ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲವಂತ ಸಂಭೋಗ, ರೇಪ್ ಅಲ್ಲ: ಕೋರ್ಟ್

By Mahesh
|
Google Oneindia Kannada News

ನವದೆಹಲಿ,ಮೇ.13: ಕಾನೂನು ಪ್ರಕಾರ ಪತಿ ಪತ್ನಿಯಾಗಿ ಜೀವಿಸುತ್ತಿರುವ ದಂಪತಿ ನಡುವಿನ ಸಂಭೋಗಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತ್ನಿ ಮೇಲೆ ಪತಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ರೇಪ್ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಪತಿಯೊಬ್ಬ ತನ್ನ 21 ವರ್ಷ ವಯಸ್ಸಿನ ಪತ್ನಿಗೆ ಮತ್ತು ಬರುವ ಪಾನೀಯ ನೀಡಿ ನಂತರ ಆಕೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಹೊತ್ತು ಕಟಕಟೆಯಲ್ಲಿ ನಿಲ್ಲಬೇಕಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ತೀರ್ಪು ನೀಡಿದ್ದು, prosecutrix(ಯುವತಿ) ಪ್ರಜ್ಞಾವಸ್ಥೆಯಲ್ಲಿರುವಾಗಲೆ ಮದುವೆಯಾಗಿದ್ದು ಹಾಗೂ ತನ್ನ ಪತಿಯ ಜತೆ ವೈವಾಹಿಕ ಸಂಬಂಧಕ್ಕೆ ಸಿದ್ಧಳಾಗಿದ್ದು ಪತ್ತೆಯಾಗಿದೆ.

Forcible sexual relation between husband-wife not rape: Delhi court

ಗಾಜಿಯಾಬಾದಿನ ವಿವಾಹ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾ.4, 2013ರಂದು ವಿವಾಹವಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಇದರಂತೆ ಇಬ್ಬರ ನಡುವೆ ಒಪ್ಪಂದಕ್ಕೆ ತಕ್ಕಂತೆ ಸಂಬಂಧ ಏರ್ಪಟ್ಟಿದೆ ಇದರಲ್ಲಿ ಬಲವಂತ ಪಡಿಸುವ ಪ್ರಮೇಯ ಕಂಡು ಬಂದಿಲ್ಲ ಎಂದಿದೆ.

ಪತಿ ಹಾಗೂ ಪತ್ನಿ ಇಬ್ಬರು ಕಾನೂನಿನ ಪ್ರಕಾರ ಮದುವೆಯಾಗಿದ್ದು, ಇಬ್ಬರ ನಡುವೆ ಸಂಭೋಗ ಬಲವಂತವಾಗಿ ನಡೆದರೂ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಹಾಗೂ ಪತಿಯ ಮೇಲೆ ಆರೋಪ ಹೊರೆಸಲು ಬರುವುದಿಲ್ಲ ಎಂದು ಹೆಚ್ಚುವರಿ ಸೆಷನ್ಸ್ ನ್ಯಾ. ವೀರೇಂದರ್ ಭಟ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಈ ಆದೇಶದಿಂದ ಪತಿ ವಿರುದ್ಧ ಅತ್ಯಾಚಾರ ಎಸಗಿದ ಆರೋಪ ಹೊರೆಸಿದ್ದ ಯುವತಿಗೆ ಪ್ರಕರಣದಲ್ಲಿ ಹಿನ್ನಡೆಯಾಗಿದೆ. ಉತ್ತರಪ್ರದೇಶದ ನಿವಾಸಿ ಯುವತಿ ಕೋಚಿಂಗ್ ಸೆಂಟರ್ ವೊಂದರಲ್ಲಿ ಆರೋಪಿ ಯುವಕನಿಂದ ಅತ್ಯಾಚಾರಕ್ಕೊಳಗಾದೆ ಎಂದು ಕೂಡಾ ಆರೋಪಿಸಿದ್ದಳು. ಆದರೆ, ಆ ಬಗ್ಗೆ ಪೊಲೀಸರಿಗೆ ಸಾಕ್ಷಿ ಸಿಕ್ಕಿಲ್ಲ. ನಾನು ಪ್ರಜ್ಞೆ ತಪ್ಪಿದ ಸಮಯದಲಿ ಮದುವೆ ದಾಖಲಾತಿಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಕೂಡಾ ಯುವತಿ ಆರೋಪಿಸಿದ್ದಾಳೆ.

ಈ ಘಟನೆ ನಂತರ ಅನೇಕ ಬಾರಿ ಅನೈಸರ್ಗಿಕ ರೀತಿಯಲ್ಲಿ ನನ್ನ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿದ್ದಾಳೆ. ಅದರೆ, ಸೂಕ್ತ ಸಾಕ್ಷಿ ಆಧಾರದ ಕೊರತೆಯಿಂದಾಗಿ ಆಕೆಯ ದೂರನ್ನು ಕೋರ್ಟ್ ತಳ್ಳಿ ಹಾಕಿದೆ. (ಪಿಟಿಐ)

English summary
Sexual relations between a legally wedded husband and wife, "even if forcible, is not rape", a Delhi court said while acquitting a youth who was accused of marrying a 21-year-old girl after serving her a sedative-laced drink and raping her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X