ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಹೆಚ್ಚು ಬಳಕೆಯ ಅಪ್ಲಿಕೇಶನ್‌ ಯಾವುದು ಗೊತ್ತೆ?

|
Google Oneindia Kannada News

ನ್ಯೂಯಾರ್ಕ್, ಆ. 26 : ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮತ್ತೊಂದು ದಾಖಲೆ ನಿರ್ಮಿಸಿದೆ. ವಿಶ್ವದಲ್ಲೇ ಅತಿಹೆಚ್ಚು ಜನ ಬಳಸುವ ಅಪ್ಲಿಕೇಷನ್‌ ಎಂಬ ಹೆಗ್ಗಳಿಕೆ ಫೇಸ್‌ಬುಕ್‌ಗೆ ದೊರೆತಿದೆ.

ಆದರೆ ಗೂಗಲ್‌ ಮತ್ತು ಆಪಲ್‌ನಲ್ಲಿ ಲಭ್ಯವಿರುವ ಎರಡು ಮಿಲಿಯನ್‌ಗಿಂತಲೂ ಹೆಚ್ಚಿನ ಅಪ್ಲಿಕೇಷನ್‌ಗಳಲ್ಲಿ ಮೊದಲನೇ ಹತ್ತು ಸ್ಥಾನದ ಮೇಲೆ ಗೂಗಲ್‌ ಸಾರ್ವಭೌಮತ್ವ ಸಾಧಿಸಿದೆ.

face book

ಮೊದಲನೇ ಸ್ಥಾನದಲ್ಲಿರುವ ಫೇಸ್‌ಬುಕ್‌ ಅನ್ನು ಪ್ರತಿ ತಿಂಗಳು 115 ಮಿಲಿಯನ್‌ ಜನ ಬಳಸುತ್ತಾರೆ. ಎರಡನೇ ಸ್ಥಾನ ಯು ಟ್ಯೂಬ್‌ಗೆ ಮೀಸಲಿದ್ದು 83.5 ಮಿಲಿಯನ್‌ ಜನ ಬಳಸುತ್ತಿದ್ದಾರೆ ಎಂದು ಯುಎಸ್‌ನ ಅಂತರ್ಜಾಲ ಸಂಶೋಧಕ ಕಂಪನಿ ಕಾಮ್‌ಸ್ಕೋರ್‌ ಹೇಳಿದೆ. ಜನರು ಅಂತರ್ಜಾಲ ತಾಣದಕ್ಕಿಂತಲೂ ಹೆಚ್ಚಿನ ಸಮಯವನ್ನು ಅಪ್ಲಿಕೇಷನ್‌ಗಳ ಬಳಕೆಯಲ್ಲಿ ಕಳೆಯುತ್ತಾರೆ ಎಂದು ವಿವರಿಸಿದೆ.

ಮೂರನೇ ಸ್ಥಾನವನ್ನು ಗೂಗಲ್‌ ಪ್ಲೆ ಅಪ್ಲಿಕೇಷನ್‌ ಪಡೆದುಕೊಂಡಿದ್ದು 72 ಮಿಲಿಯನ್‌ ಬಳಕೆದಾರರನ್ನು ಹೊಂದಿದೆ. ನಾಲ್ಕನೇ ಸ್ಥಾನ ಪಡೆದಿರುವ ಗೂಗಲ್‌ ಸರ್ಚ್ 70 ಮಿಲಿಯನ್‌ ಜನರಿಗೆ ಇಷ್ಟವಾಗುತ್ತಿದೆ.

69 ಮಿಲಿಯನ್‌ ಜನ ಬಳಸುವ ಆನ್‌ಲೈನ್‌ ರೇಡಿಯೋ ಸೇವೆ ಪನ್‌ಡೋರಾ ಐದನೇ ಸ್ಥಾನ ಅಲಂಕರಿಸಿದೆ. ಅದರಂತೆ ಆರನೇ ಸ್ಥಾನ ಗೂಗಲ್‌ ಮ್ಯಾಪ್‌ಗೆ ದಕ್ಕಿದ್ದು 64.5 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ನಾವೆಲ್ಲ ಅತಿಹೆಚ್ಚು ಬಳಸುತ್ತಾರೆ ಎಂದುಕೊಂಡಿರುವ ಜಿ ಮೇಲ್‌ ಏಳನೇ ಸ್ಥಾನ ಪಡೆದುಕೊಂಡಿದ್ದು 60 ಮಿಲಿಯನ್‌ ಜನರಿಗೆ ಪ್ರೀತಿಯಾಗಿದೆ. ಫೇಸ್‌ಬುಕ್‌ ಒಡೆತನದ ಫೋಟೊ ಹಂಚುವ ಅಪ್ಲಿಕೇಷನ್‌ 46.6 ಮಿಲಿಯನ್‌ ಜನರಿಗೆ ಇಷ್ಟವಾಗಿದ್ದು ಎಂಟನೇ ಸ್ಥಾನ ಪಡೆದುಕೊಂಡಿದೆ.

English summary
Social networking website Facebook is the most used app, but Google apps dominate the top 10 slots when it comes to selecting from over two million apps available in the Apple and Google stores. Topping the app list is Facebook, being used by 115 million people monthly while Google-owned YouTube comes second with 83.4 million users, said a new study from ComScore, a US internet analytics company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X