ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿರಾ ಹತ್ಯೆ ಕುರಿತ 'ಫಿಲಂ' ನಿಷೇಧಕ್ಕೆ ಆಗ್ರಹ

By Mahesh
|
Google Oneindia Kannada News

ಪಟಿಯಾಲಾ, ಆ.19: ಮಾಜಿ ಪ್ರಧಾನಿ ಇಂದಿರಾಗಾಂಧಿ ಹಂತಕರನ್ನು 'ನಮ್ಮ ಸಮುದಾಯದ ವಜ್ರಗಳು' ಎಂದು ಬಣ್ಣಿಸಿರುವ ಪಂಜಾಬಿ ಚಲನಚಿತ್ರ ಈ ವಾರ ತೆರೆ ಕಾಣಲು ಸಿದ್ಧವಾಗಿದೆ. ಇಂದಿರಾ ಗಾಂಧಿ ಅವರ ಜೀವನ ಚರಿತ್ರೆ ತಿರುಚುವ ಈ ಚಿತ್ರ ಬಿಡುಗಡೆಯಾಗದಂತೆ ತಡೆಯಲು ಭಾರತದ ಅತ್ಯಂತ ಹಳೆ ರಾಜಕೀಯ ಪಕ್ಷ ಕಾಂಗ್ರೆಸ್ ಯತ್ನಿಸುತ್ತಿದೆ. ಈ ವಿಷಯದಲ್ಲಿ ರಾಜಕೀಯ ಬೇಡ ಎನ್ನುತ್ತಾ ಬಿಜೆಪಿ ಕೂಡಾ ಕೈ ಜೋಡಿಸಿದೆ.

ಇಂದಿರಾ ಗಾಂಧಿ ಅವರ ಬಾಡಿಗಾರ್ಡ್ ಗಳಾಗಿದ್ದ ಸತ್ವಂತ್ ಸಿಂಗ್ ಹಾಗೂ ಬಿಯಾಂತ್ ಸಿಂಗ್ ಅವರನ್ನು ಪಂಜಾಬಿ ಚಿತ್ರವೊಂದರಲ್ಲಿ ಹಾಡಿ ಹೊಗಳಲಾಗಿದೆ. ಕೌಮ್ ದೆ ಹೀರೆ ಎಂಬ ಚಿತ್ರದಲ್ಲಿ ಇಬ್ಬರು ಬಾಡಿಗಾರ್ಡ್ ಗಳನ್ನು ಹೊಗಳಿ ಅಕ್ಟೋಬರ್ 31, 1984ರಂದು ಇಂದಿರಾಗಾಂಧಿ ಹತ್ಯೆ ಮಾಡಿದ್ದು ಉನ್ನತ ಕಾರ್ಯ ಎನ್ನಲಾಗಿದೆ. ಈ ಚಿತ್ರದ ಕಥೆ ಆಪರೇಷನ್ ಬ್ಲೂಸ್ಟಾರ್ ನಿಂದ ಆರಂಭವಾಗಿ ಸತ್ವಂತ್ ಸಿಂಗ್ ನೇಣುಗಂಬ ಏರುವ ತನಕ ಸಾಗುತ್ತದೆ.['ಇಂದಿರಾ ಗಾಂಧಿಗೆ ಮಾರಕ ಕ್ಯಾನ್ಸರ್ ಇತ್ತು']

Film on Indira killers faces protests in Punjab; Cong, BJP demand ban

ಈ ಚಿತ್ರದ ಬಿಡುಗಡೆಗೆ ನಿರ್ಬಂಧ, ನಿಷೇಧ ಹೇರದಿದ್ದರೆ ಪಂಜಾಬಿನಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಪಕ್ಷ ಹೇಳಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಪಂಜಾಬಿನ ಬಿಜೆಪಿ ಮುಖಂಡರು ಕೂಡಾ ಕಾಂಗ್ರೆಸ್ ಪತ್ರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಗೃಹ ಕಾರ್ಯದರ್ಶಿಗೆ ಸೂಚನೆ ನೀಡಿದ್ದು, ಚಿತ್ರದಿಂದ ಎದ್ದಿರುವ ವಿವಾದದ ಬಗ್ಗೆ ಮಾಹಿತಿ ಕೇಳಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ. ಅದರೆ, ಸೆನ್ಸಾರ್ ಮಂಡಳಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಲಾಗಿದ್ದು, ಚಿತ್ರದ ಬಿಡುಗಡೆ ಬಗ್ಗೆ ಅಂತಿಮ ನಿರ್ಣಯ ಇನ್ನೂ ಹೊರಬಿದ್ದಿಲ್ಲ.[ಇತಿಹಾಸದಿಂದ ಆಯ್ದ 12 ಪುಟಗಳು]

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ನಂತರ ಸುಮಾರು 3,000ಕ್ಕೂ ಅಧಿಕ ಸಿಖ್ಖರನ್ನು ದೆಹಲಿಯಲ್ಲಿ ಕೊಲ್ಲಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್ ಟೈಟ್ಲರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಆರೋಪ ಹೊತ್ತಿದ್ದರು. ಇಂಥ ಚಿತ್ರಗಳಿಂದ ಸಮಾಜದ ಶಾಂತಿ ಹಾಳಾಗುತ್ತದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಲಕ್ಷ್ಮಿಕಾಂತ್ ಚಾವ್ಲಾ ಹೇಳಿದ್ದಾರೆ. ಅದರೆ, ಕಳೆದ ವರ್ಷ ಈ ಇಬ್ಬರು ಬಾಡಿಗಾರ್ಡ್ ಗಳನ್ನು ಹುತಾತ್ಮರು ಎಂದು ಪರಿಗಣಿಸಿ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಸಂಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದನ್ನು ಮರೆಯುವಂತಿಲ್ಲ.

English summary
The Congress party is up in the arms against a new Punjabi film on former Prime Minister Indira Gandhi's assassins, Satwant Singh and Beant Singh. The grand old party has been demanding a ban on the film ahead of its release this Friday, said a NDTV report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X