ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ, ಅಡ್ವಾಣಿ, ಮಹಾಜನರ ಸಂಗಮ ಮೋದಿ!

By Srinath
|
Google Oneindia Kannada News

ನವದೆಹಲಿ, ಮೇ 13: ಲೋಕಸಭಾ ಚುನಾವಣೆ ಸಮರ ಮುಗಿದಿದ್ದು, ಇದೀಗ ಎಕ್ಸಿಟ್ ಪೋಲುಗಳ ಕಾರುಬಾರು ಸಮಯ. ಎಕ್ಸಿಟ್ ಪೋಲುಗಳು ಈ ಬಾರಿಯೂ ಬಿಜೆಪಿ ನೇತೃತ್ವದ ಎನ್ ಡಿಎಗೆ ಮಣೆ ಹಾಕಿದೆ. ಇದನ್ನು ಸ್ವಾಗತಿಸಿರುವ ರಾಷ್ಟ್ರೀಯ ಲೋಕ ದಳದ ಅಭ್ಯರ್ಥಿ ಅಮರ್ ಸಿಂಗ್ ಜನರ ತೀರ್ಪಿಗೆ ತಾವು ತಲೆ ಬಾಗುವುದಾಗಿ ಹೇಳಿದ್ದಾರೆ.

ಅಮರ್ ಸಿಂಗ್ ಅವರು ಉತ್ತರ ಪ್ರದೇಶದ ಫತೇಪುರ ಸಿಕ್ರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. (ಮೇ ಹದಿನಾರರ ನಂತರ ಗುಜರಾತ್ ಮುಖ್ಯಮಂತ್ರಿ ಯಾರು?)

ಬಿಜೆಪಿಯ ಪ್ರಧಾನಿ ಆಕಾಂಕ್ಷಿ ನರೇಂದ್ರ ಮೋದಿ ಅವರ ಬಗ್ಗೆ ಪ್ರಸ್ತಾಪಿಸಿದ ಅಮರ್ ಸಿಂಗ್ ಅವರು ಬಿಜೆಪಿಯ ಹಿರಿಯ ನಾಯಕರುಗಳಾದ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ಮತ್ತು ದಿವಂಗತ ಪ್ರಮೋದ್ ಮಹಾಜನ್ ಅವರ ಗುಣಲಕ್ಷಣಗಳನ್ನು ಹೊಂದಿದ್ದಾರೆ ಎಂದು ಬಣ್ಣಿಸಿದ್ದಾರೆ.

Narendra Modi glimpse of Vajpayee LK Advani Pramod Mahajan says Amar Singh

ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಈ ಬಾರಿ ಮೋದಿ ಸಾರಥ್ಯದಲ್ಲಿ ಅಧಿಕಾರಕ್ಕೆ ಮರಳಲಿದೆ. ತೀವ್ರ ಜಿದ್ದಾ ಜಿದ್ದಿನಿಂದ ಕೂಡಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ದಶಕದ ಆಡಳಿತ ಕೊನೆಗಾಣಲಿದೆ ಎಂದು ಎಕ್ಸಿಟ್ ಪೋಲ್ ಗಳು ನಿನ್ನೆ ಸಂಜೆಯಿಂದ ಒಂದೇ ಸಮನೆ ಹೇಳುತ್ತಿವೆ.

545 ಸದಸ್ಯರ ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವು 272-289 ಸ್ಥಾನಗಳನ್ನು ಗಳಿಸಲಿದೆ ಎಂದು ನಾಲ್ಕು ಎಕ್ಸಿಟ್ ಪೋಲುಗಳ ಪೈಕಿ ಮೂರು ಹೇಳಿವೆ. ಆದರೆ ಮೇ 16ರಂದು ಅಧಿಕೃತ ಫಲಿತಾಂಶ ಹೊರಬೀಳಲಿದೆ.

ಅತ್ಯಂತ ವಿಶ್ವಾಸದಿಂದ ಚುನಾವಣೆ ಪ್ರಚಾರ ಕಾರ್ಯವನ್ನು ಮುಗಿಸಿದ ಬಿಜೆಪಿಯ ಪ್ರಧಾನಿ ಆಕಾಂಕ್ಷಿ ನರೇಂದ್ರ ಮೋದಿ ಅವರು 'ಭಾರತ ಗೆದ್ದಿದೆ; ಮತದಾನದ ಶಕ್ತಿ ಜಯಭೇರಿಯಾಗಿದೆ' ಎಂದು ನಿನ್ನೆ ಟ್ವೀಟ್ ಮಾಡಿದ್ದರು.

English summary
Lok Sabha election 2014 - Exit polls 2014: Narendra Modi glimpse of (former PM) Atal Bihari Vajpayee, LK Advani, and slain leader Pramod Mahajan said Rashtriya Lok Dal candidate Amar Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X