ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ ಕೋರ್ಟ್ ಆವರಣದಲ್ಲಿ ಬಾಂಬ್‌ ಸ್ಪೋಟ

By Ashwath
|
Google Oneindia Kannada News

ಫೈಜಾಬಾದ್: ಉತ್ತರ ಪ್ರದೇಶದಲ್ಲಿ ರಾಜಕೀಯ ಘರ್ಷ‌ಣೆ ವಿಪರೀತವಾಗತೊಡಗಿದ್ದು ಈಗ ಫೈಜಾಬಾದ್ ಕೋರ್ಟ್ ಆವರಣದಲ್ಲೇ ಕಚ್ಚಾ ಬಾಂಬ್‌ ಸ್ಪೋಟಿಸಿ ಕೊಲೆ ಮಾಡುವ ಮಟ್ಟಕ್ಕೆ ಹೋಗಿದೆ.

ಬಾಂಬ್‌ ದಾಳಿಯಿಂದ ಇಬ್ಬರು ಮೃತಪಟ್ಟಿದ್ದು ಹತ್ತಕ್ಕು ಹೆಚ್ಚುಜನ ಗಾಯಗೊಂಡಿದ್ದಾರೆ. ಬಿಜೆಪಿ ಸ್ಥಳೀಯ ನಾಯಕ ಸೋನು ಸಿಂಗ್ ಮತ್ತು ಆತನ ಸಹೋದರನ್ನು ಗುರಿಯಾಗಿಸಿ ಈ ಬಾಂಬ್‌ ದಾಳಿಯನ್ನು ನಡೆಸಿದ್ದು, ಕೃತ್ಯ ಎಸೆಗಿದ್ದ ವ್ಯಕ್ತಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

Uttar Pradesh
ಘಟನೆಯಲ್ಲಿ ಸೋನು ಸಿಂಗ್‌ಗೆ ಸಣ್ಣಪುಟ್ಟ ಗಾಯಗಳಾಗಿದೆ. ಕೋರ್ಟ್ ಆವರಣದಲ್ಲಿ ಹುದುಗಿಸಿದ್ದ ಮೂರು ಕಚ್ಚಾ ಬಾಂಬ್‌ಗಳನ್ನು ಪೊಲೀಸರು ಪತ್ತೆ ಮಾಡಿದ್ದು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಅಲಹಾಬಾದ್‌‌ನ ಜ್ಞಾನೇಶರ್‌ ಸ್ವಾಮೀಜಿಯ ಕೊಲೆ ಪ್ರಕರಣದ ಆರೋಪಿಗಳಾಗಿರುವ ಇಬ್ಬರು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸಮಾಜವಾದಿ ಪಕ್ಷದ ಮಾಜಿ ಶಾಸಕನಾಗಿರುವ ಸೋನು ಸಿಂಗ್‌ ಲೋಕಾಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ.

English summary
A BJP leader from Sultanpur in Uttar Pradesh and his brother were attacked with crude bombs at a court in Faizabad district today. Two persons have been killed while four others were injured after a blast followed by firing inside a Faizabad court in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X