ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿನ ಟ್ರ್ಯಾಕ್ : ಗತ ವರ್ಷ ಕಂಡ ರೈಲು ಅಪಘಾತಗಳು

By Mahesh
|
Google Oneindia Kannada News

ಬೆಂಗಳೂರು, ಜ.8: ದೇಶದ ಸಾರಿಗೆ ವ್ಯವಸ್ಥೆಯ ಜೀವನಾಡಿಯಾಗಿವ ರೈಲಿನಲ್ಲಿ ನಿರ್ಭಯವಾಗಿ ಸಂಚರಿಸಲು ಸಾರ್ವಜನಿಕರು ಹೆದರುವಂತಾಗಿದೆ. ಕಳೆದ ವರ್ಷ ದೇಶ ಕಂಡ ಆರೇಳು ರೈಲು ದುರಂತಗಳ ಸಾಲಿಗೆ ಮುಂಬೈ -ಡೆಡ್ರಾಡೂನ್ ರೈಲು ದುರಂತ ಕೂಡಾ ಸೇರ್ಪಡೆಗೊಂಡಿದೆ.

ಮಹಾರಾಷ್ಟ್ರದ ಥಾಣೆ ಬಳಿ ಇಂದು ಬೆಳಗಿನ 3.30ರ ಸುಮಾರಿಗೆ ಬಾಂದ್ರಾ-ಡೆಹ್ರಾಡೂನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 9 ಪ್ರಯಾಣಿಕರು ಸಜೀವ ದಹನವಾಗಿದ್ದು, 20ಕ್ಕು ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರೈಲು ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರುಪಾಯಿ ಪರಿಹಾರ ಘೋಷಿಸಲಾಗಿದೆ. ಸ್ಥಳಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ರೈಲು ದುರಂತಕ್ಕೆ ಇನ್ನು ನಿಖರವಾದ ಕಾರಣ ತಿಳಿದು ಬಂದಿಲ್ಲ.

ರಸ್ತೆ ಮಾರ್ಗಗಳಲ್ಲಿ ರೈಲು ಹಳಿ ಹಾದು ಹೋಗುವುದು, ನಾಗರಿಕರಿಗೆ ರೈಲು ಹಾದು ಹೋಗುವ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಇರುವುದು, ಹಳಿಗಳ ಗುಣಮಟ್ಟ, ಸಿಗ್ನಲ್ ವ್ಯವಸ್ಥೆ, ಸಿಬ್ಬಂದಿಗಳ ನಿರ್ಲಕ್ಷ್ಯತನ ಇತ್ಯಾದಿ ಲೋಪದೋಷಗಳನ್ನು ಸರಿ ಪಡಿಸಲು ಅಧಿಕಾರಿಗಳು ರೈಲ್ವೆ ಸಚಿವಾಲಯಕ್ಕೆ ಒತ್ತಡ ಹೇರದೇ ಇರುವುದರಿಂದ ಅಪಘಾತ ಹೆಚ್ಚಾಗಿ ನಡೆಯುತ್ತದೆ ಎಂದು ಕೇಂದ್ರ ರೈಲ್ವೆ ಇಲಾಖೆಗೆ ತಜ್ಜರ ಸಮಿತಿ ವರದಿಯನ್ನು ನೀಡಿದೆ.

1981ರಲ್ಲಿ ಭಾರತದಲ್ಲಿ ಅತ್ಯಂತ ಭೀಕರ ರೈಲು ದುರಂತ ಸಂಭವಿಸಿತ್ತು. ಬಿಹಾರದ ನದಿಗೆ ರೈಲು ನುಗ್ಗಿ ಮುಳುಗಿದ್ದರಿಂದ 800ಕ್ಕೂ ಅಧಿಕ ಮಂದಿ ದುರಂತ ಸಾವನ್ನಪ್ಪಿದ್ದರು. 2013ರಲ್ಲಿ ಸಂಭವಿಸಿದ ಪ್ರಮುಖ ರೈಲು ದುರಂತಗಳು[ಇನ್ನೊಂದು ಪಟ್ಟಿ ಓದಿ] ಮುಂದಿವೆ..

ಬೆಂಗಳೂರು ನಾಂದೇಡ್ ಎಕ್ಸ್ ಪ್ರೆಸ್ ದುರಂತ

ಬೆಂಗಳೂರು ನಾಂದೇಡ್ ಎಕ್ಸ್ ಪ್ರೆಸ್ ದುರಂತ

2013. ಡಿ.28, ಬೆಂಗಳೂರು ನಾಂದೇಡ್ ಎಕ್ಸ್ಪ್ರೆಸ್ ದುರಂತ-26 ಸಾವು.
ಬೆಂಗಳೂರು ಸಿಟಿ -ಹಜೂರ್ ಸಾಹೇಬ್ ನಾಂದೇಡ್ ಎಕ್ಸ್ ಪ್ರೆಸ್ ಸಂಖ್ಯೆ: 16594 ಅನಂತಪುರಂ ಬಳಿ ಹವಾ ನಿಯಂತ್ರಿತ ಕೋಚಿಗೆ ಬೆಂಕಿ ಕಾಣಿಸಿಕೊಂಡು 26 ಪ್ರಯಾಣೀಕರು ಸಜೀವ ದಹನಗೊಂಡು, ಹದಿನೈದಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡರು.

ಸಹರ್ಷಾ - ಪಾಟ್ನಾ ರೈಲು ದುರಂತ

ಸಹರ್ಷಾ - ಪಾಟ್ನಾ ರೈಲು ದುರಂತ

ಆ.19,2013: ಬಿಹಾರದಲ್ಲಿ ರಾಜ್ಯರಾಣಿ ಎಕ್ಸ್ಪ್ರೆಸ್ ದುರಂತ - 35 ಸಾವು
ಸಹರ್ಷಾ - ಪಾಟ್ನಾ ರೈಲು ಸಂಖ್ಯೆ: 12567 ಧಮಾರಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ರೈಲು ಹರಿದು 35 ಜನ ಸಾವನ್ನಪ್ಪಿದ್ದರು.

ದೆಹಲಿ - ತಮಿಳುನಾಡು ಎಕ್ಸ್ಪ್ರೆಸ್ ದುರಂತ

ದೆಹಲಿ - ತಮಿಳುನಾಡು ಎಕ್ಸ್ಪ್ರೆಸ್ ದುರಂತ

2012, ಜೂ.30 - ನೆಲ್ಲೂರು ಬಳಿ ದೆಹಲಿ - ತಮಿಳುನಾಡು ಎಕ್ಸ್ಪ್ರೆಸ್ ದುರಂತ - 35 ಬಲಿ

ಅಲಪುಜಾ - ಧನಬಾದ್ ಎಕ್ಸ್ ಪ್ರೆಸ್ ದುರಂತ

ಅಲಪುಜಾ - ಧನಬಾದ್ ಎಕ್ಸ್ ಪ್ರೆಸ್ ದುರಂತ

ಅಲಪುಜಾ - ಧನಬಾದ್ ಎಕ್ಸ್ ಪ್ರೆಸ್ ಎಲ್ಲಿಂದ ಎಲ್ಲಿಗೆ : ವಿಜಯವಾಡ - ರಾಯಘಡ ರೈಲು ಸಂಖ್ಯೆ: 57271 ಸಾವುನೋವು: ಗೋಟ್ಲಂ ರೈಲು ನಿಲ್ದಾಣದಲ್ಲಿ ವಿಜಯವಾಡ - ರಾಯಘಡ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನುವ ಸುಳ್ಳು ಸುದ್ದಿ ಹರಡಿದಾಗ, ಪ್ರಯಾಣಿಕರು ರೈಲಿನಿಂದ ಕೆಳಕ್ಕೆ ಹಾರಿದರು. ಆಗ, ಇನ್ನೊಂದು ಹಳಿಯಲ್ಲಿ ವೇಗವಾಗಿ ಬರುತ್ತಿದ್ದ ಅಲಪುಜಾ - ಧನಬಾದ್ ಎಕ್ಸ್ ಪ್ರೆಸ್ ರೈಲು ಕೆಳಕ್ಕೆ ಹಾರಿದವರ ಮೇಲೆ ಹರಿಯಿತು. ಇದರಿಂದ ಹತ್ತು ಜನ ಸಾವನ್ನಪ್ಪಿ, ಇಪ್ಪತ್ತಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು.

ಧನಾಪುರ್ ಖಾಮಖ್ಯಾ ಕಾಪಿಟಲ್ ಎಕ್ಸ್ ಪ್ರೆಸ್

ಧನಾಪುರ್ ಖಾಮಖ್ಯಾ ಕಾಪಿಟಲ್ ಎಕ್ಸ್ ಪ್ರೆಸ್

ದಿನಾಂಕ: 15.11.2013 ರೈಲು: ಮಂಗಳ ಲಕ್ಷದ್ವೀಪ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಎಲ್ಲಿಂದ ಎಲ್ಲಿಗೆ : ನಿಜಾಮುದ್ದೀನ್ - ಎರ್ನಾಕುಳಂ ರೈಲು ಸಂಖ್ಯೆ: 12618 ಸಾವುನೋವು: ಘೋಟಿ ಹಳ್ಳಿಯ ಬಳಿ ರೈಲಿನ ಆರು ಬೋಗಿಗಳು ಹಳಿ ತಪ್ಪಿ ಐದು ಜನ ಸಾವನ್ನಪ್ಪಿ, ಐವತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಚಿತ್ರದಲ್ಲಿ : ಪಾಟ್ನದಲ್ಲಿ ಅಕ್ಟೋಬರ್ 17ರಂದು ಸಂಭವಿಸಿದ ದುರಂತದ ನಂತರ ಧನಾಪುರ್ ಖಾಮಖ್ಯಾ ಕಾಪಿಟಲ್ ಎಕ್ಸ್ ಪ್ರೆಸ್ ರೈಲು ಹಳಿ ದುರಸ್ತಿ ನಡೆದಿದೆ.
ರಾಜಧಾನಿ ಎಕ್ಸ್ ಪ್ರೆಸ್ ಗೆ ಬೆಂಕಿ

ರಾಜಧಾನಿ ಎಕ್ಸ್ ಪ್ರೆಸ್ ಗೆ ಬೆಂಕಿ

ಗುವಾಹಟಿ-ಲುಮ್ಡಿಂಗ್ ಸೆಕ್ಷನ್ ನ ಸೋನಾಬಾರಿ ಸ್ಟೇಷನ್ ನಲ್ಲಿ ಮಾರ್ಗದಲ್ಲಿದ್ದ ರಾಜಧಾನಿ ಎಕ್ಸ್ ಪ್ರೆಸ್ ಗೆ ಅಕ್ಟೋಬರ್ 15ರಂದು ಬೆಂಕಿ ಹತ್ತಿಕೊಂಡಿತ್ತು

ಪುರಿ -ದುರ್ಗ್ ಎಕ್ಸ್ ಪ್ರೆಸ್ ದುರಂತ

ಪುರಿ -ದುರ್ಗ್ ಎಕ್ಸ್ ಪ್ರೆಸ್ ದುರಂತ

Puri-Durg Express at Kalajhari syphon near Mancheswar railway station on the outskirt of Bhubaneswar on April 3

ದಿನಾಂಕ: 10.04.2013 ರೈಲು: ಯಶವಂತಪುರ ವೀಕ್ಲಿ ಎಕ್ಸ್ ಪ್ರೆಸ್ ಎಲ್ಲಿಂದ ಎಲ್ಲಿಗೆ : ಮುಜಫರ್ ನಗರ - ಯಶವಂತಪುರ ರೈಲು ಸಂಖ್ಯೆ: 15228 ಸಾವುನೋವು: ಅರಕೋಣಂ ಬಳಿ ಹನ್ನೊಂದು ಬೋಗಿಗಳು ಹಳಿ ತಪ್ಪಿ, ಇಬ್ಬರು ಸಾವನ್ನಪ್ಪಿ ಸುಮಾರು 11 ಮಂದಿ ಗಾಯಗೊಂಡಿದ್ದರು.

English summary
The Mumbai-Dehradun train mishap is the latest in the series of train accidents in the country. At least 6 train accidents, major and minor, have occurred at various places in India in last one year.India's worst rail accident was in 1981 when a train fell into a river in Bihar, killing at least 800 people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X