ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಟ್ ಫಂಡ್ ವಂಚನೆ: ಅಪರ್ಣಾ ಸೇನ್ ವಿಚಾರಣೆ

By Mahesh
|
Google Oneindia Kannada News

ಕೋಲ್ಕತ್ತಾ, ಆ.18: - ಬಹುಕೋಟಿ ಶಾರದಾ ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ ಪ್ರಶಸ್ತಿ ವಿಜೇತೆ, ನಿರ್ದೇಶಕಿ ಅಪರ್ಣಾ ಸೇನ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೊಳಪಡಿಸಿದೆ.

ಕೋಲ್ಕತ್ತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಬೆಳಗ್ಗೆ 11ರ ವೇಳೆಗೆ ಅಪರ್ಣಾ ಸೇನ್ ಅವರು ಹಾಜರಾಗಿದ್ದರು. ಚಿಟ್ ಫಂಡ್ ಮುಖ್ಯಸ್ಥ ಸುದೀಪ್ತೋ ಸೇನ್ ಅವರಿಗೆ ಅಪರ್ಣಾ ಅವರು ತಮ್ಮ ಮ್ಯಾಗಜೀನ್ ಪರಮ ದಲ್ಲಿ ಭಾರಿ ಪ್ರಚಾರ ನೀಡಿದ್ದರು.

ಇದೇ ಸಂದರ್ಭದಲ್ಲಿ ಹಗರಣದಲ್ಲಿ ಭಾಗಿಯಾಗಿರುವ ರಾಜ್ಯ ಜವಳಿ ಸಚಿವ ಶ್ಯಾಮ್‍ಪಾದ ಮುಖರ್ಜಿ ಅವರನ್ನೂ ವಿಚಾರಣೆಗೊಳಪಡಿಸುವ ಸಂಭವವಿದೆ. 2009ರಲ್ಲಿ ನಡೆದ ಶಾರದಾ ಚಿಟ್‍ಫಂಡ್ ಹಗರಣದಲ್ಲಿ ತಮ್ಮದೇನೂ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವ ಶ್ಯಾಮ್‍ಪಾದ ಮುಖರ್ಜಿ, ಶಾರದಾ ಚಿಟ್ ಫಂಡ್ ಸಮೂಹಕ್ಕೆ ನನಗೆ ಸೇರಿದ್ದ ಕೊಂಚ ಭೂಮಿಯನ್ನು ಮಾರಾಟ ಮಾಡಿದ್ದೇನಷ್ಟೆ ಎಂದು ಸಮರ್ಥಿಸಿಕೊಂಡಿದ್ದಾರೆ.

ED questions Aparna Sen in connection with Saradha chit-fund scam

ಶಾರದಾ ಸಮೂಹ ಕಳೆದ ಹಲವಾರು ವರ್ಷಗಳಿಂದ ಹಲವು ಹಂತದ ಚಿಟ್‍ಫಂಡ್ ವ್ಯವಹಾರ ನಡೆಸುತ್ತಿದ್ದು, ಕಳೆದ ಏಪ್ರಿಲ್‍ನಲ್ಲಿ ದಿವಾಳಿಯಾಗಿತ್ತು. ಇದರಿಂದ ಸಾವಿರಾರು ಸಣ್ಣ ಹೂಡಿಕೆದಾರರು ತಮ್ಮ ಉಳಿತಾಯದ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣದಲ್ಲಿ ಸುದೀಪ್ತೋ ಸೇನ್ ಅವರ ಪತ್ನಿ ಪಿಯಾಲಿ ಸೇನ್ ಗೆ ಜಾಮೀನು ದೊರೆತಿದೆ.

ಅದರೆ, ಮಗ ಸುಭೋಜಿತ್ ಸೇನ್ ಗೆ ಜಾಮೀನು ಸಿಕ್ಕಿಲ್ಲ. ಜು.24ರಂದು ತೃಣಮೂಲ ಕಾಂಗ್ರೆಸ್ ಸಂಸದ ಮಿಥುನ್ ಚಕ್ರವರ್ತಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ಮಾಡಿತ್ತು. ಇದಕ್ಕೂ ಮುನ್ನ ಬಿಜೆಡಿ ಶಾಸಕ ಪ್ರವತಾ ತ್ರಿಪಾಠಿ ಅವರ ಕಚೇರಿ ಸೇರಿದಂತೆ 60ಕ್ಕೂ ಅಧಿಕ ತಾಣಗಳ ಮೇಲೆ ಸಿಬಿಐ ಇತ್ತೀಚೆಗೆ ದಾಳಿ ನಡೆಸಿತ್ತು.

English summary
The Enforcement Directorate (ED) on Monday questioned yesteryear actor Aparna Sen in connection with its probe in the Saradha chit fund scam case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X