ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿರಂಗಿ ಖರೀದಿಸಲು ಮುಂದಾದ ಮೋದಿ ಸರ್ಕಾರ

By Mahesh
|
Google Oneindia Kannada News

ನವದೆಹಲಿ, ನ.23: ಸುಮಾರು 28 ವರ್ಷಗಳ ಬಳಿಕ ಭಾರತ, ಫಿರಂಗಿ ಶಸ್ತ್ರಾಸ್ತ್ರಗಳ ಖರೀದಿಗೆ ಮುಂದಾಗಿದೆ. ಈ ಕುರಿತಂತೆ ರಕ್ಷಣಾ ಸಚಿವ ಮನೋಹರ್ ಪಾರಿಕ್ಕಾರ್ ಅವರು ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ.

1986ರಲ್ಲಿ ಬೋಫೋರ್ಸ್ ಫಿರಂಗಿ ಖರೀದಿ ಹಗರಣದ ಬೆಳಕಿಗೆ ಬಂದ ಬಳಿಕ ಫಿರಂಗಿ ಖರೀದಿಸುವ ಧೈರ್ಯ ಮಾಡದ ಭಾರತ ಸರ್ಕಾರ ಈಗ ಶಸ್ತ್ರಾಸ್ತ್ರಗಳ ಖರೀದಿಗೆ ಭಾರಿ ಹೂಡಿಕೆ ಮಾಡುತ್ತಿದೆ. ರಕ್ಷಣಾ ಖರೀದಿ ಮಂಡಳಿ ಸಭೆಯಲ್ಲಿ 15,750ಕೋಟಿ ರೂ. ವೆಚ್ಚದಲ್ಲಿ 155 ಎಂಎಂ/52 ಮಾದರಿಯ 814 ಫಿರಂಗಿಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.

Defence Minister Manohar Parrikar clears purchase of 814 artillery guns

ಈ ಕುರಿತು ಶೀಘ್ರವೇ ಜಾಗತಿಕ ಟೆಂಡರ್‌ ಆಹ್ವಾನಿಸಲಾಗುವುದು. ಒಂದು ವೇಳೆ ವಿದೇಶಿ ಕಂಪನಿ ಗುತ್ತಿಗೆ ಪಡೆದರೆ ಅದು ತನ್ನ ದೇಶದಲ್ಲಿ ತಯಾರಿಸಿದ 100 ಫಿರಂಗಿಗಳನ್ನು ಆದಷ್ಟು ಶೀಘ್ರ ಭಾರತಕ್ಕೆ ಹಸ್ತಾಂತರಿಸಬೇಕು, ಉಳಿದ ಫಿರಂಗಿಗಳನ್ನು ಭಾರತದ ಯಾವುದಾದರೂ ಒಂದು ಕಂಪನಿಯ ಜೊತೆಗೆ ಸಹಯೋಗ ಮಾಡಿಕೊಂಡು, ಭಾರತದಲ್ಲೇ ತಯಾರಿಸಬೇಕು ಎಂಬ ಬೈ ಅಂಡ್ ಮೇಕ್ ಯೋಜನೆಯಡಿ ನಿಬಂಧನೆಯನ್ನು ಹಾಕಲಾಗಿದೆ.

ಎಲ್‌ ಅಂಡ್ ಟಿ, ಟಾಟಾ, ಭಾರತ್‌ ಫೋರ್ಜ್‌ ಕೂಡಾ ಈ ಟೆಂಡರ್‌ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಬೋಫೋರ್ಸ್‌ ಹಗರಣ ಬೆಳಕಿಗೆ ಬಂದ ನಂತರ ಭಾರತ ಒಂದೂ ಫಿರಂಗಿ ಖರೀದಿಸಿರಲಿಲ್ಲ. ನಂತರ 1999ರಲ್ಲಿ ನಡೆದ ಖರೀದಿ ಯತ್ನಗಳು ವಿಫ‌ಲವಾಗಿದ್ದವು. 100 ಫಿರಂಗಿಗಳನ್ನು ವಿದೇಶದಿಂದ ಖರೀದಿಸಿ ಮಿಕ್ಕ 714 ಫಿರಂಗಿಗಳನ್ನು ಭಾರತದಲ್ಲೇ ಉತ್ಪಾದಿಸಲಾಗುತ್ತದೆ. ಇದಕ್ಕಾಗಿ ವಿದೇಶಿ ಕಂಪನಿಗಳ ತಾಂತ್ರಿಕ ಸಹಾಯ ಪಡೆಯಲಾಗುತ್ತದೆ.

ಇದೇ ವೇಳೆ 56 ಸರಕು ಸಾಗಣೆ ವಿಮಾನಗಳನ್ನು ಪೂರೈಸುವ ಕುರಿತು ಟಾಟಾ ಸನ್ಸ್‌ ಮತ್ತು ಯುರೋಪ್‌ನ ಏರ್‌ಬಸ್‌ ಸಲ್ಲಿಸಿದ್ದ ಪ್ರಸ್ತಾವನೆಯ ಕುರಿತು ಮಂಡಳಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಹಾಗೂ ಇದೇ ರೀತಿ 8200 ಕೋಟಿ ರೂ. ವೆಚ್ಚದಲ್ಲಿ ಸ್ವಿಜರ್ಲೆಂಡ್‌ನಿಂದ 106 ತರಬೇತಿ ವಿಮಾನ ಖರೀದಿ ಪ್ರಕ್ರಿಯೆಯನ್ನೂ ಮುಂದೂಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

English summary
The Defence Acquisition Council (DAC), under new Defence Minister Manohar Parrikar, on Saturday cleared a proposal to procure 814 mounted-gun systems for the artillery arm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X