 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. [ವಿವರ ಇಲ್ಲಿ ಓದಿ]
* ಶಿಕಾರಿಪುರದಲ್ಲಿ ಸಂಸದ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಅವರು ಕಾಂಗ್ರೆಸ್ಸಿನ ಶಾಂತವೀರಪ್ಪ ಗೌಡ ವಿರುದ್ಧ ಜಯ ಸಾಧಿಸಿದ್ದಾರೆ.[ಪೂರ್ಣ ಮಾಹಿತಿ ಇಲ್ಲಿ ಓದಿ]
* ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಸಂಸದ ಪ್ರಕಾಶ್ ಹುಕ್ಕೇರಿ ಮಗ ಗಣೇಶ್ ಹುಕ್ಕೇರಿ ಜಯಭೇರಿ ಬಾರಿಸಿದ್ದರು. [ವರದಿ ಇಲ್ಲಿದೆ]

ಬಿಹಾರದಲ್ಲಿ 10 ಕ್ಷೇತ್ರ : ನರ್ಕಾತಿಯಾಗಂಜ್, ರಾಜ್ ನಗರ್, ಜಾಲೆ, ಛಾಪ್ರಾ, ಹಾಜಿಪುರ್, ಮೊಯಿದ್ದೀನ್ ನಗರ್, ಪರ್ಬಟ್ಟಾ, ಭಗಲ್ ಪುರ್, ಬಾಂಕ, ಮೊಹಾನಿಯಾ ಕ್ಷೇತ್ರದಲ್ಲಿ ಚುನಾವಣೆ ನಡೆದಿತ್ತು.ಪ್ರಧಾನಿ ನರೇಂದ್ರ ಮೋದಿ ಅವರ ಮೋಡಿ ಬಿಹಾರದಲ್ಲಿ ಸಂಪೂರ್ಣ ನೆಲಕಚ್ಚಿದೆ. ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ಉಳಿದಂತೆ ಲಾಲೂ-ನಿತೀಶ್ ಬಣ ತಲಾ ನಾಲ್ಕು ಸೀಟು ಗೆದ್ದು ವಿಜಯೋತ್ಸವ ಆಚರಿಸಿದೆ.

Four States 18 Assembly By-Poll Results

* ಮೊಯಿದ್ದೀನ್ ನಗರ್ ನಲ್ಲಿ ಆರ್ ಜೆಡಿ ಜಯಭೇರಿ ಬಾರಿಸಿದೆ.
* ನರ್ಕಾತಿಯಾ ಗಂಜ್ ಕ್ಷೇತ್ರದಲ್ಲಿ ಬಿಜೆಪಿಯ ರಶ್ಮಿ ವರ್ಮ ಗೆಲುವು ಸಾಧಿಸಿದ್ದಾರೆ.
* ಬಿಹಾರದ ಜೆಡಿಯು ಅಭ್ಯರ್ಥಿ ರಾಮನಂದ್ ಪ್ರಸಾದ್ ಸಿಂಗ್ ಪರ್ಬಟ್ಟಾ ಅಸೆಂಬ್ಲಿ ಸ್ಥಾನ ಗೆದ್ದಿದ್ದಾರೆ.
* ಭಗಲ್ ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ.
* ಮೊಹಾನಿಯಾ, ಬಂಕಾ, ಹಾಜಿಪುರ್ ಅಸೆಂಬ್ಲಿ ಕ್ಷೇತ್ರ ಬಿಜೆಪಿ ವಶವಾಗಿದೆ.
* ಛಾಪ್ರಾ ಕ್ಷೇತ್ರದಲ್ಲಿ ಆರ್ ಜೆಡಿ ಅಭ್ಯರ್ಥಿ ರಣಧೀರ್ ಸಿಂಗ್ ಗೆದ್ದಿದ್ದಾರೆ.
* ಜಾಲೆಯಲ್ಲಿ ಜೆಡಿಯು ಅಭ್ಯರ್ಥಿ ರಿಷಿ ಮಿಶ್ರಾ ಗೆಲುವು ಸಾಧಿಸಿದ್ದಾರೆ.
* ರಾಜ್ ನಗರದಲ್ಲಿ ಲಾಲೂ ಅವರ ಆರ್ ಜೆಡಿ ಅಭ್ಯರ್ಥಿಗೆ ಗೆಲುವು.
* ಪ್ರಧಾನಿ ನರೇಂದ್ರ ಮೋದಿ ಅವರ ಮೋಡಿ ಬಿಹಾರದಲ್ಲಿ ಸಂಪೂರ್ಣ ನೆಲಕಚ್ಚಿದೆ. ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ಉಳಿದಂತೆ ಲಾಲೂ-ನಿತೀಶ್ ಬಣ ತಲಾ ನಾಲ್ಕು ಸೀಟು ಗೆದ್ದು ವಿಜಯೋತ್ಸವ ಆಚರಿಸಿದೆ.
* 10 ಕ್ಷೇತ್ರಗಳ ಪೈಕಿ ಲಾಲೂ ನಿತೀಶ್ ಬಣ 7 ರಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಬಿಜೆಪಿ ಆರಂಭಿಕ ಮುನ್ನಡೆ ಪಡೆದರೂ 3 ಕ್ಷೇತ್ರದಲ್ಲಿ ಮಾತ್ರ ಮುಂದಿತ್ತು.
* ಛಾತ್ರಾ, ಬಾಂಕದಲ್ಲಿ ಆರ್ ಜೆಡಿ, ಜಾಲೆ, ಹಾಜಿಪುರ, ಪರ್ಬಟ್ಟಾದಲ್ಲಿ ಜೆಡಿಯು ಮುನ್ನಡೆ ಪಡೆದಿದ್ದರೆ, ಭಗಲ್ ಪುರದಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದಿದೆ.

ಪಂಜಾಬ್ 2 ಕ್ಷೇತ್ರ: ತಲ್ ವಾಂಡಿ ಸಾಬೋ ಹಾಗೂ ಪಟಿಯಾಲ. ಈ ಪೈಕಿ ಪಟಿಯಾಲಾ ಕಾಂಗ್ರೆಸ್ ವಶವಾಗಿದೆ. ಪ್ರಣೀತ್ ಕೌರ್ ಅವರು 23,836 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
[ಲೈವ್ ಫಲಿತಾಂಶ ವಿವರಗಳು : ಕರ್ನಾಟಕ | ಇತರೆ ರಾಜ್ಯಗಳು]
* ಮತ್ತೊಂದು ಕ್ಷೇತ್ರ ಶಿರೋಮಣಿ ಅಕಾಲಿ ದಳದ ಅಭ್ಯರ್ಥಿ ಜೀತ್ ಮೊಹೀಂದರ್ ಅವರು ತಲ್ ವಾಂಡಿ ಸಾಬೋ ಕ್ಷೇತ್ರವನ್ನು ವಶಪಡಿಸಿಕೊಂಡಿದ್ದಾರೆ. ಜೀತ್ ಅವರು 46,642 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ.

ಮಧ್ಯಪ್ರದೇಶ ಫಲಿತಾಂಶ:
*ಅಗರ್(ಮಾಳ್ವ) ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ಸಿನ ರಾಜಕುಮಾರ್ ಗೋರೆ ಅವರನ್ನು ಗೋಪಾಲ್ ಪಾರ್ಮಾರ್ ಅವರು 27,102 ಅಂತರದಿಂದ ಜಯ ಸಾಧಿಸಿದ್ದಾರೆ. ಇದೇ ಕ್ಷೇತ್ರದ ಶಾಸಕರಾಗಿದ್ದ ಮನೋಹರ್ ಅವರು ದೇವಾಸ್ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
* ಕತ್ನಿ ಜಿಲ್ಲೆಯ ಬಹೋರಿಬಾಂದ್ ಕ್ಷೇತ್ರದಲ್ಲಿ ಕಾಂಗ್ರೆಸ್ 1750 ಮತಗಳ ಮುನ್ನಡೆ ಪಡೆದಿದೆ.
* ವಿಜಾರಘಾವ್ ಘರ್ ಕ್ಷೇತ್ರದಲ್ಲಿ ಬಿಜೆಪಿಯ ಸಂಜಯ್ ಪಾಠಕ್ ಅವರು 28,684 ಮತಗಳ ಅಂತರರಿಂದ ಕಾಂಗ್ರೆಸ್ಸಿನ ಬ್ರಜೇಂದ್ರ ಮಿಶ್ರಾ ವಿರುದ್ಧ ಮುನ್ನಡೆ ಕಾಯ್ದುಕೊಂಡಿದ್ದಾರೆ.

English summary
Counting has begun for by-elections to 18 assembly seats in four states - Bihar, Karnataka, Madhya Pradesh and Punjab. This is being considered as the first major test of strength for the BJP since the Lok Sabha polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X