ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲಿರುವ ಫ್ಲಿಪ್‌ಕಾರ್ಟ್‌

By Ashwath
|
Google Oneindia Kannada News

ಬೆಂಗಳೂರು,ಜು.23: ಇ ಶಾಪಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಫ್ಲಿಪ್‌‌ಕಾರ್ಟ್ ತನ್ನ ಸಾಮರ್ಥ್ಯ ವಿಸ್ತರಣೆಗಾಗಿ ಹೆಚ್ಚುವರಿಯಾಗಿ ಒಂದು ಶತಕೋಟಿ ಡಾಲರ್‌ (ಅಂದಾಜು 6 ಸಾವಿರ ಕೋಟಿ ರೂ.) ಬಂಡವಾಳ ಸಂಗ್ರಹಿಸಲು ಮುಂದಾಗಿದೆ.

ಭಾರತದ ಇ ಕಾಮರ್ಸ್‌ ಕ್ಷೇತ್ರದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಸಂಗ್ರಹಿಸಲು ಫ್ಲಿಪ್‌ಕಾರ್ಟ್‌‌ ಮುಂದಾಗುತ್ತಿದೆ.

ಈಗಾಗಲೇ ಫ್ಲಿಪ್‌ಕಾರ್ಟ್‌‌ನಲ್ಲಿ ಬಂಡವಾಳ ಹಾಕಿರುವ ಟೈಗರ್‌ ಗ್ಲೋಬಲ್‌ ಮತ್ತು ಎಸೆಲ್‌ ಪಾರ್ಟ್‌ನರ್ಸ್‌ ಅರ್ಧದಷ್ಟು ಬಂಡವಾಳವನ್ನು ಹೂಡಲಿದ್ದು, ಉಳಿದಂತೆ ಇತರೆ ಹೊಸ ಹೂಡಿಕೆದಾರರು ಬಂಡವಾಳ ಹೂಡಲಿದ್ದಾರೆ ಎಂದು ಹೇಳಲಾಗುತ್ತಿದೆ.[ಆನ್‌‌ಲೈನ್‌ ಶಾಂಪಿಂಗ್ ಸಂಸ್ಥೆಯಲ್ಲಿ 12 ಸಾವಿರ ನೇಮಕಾತಿ]

flipkart

ಈಗಾಗಲೇ ಈ ಎಲ್ಲಾ ಕಂಪೆನಿಗಳ ಜೊತೆ ಮಾತುಕತೆ ನಡೆದಿದ್ದು, ಒಂದು ಅಥವಾ ಎರಡು ವಾರದೊಳಗೆ ಒಪ್ಪಂದಗಳ ಮಾಹಿತಿಯನ್ನು ಅಧಿಕೃತವಾಗಿ ಫ್ಲಿಪ್‌ಕಾರ್ಟ್‌‌ ಘೋಷಿಸುವ ಸಾಧ್ಯತೆಯಿದೆ.

ದೇಶದಲ್ಲಿ ಇ ಕಾಮರ್ಸ್‌ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು, ವಿದೇಶದ ಅಮೇಜಾನ್‌ ಮತ್ತು ದೇಶೀಯ ಸ್ನಾಪ್‌ಡೀಲ್‌ ಕಂಪೆನಿಗೆ ಸ್ಪರ್ಧೆ‌ ನೀಡಲು ದೊಡ್ಡ ಪ್ರಮಾಣದದಲ್ಲಿ ಬಂಡವಾಳ ಸಂಗ್ರಹಿಸಲು ಫ್ಲಿಪ್‌ಕಾರ್ಟ್‌ ಮುಂದಾಗಿದೆ.

ಎಲೆಕ್ಟ್ರಾನಿಕ್ಸ್‌, ಪುಸ್ತಕ, ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಫ್ಲಿಪ್‌ಕಾರ್ಟ್ ಮೇ ತಿಂಗಳಿನಲ್ಲಿ ಸಿದ್ದ ಉಡುಪುಗಳನ್ನು ಮಾರಾಟ ಮಾಡುವ ಮಿಂಟ್ರಾ.ಕಾಂನ್ನು ಮೂರು ಶತಕೋಟಿ ಡಾಲರ್‌ ನೀಡಿ ಖರೀದಿಸಿತ್ತು.[ಆನ್‌ಲೈನ್ ಶಾಪಿಂಗ್‌‌‌ನಲ್ಲಿ ಫ್ಲಿಪ್ ಕಾರ್ಟ್ ಭರ್ಜರಿ ಡೀಲ್]

English summary
Flipkart will announce possibly as early as next week that it has raised over $1 billion (Rs 6,000 crore), the biggest ever fund-raising by an Indian e-commerce company, two people aware of the development said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X