ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿಗೆ ಸ್ಸಾರಿ ಎಂದ ಕಾಂಗ್ರೆಸ್ಸಿನ ಸಂಜಯ್

By Mahesh
|
Google Oneindia Kannada News

ನವದೆಹಲಿ, ಜೂ.17: ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಅವರು ಸಿಐಎ ಏಜೆಂಟ್ ಜರೆದು ವಿವಾದಕ್ಕೊಳಗಾಗಿದ್ದ ಕಾಂಗ್ರೆಸ್ ನಾಯಕ ಸಂಜಯ್ ಝಾ ಅವರು ಕೊನೆಗೂ ಬೇಷರತ್ ಕ್ಷಮೆಯಾಚಿಸಿದ್ದಾರೆ. ಸಂಜಯ್ ಅವರು 'ಸ್ಸಾರಿ' ಹೇಳಿರುವ ಬಗ್ಗೆ ಸುಬ್ರಮಣ್ಯಂ ಸ್ವಾಮಿ ಎಂದಿನಂತೆ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಅವರುನ್ನು ಕೇಂದ್ರ ತನಿಖಾ ದಳ (ಸಿಐಎ) ಸಂಸ್ಥೆಯ ಏಜೆಂಟ್ ಎಂದು ಕರೆದು ವಿವಾದಕ್ಕೊಳಗಾಗಿದ್ದ ಕಾಂಗ್ರೆಸ್ ನಾಯಕ ಸಂಜಯ್ ಝಾ ಅವರು ಪತ್ರ ಬರೆದಿದ್ದಾರೆ ಎಂದು ಟ್ವೀಟಿಸಿರುವ ಸ್ವಾಮಿ, ನನ್ನ ಕಾನೂನು ಸಲಹೆಗಾರರಾದ ಸುಪ್ರಿಯಾ ಮನನ್, ಇಷ್ಕರನ್ ಭಂಡಾರಿ ಮತ್ತು ನನ್ನ ಪತ್ನಿ ಡಾ. ರೊಕ್ಸಾನಾ ಸ್ವಾಮಿ ತನಗೆ ಝಾ ಅವರು ಇಮೇಲ್ ಕಳುಹಿಸಿದ್ದಾರೆ ಎಂಬುದನ್ನು ದೃಢೀಕರಿಸಿದ್ದಾರೆ.

1977ರಲ್ಲಿ ಇಂದಿರಾ ಗಾಂಧಿ ಅವರ ಅನಾರೋಗ್ಯದ ಬಗ್ಗೆ ಭಾರತೀಯ ಜನತಾ ಪಕ್ಷದ ನಾಯಕರೊಬ್ಬರು ಅಮೆರಿಕಕ್ಕೆ ಮಾಹಿತಿ ನೀಡಿದ್ದರು ಎಂದು ವಿಕಿಲೀಕ್ಸ್ ಬಹಿರಂಗ ಪಡಿಸಿತ್ತು. ಈ ವಿಷಯ ಬಹಿರಂಗವಾದಾಗ ಝಾ ಅವರು ಸುಬ್ರಮಣಿಯನ್ ಸ್ವಾಮಿ ಅವರನ್ನು ಸಿಐಎ ಏಜೆಂಟ್ ಎಂದು ಕರೆದಿದ್ದರು. ಆ ಇ ಮೇಲ್ ಸಂಜಯ್ ಝಾ ಕಳುಹಿಸಿದ ಕ್ಷಮೆಯಾಚನೆ ಪತ್ರವಾಗಿತ್ತು ಎಂದು ಸ್ವಾಮಿ ಆಮೇಲೆ ರೀಟ್ವೀಟ್ ಮಾಡಿದ್ದರು.ಸ್ವಾಮಿ ಟ್ವೀಟ್ ಗಳು ಹಾಗೂ ಸಿಐಐ ಏಜೆಂಟ್ ಕಥೆ ಮುಂದೆ ಓದಿ...

ಕ್ಷಮೆಯಾಚಿಸಿದ ಕಾಂಗ್ರೆಸ್ ನಾಯಕ ಸಂಜಯ್

ಕ್ಷಮೆಯಾಚಿಸಿದ ಕಾಂಗ್ರೆಸ್ ನಾಯಕ ಸಂಜಯ್

ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಅವರು ಸಿಐಎ ಏಜೆಂಟ್ ಜರೆದು ವಿವಾದಕ್ಕೊಳಗಾಗಿದ್ದ ಕಾಂಗ್ರೆಸ್ ನಾಯಕ ಸಂಜಯ್ ಝಾ ಅವರು ಕೊನೆಗೂ ಬೇಷರತ್ ಕ್ಷಮೆಯಾಚಿಸಿದ್ದಾರೆ.

ನಾಲಗೆ ತಪ್ಪಿ ಬಂದ ಮಾತುಗಳಾಗಿತ್ತು

ಮಾತಿನ ಬರದಲ್ಲಿ ನಾಲಗೆ ತಪ್ಪಿ ಬಂದ ಮಾತುಗಳಾಗಿತ್ತು. ಸ್ವಾಮಿ ಅವರನ್ನು ಅವಮಾನಿಸುವ ಯಾವ ಉದ್ದೇಶವೂ ನನಗಿಲ್ಲ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ವಿಕಿಲೀಕ್ಸ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾಗಲಿ ಎಂದು ಸಂಜಯ್ ಹೇಳಿದ್ದಾರೆ.

ಇಂದಿರಾ ಗಾಂಧಿ ಅನಾರೋಗ್ಯದ ಮಾಹಿತಿ

ಇಂದಿರಾ ಗಾಂಧಿ ಅನಾರೋಗ್ಯದ ಮಾಹಿತಿ

ಬಿಜೆಪಿಯಲ್ಲಿರುವ ಸುಬ್ರಮಣ್ಯ ಸ್ವಾಮಿ ಅವರು ಅಮೆರಿಕದ ಗುಪ್ತಚರ ದಳಕ್ಕೆ ರವಾನಿಸಿದ್ದರು ಎಂದು ಪತ್ರಿಕೆಯೊಂದರ ವರದಿಯನ್ನು ಉಲ್ಲೇಖಿಸಿ 'ವಿಕಿಲೀಕ್ಸ್‌' ವರದಿ ಮಾಡಿತ್ತು.

ಇಂದಿರಾ ಗಾಂಧಿ ಅವರ ಆರೋಗ್ಯಕ್ಕೆ ಸಂಬಂಧಿಸಿದ ಗುಪ್ತ ಮಾಹಿತಿಯಷ್ಟೇ ಅಲ್ಲ. ಪ್ರಧಾನಿಯಾಗಿ 1977ರಲ್ಲಿ ತುರ್ತುಪರಿಸ್ಥಿತಿ ವೇಳೆ ಇಂದಿರಾ ಏನೆಲ್ಲಾ ಚುನಾವಣಾ ತಂತ್ರಗಳನ್ನು ಅಳವಡಿಸಿಕೊಂಡಿದ್ದರು ಎಂಬುದರ ಕುರಿತೂ ಬಿಜೆಪಿಯ ಹಿರಿಯ ನಾಯಕ ಸುಬ್ರಮಣ್ಯ ಸ್ವಾಮಿ ಅವರು ಅಮೆರಿಕಕ್ಕೆ ಮಾಹಿತಿ ನೀಡಿದ್ದರು. [ಹೆಚ್ಚಿನ ವಿವರ ಇಲ್ಲಿ ಓದಿ ]

ಕ್ಷಮೆಯಾಚನೆ ಬಗ್ಗೆ ಸ್ವಾಮಿ ಟ್ವೀಟ್

ನನ್ನ ಕಾನೂನು ಸಲಹೆಗಾರರಾದ ಸುಪ್ರಿಯಾ ಮನನ್, ಇಷ್ಕರನ್ ಭಂಡಾರಿ ಮತ್ತು ನನ್ನ ಪತ್ನಿ ಡಾ. ರೊಕ್ಸಾನಾ ಸ್ವಾಮಿ ತನಗೆ ಝಾ ಅವರು ಇಮೇಲ್ ಕಳುಹಿಸಿದ್ದಾರೆ ಎಂಬುದನ್ನು ದೃಢೀಕರಿಸಿದ್ದಾರೆ.

ಕ್ಷಮೆಯಾಚನೆ ಬಗ್ಗೆ ಸ್ವಾಮಿ ಮತ್ತೊಂದು ಟ್ವೀಟ್

ಕಾಂಗ್ರೆಸ್ ನಾಯಕ ಸಂಜಯ್ ಝಾ ಕ್ಷಮೆಯಾಚನೆ ಬಗ್ಗೆ ಸ್ವಾಮಿ ಮತ್ತೊಂದು ಟ್ವೀಟ್ ಮಾಡಿದ್ದು ಹೀಗೆ

English summary
Congress leader Sanjay Jha on Monday issued an 'unconditional apology' to Subramanian Swamy for calling him a 'CIA agent', confirmed Swamy in a Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X