ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಷರೀಫ್ ಭೇಟಿ ಮತ್ತು ವಿದೇಶಿ ಮಾಧ್ಯಮ

|
Google Oneindia Kannada News

ನವದೆಹಲಿ, ಮೇ 28: ಮಂಗಳವಾರ (ಮೇ 27) ಇಡೀ ವಿಶ್ವದ ಕಣ್ಣು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಭೇಟಿಯ ಮೇಲೆ ಕೇಂದ್ರೀಕೃತವಾಗಿತ್ತು. ಇಬ್ಬರು ನಾಯಕರ ಭೇಟಿಗೆ ವಿದೇಶಿ ಮಾಧ್ಯಮಗಳು ಹೆಚ್ಚಿನ ಒತ್ತು ನೀಡಿದ್ದವು.

ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಭೇಟಿಯಾದ ಇಬ್ಬರು ನಾಯಕರು ಸುಮಾರು 40 ನಿಮಿಷಗಳ ಕಾಲ ದ್ವಿಪಕ್ಷೀಯ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಸಿದರು.

ಪಾಕಿಸ್ತಾನದಲ್ಲಿ ಯಾವುದೇ ಸರಕಾರ ಬಂದರೂ ಪರಿಹಾರ ಕಾಣದ ಗಡಿ ನುಸುಳುವಿಕೆ, ಆಮೆಗತಿಯಲ್ಲಿ ಸಾಗುತ್ತಿರುವ ಮುಂಬೈ ದಾಳಿಯ ಉಗ್ರರ ವಿಚಾರಣೆ, ಎರಡು ರಾಷ್ಟ್ರಗಳ ನಡುವೆ ಮತ್ತೆ ಕ್ರಿಕೆಟ್ ಪಂದ್ಯ ಮುಂತಾದ ವಿಚಾರಗಳು ಮಾತುಕತೆಯ ಸಂದರ್ಭದಲ್ಲಿ ಪ್ರಸ್ತಾಪನೆಗೆ ಬಂತು ಎಂದು ವಿದೇಶಾಂಗ ಇಲಾಖೆಯ ಮೂಲಗಳು ತಿಳಿಸಿವೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಇಲಾಖೆಯ ಕಾರ್ಯದರ್ಶಿ ಸುಜಾತ ಸಿಂಗ್, ಪಾಕ್ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಅಹ್ಮದ್, ಪಾಕ್ ಪ್ರಧಾನಿಯ ವಿಶೇಷ ಕಾರ್ಯದರ್ಶಿ ಶತರಜ್ ಅಜೀಜ್ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಮೋದಿ ಮತ್ತು ಷರೀಫ್ ಭೇಟಿಯನ್ನು ವಿದೇಶಿ ಮಾಧ್ಯಮಗಳು ಯಾವ ರೀತಿ ವಿವರಿಸಿವೆ? ಸ್ಲೈಡಿನಲ್ಲಿ ನೋಡಿ....

ದಿ ನೇಶನ್ (ಪಾಕಿಸ್ತಾನ)

ನಮ್ಮ ಜೊತೆ ಇಂದು ಪಾಕ್ ಪ್ರಧಾನಿ ನವಾಬ್ ಷರೀಫ್ ಕೆಲವೊಂದು ಭಾವನಾತ್ಮಕ ಸನ್ನಿವೇಶಗಳನ್ನು ಹಂಚಿಕೊಂಡರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಅಲ್ ಜಜೀರಾ (ಕತಾರ್)

ಭಾರತದ ನೂತನ ಪ್ರಧಾನಿ ಮೋದಿ ಮತ್ತು ಪಾಕ್ ಪ್ರಧಾನಿ ಷರೀಫ್ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಸೌಹಾರ್ದಯುತ ಮಾತುಕತೆಗೆ ಮುಂದಾಗುವ ಮೂಲಕ ಹೊಸ ಶಕೆ ಆರಂಭ?

ವಾಷಿಂಗ್ಟನ್ ಪೋಸ್ಟ್ (ಅಮೆರಿಕಾ)

ವಾಷಿಂಗ್ಟನ್ ಪೋಸ್ಟ್ (ಅಮೆರಿಕಾ)

ಭಾರತದ ಪ್ರಧಾನಿಯಿಂದ ವಿರೋಧಿ ರಾಷ್ಟ್ರದ ಪ್ರಧಾನಿಯ ಭೇಟಿ. ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕಾರ ತೆಗೆದುಕೊಂಡ ಮರುದಿನವೇ ನೆರೆರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿದ ಮೋದಿ.

ದಿ ಡಾನ್ (ಪಾಕಿಸ್ತಾನ)

ದಿ ಡಾನ್ (ಪಾಕಿಸ್ತಾನ)

ಭರವಸೆ ಮತ್ತು ಕಾಶ್ಮೀರ - ಮೋದಿ ಪ್ರಮಾಣವಚನ ಕಾರ್ಯಕ್ರಮದ ಆಹ್ವಾನವನ್ನು ಷರೀಫ್ ಒಪ್ಪಿದ ನಂತರ ಪಿಓಕೆ ಭಾಗದಲ್ಲಿ ಮಾತುಕತೆಯ ಮೂಲಕ ಎರಡೂ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯ ಅಂತಿಮವಾಗುವ ಮುನ್ಸೂಚನೆ.

ದಿ ನ್ಯೂಯಾರ್ಕ್ ಟೈಮ್ಸ್ (ಅಮೆರಿಕಾ)

ದಿ ನ್ಯೂಯಾರ್ಕ್ ಟೈಮ್ಸ್ (ಅಮೆರಿಕಾ)

ಭಾರತ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಸಮಯದಲ್ಲಿ ಕಟ್ಟಲಾದ ಅದ್ಭುತ ಕಟ್ಟಡ, ಕಾರ್ಪೋರೇಟ್ ದಿಗ್ಗಜರು, ಬಾಲಿವುಡ್ ಕಲಾವಿದರು, ಕೇಸರಿ ಬಟ್ಟೆ ಧರಿಸಿದ ಸಂತರ ನಡುವೆ ಟೀ ಮಾರುವ ಹಿನ್ನಲೆಯ ನರೇಂದ್ರ ಮೋದಿಯಿಂದ ಪ್ರಮಾಣವಚನ.

ದಿ ಟ್ರಿಬ್ಯೂನ್ (ಪಾಕಿಸ್ತಾನ)

ದಿ ಟ್ರಿಬ್ಯೂನ್ (ಪಾಕಿಸ್ತಾನ)

ಮುಖ್ಯಮಂತ್ರಿಯಿಂದ ಪ್ರಧಾನಿಯವರೆಗೆ ಮೋದಿ ಬೆಳೆದು ಬಂದ ದಾರಿ ಅದ್ಭುತ. ಗುಜರಾತಿನಲ್ಲಿನ ತನ್ನ ಹದಿಮೂರು ವರ್ಷದ ಆಡಳಿತದಲ್ಲಿ ರಾಜಕೀಯಕ್ಕಿಂತ ಹೆಚ್ಚಾಗಿ ವಾಣಿಜ್ಯದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ ಮೋದಿ ದೇಶದ ಅಭಿವೃದ್ದಿಗೆ ಯಾವ ರೀತಿ ಮುಂದಾಗುತ್ತಾರೆಂದು ನೋಡಬೇಕಿದೆ.

ಡೈಲಿ ಮಿರರ್ (ಶ್ರೀಲಂಕಾ)

ಡೈಲಿ ಮಿರರ್ (ಶ್ರೀಲಂಕಾ)

ಮೋದಿ - ರಾಜಪಕ್ಷೆ ಮಾತುಕತೆ. ಎರಡು ರಾಷ್ಟ್ರಗಳ ನಡುವಿನ ಪರಿಹಾರ ಕಾಣಬೇಕಾಗಿರುವ ಸಮಸ್ಯೆಗಳು, ಪ್ರಮುಖವಾಗಿ ಮೀನುಗಾರರ ಸಮಸ್ಯೆಗೆ ಸೌಹಾರ್ದಯುತ ಪರಿಹಾರದ ಬಗ್ಗೆ ಮಾತುಕತೆ.

ಪ್ರಥೋಮ್ ಅಲೋ (ಬಾಂಗ್ಲಾದೇಶ)

ಪ್ರಥೋಮ್ ಅಲೋ (ಬಾಂಗ್ಲಾದೇಶ)

ಸಾರ್ಕ್ ದೇಶವನ್ನು ಆಹ್ವಾನಿಸುವ ಮೂಲಕ ನರೇಂದ್ರ ಮೋದಿ ಪ್ರಸಕ್ತ ರಾಜಕೀಯ ವ್ಯವಸ್ಥೆಗೆ ಒಂದು ಉದಾಹರಣೆಯಾಗಿದ್ದಾರೆ.

English summary
Foreign Media about Indian Prime Minister Narendra Modi and his counterpart Nawaz Sharif meeeting in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X