ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ-ಭಾರತ ಒಪ್ಪಂದಕ್ಕೆ ಸಬರಮತಿ ಸಾಕ್ಷಿ

By Mahesh
|
Google Oneindia Kannada News

ಅಹಮದಾಬಾದ್, ಸೆ.17: ಚೀನಾ ದೇಶದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಬುಧವಾರ ಮಧ್ಯಾಹ್ನ ಭಾರತಕ್ಕೆ ಕಾಲಿರಿಸಿದ್ದಾರೆ. ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಜಿನ್ ಪಿಂಗ್ ಅವರಿಗೆ ಗುಜರಾತ್ ಸಿಎಂ ಅನಂದಿ ಬೇನ್ ಅವರು ಆತ್ಮೀಯವಾಗಿ ಸ್ವಾಗತ ಕೋರಿದ್ದಾರೆ.

ಅಹಮದಾಬಾದಿಗೆ ಆಗಮಿಸಿರುವ ಜಿನ್ ಪಿಂಗ್ ಅವರು ಮೂರು ದಿನಗಳ ಕಾಲ ಭಾರತ ಪ್ರವಾಸ ಮಾಡಲಿದ್ದಾರೆ. ಭಾರತ ಹಾಗೂ ಚೀನಾ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದ್ದು, ಸಂಜೆ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರೊಟ್ಟಿಗೆ ಮಾತುಕತೆ ನಡೆಸಲಿದ್ದಾರೆ.

ಚೀನಾದ ಪ್ರಥಮ ಮಹಿಳೆ ಪೆಂಗ್ ಲಿಯೂನ್ ಅವರು ಕೂಡಾ ಅಧ್ಯಕ್ಷರೊಂದಿಗೆ ಆಗಮಿಸಿದ್ದಾರೆ. ಜೊತೆಗೆ 50 ಕ್ಕೂ ಅಧಿಕ ಪ್ರತಿನಿಧಿಗಳನ್ನು ತಮ್ಮೊಂದಿಗೆ ಚೀನಾ ಅಧ್ಯಕ್ಷರು ಕರೆ ತಂದಿದ್ದಾರೆ. [ಮೋದಿ ಜಪಾನ್‌ ಭೇಟಿಯ ಚಿತ್ರಗಳು]

ಅಹಮದಾಬಾದಿನಲ್ಲಿ ಇಂದು ಹುಟ್ಟುಹಬ್ಬ ಆಚರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಸಬರಮತಿ ಆಶ್ರಮದಲ್ಲಿ ಚೀನಾ ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ. ಚೀನಾ ಅಧ್ಯಕ್ಷರ ಪತ್ನಿ ಪೆಂಗ್ ಅವರು ಚೀನಾದಲ್ಲಿ ಹೆಸರಾಂತ ಜಾನಪದ ಕಲಾವಿದೆಯಾಗಿದ್ದು, ಗುಜರಾತಿನ ಸಂಸ್ಕೃತಿ ಹಾಗೂ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ವೀಸಾ ಕುರಿತಂತೆ ಉಭಯ ದೇಶಗಳು ಯಾವುದೇ ಒಪ್ಪಂದಕ್ಕೆ ಸಹಿ ಹಾಕುತ್ತಿಲ್ಲ. ಗಡಿ ವಿವಾದದ ಬಗ್ಗೆ ಚರ್ಚೆ ನಡೆದರೂ ಈ ಬಾರಿ ಪರಸ್ಪರ ಲಾಭ ತರುವ ಒಪ್ಪಂದಗಳತ್ತ ಉಭಯ ನಾಯಕರು ಗಮನಹರಿಸಲಿದ್ದಾರೆ ಎನ್ನಲಾಗಿದೆ.

ಜಿನ್ ಪೆಂಗ್ ಅವರ ಕಾರ್ಯಕ್ರಮ ಪಟ್ಟಿ

ಜಿನ್ ಪೆಂಗ್ ಅವರ ಕಾರ್ಯಕ್ರಮ ಪಟ್ಟಿ

3.15: ಅಹಮದಾಬಾದಿಗೆ ಆಗಮನ, ಗುಜರಾತ್ ಸಿಎಂ ಹಾಗೂ ರಾಜ್ಯಪಾಲರಿಂದ ಸ್ವಾಗತ
4.45: ಹಲವು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
5.15: ಸಬರಮತಿ ಆಶ್ರಮಕ್ಕೆ ಭೇಟಿ
5.45: ನದಿ ತಟದಲ್ಲಿ ಜಾನಪದ ಕಲಾ ತಂಡಗಳ ನೃತ್ಯ, ಹಾಡು ಪ್ರದರ್ಶನ ವೀಕ್ಷಣೆ.
6.45: ಸಬರಿಮತಿ ಆಶ್ರಮ ಐಷಾರಾಮಿ ಟೆಂಟ್ ನಲ್ಲಿ ಮೋದಿ ಜೊತೆ ಖಾಸಗಿ ಡಿನ್ನರ್. ಮೋದಿ ಅವರ ಆಪ್ತ ಬಾಣಸಿಗ ಬದರಿ ಅವರು 150ಕ್ಕೂ ಅಧಿಕ ಗುಜರಾತಿ ಖಾದ್ಯಗಳನ್ನು ತಯಾರಿಸಿದ್ದಾರಂತೆ.
7.45: ವಿಮಾನ ಮೂಲಕ ದೆಹಲಿಗೆ ತೆರಳಲಿದ್ದಾರೆ
9.40: ದೆಹಲಿಗೆ ಆಗಮನ ನಿರೀಕ್ಷೆ

ಕ್ಸಿ ಗೆ ವಿಮಾನ ನಿಲ್ದಾಣದಲ್ಲಿ ಗೌರವ ರಕ್ಷೆ

ಕ್ಸಿ ಜಿನ್ ಪಿಂಗ್ ದಂಪತಿಗೆ ಅಹಮದಾಬಾದಿನ ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ಗೌರವ ರಕ್ಷೆ ನೀಡಲಾಯಿತು.

ಜಿನ್ ಪಿಂಗ್ ವಿರುದ್ಧ ಟಿಬೆಟಿಯನ್ನರ ಪ್ರತಿಭಟನೆ

ಜಿನ್ ಪಿಂಗ್ ವಿರುದ್ಧ ಟಿಬೆಟಿಯನ್ನರ ಪ್ರತಿಭಟನೆ

ಜಿನ್ ಪಿಂಗ್ ಭಾರತಕ್ಕೆ ಆಗಮಿಸುತ್ತಿರುವುದನ್ನು ವಿರೋಧಿಸಿ ಟಿಬೆಟಿಯನ್ನರು ದೆಹಲಿಯ ಚೀನಾ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕ್ಸಿ ಜಿನ್ ಪಿಂಗ್ ಸ್ವಾಗತಕ್ಕೆ ಸಜ್ಜಾದ ಮೋದಿ

ಕ್ಸಿ ಜಿನ್ ಪಿಂಗ್ ಸ್ವಾಗತಕ್ಕೆ ಹಯಾತ್ ಹೊಟೆಲ್ ಬಳಿ ಸಜ್ಜಾದ ಮೋದಿ

ಮೋದಿ ಜೊತೆ ಕ್ಸಿ ಜಿನ್ ಪಿಂಗ್ ದಂಪತಿ

ಪ್ರಧಾನಿ ಮೋದಿ ಜೊತೆ ಚೀನಾದ ಕ್ಸಿ ಜಿನ್ ಪಿಂಗ್ ದಂಪತಿ

ಹೊಟೆಲ್ ಬಳಿ ಕ್ಸಿ ಜಿನ್ ಪಿಂಗ್ ದಂಪತಿ

ಹೊಟೆಲ್ ಬಳಿ ಕ್ಸಿ ಜಿನ್ ಪಿಂಗ್ ದಂಪತಿ

ಗ್ರ್ಯಾಂಡ್ ಹಯಾತ್ ಹೊಟೆಲ್ ಬಳಿ ಕ್ಸಿ ಜಿನ್ ಪಿಂಗ್ ದಂಪತಿಯನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ.

ಚೀನಾ ಅಧ್ಯಕ್ಷರ ಪತ್ನಿ ಪೆಂಗ್

ಚೀನಾ ಅಧ್ಯಕ್ಷರ ಪತ್ನಿ ಪೆಂಗ್

ಚೀನಾ ಅಧ್ಯಕ್ಷರ ಪತ್ನಿ ಪೆಂಗ್ ಹೆಸರಾಂತ ಜಾನಪದ ಕಲಾವಿದೆಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಮೋದಿ.

ಚೀನಾದ ಪ್ರಥಮ ದಂಪತಿಗೆ ಸ್ವಾಗತ

ಚೀನಾದ ಪ್ರಥಮ ದಂಪತಿಗೆ ಸ್ವಾಗತ

ಪೆಂಗ್ ಅವರು ಗುಜರಾತಿನ ಸಂಸ್ಕೃತಿ ಹಾಗೂ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ನಾಯಕರು

ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ನಾಯಕರು

ಅಹಮದಾಬಾದಿನಲ್ಲಿ ಬಿಸಿನೆಸ್ ಪಾರ್ಕ್ ಸ್ಥಾಪನೆಗೆ ಚೀನಾ ದೇಶ 5 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ.

ಅಹಮದಾಬಾದಿಗೆ ಸೋದರಿ ನಗರ ಸಿಕ್ಕಿದೆ

ಅಹಮದಾಬಾದಿಗೆ ಸೋದರಿ ನಗರ ಸಿಕ್ಕಿದೆ

ಅಹಮದಾಬಾದಿಗೆ ಚೀನಾದಲ್ಲೊಂದು ಸೋದರಿ ನಗರ ಸಿಕ್ಕಿದೆ ಗುವಾಗ್ಜವೋ ನಗರವನ್ನು ಸಿಸ್ಟರ್ ಸಿಟಿಯನ್ನಾಗಿ ಪರಿಗಣಿಸಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಉಳಿದಂತೆ ಕೈಗಾರಿಕಾ ಕಾರಿಡಾರ್, ಮುಂಬೈ-ಬೆಂಗಳೂರು ನಡುವೆ ಬುಲೆಟ್ ಟ್ರೈನ್ ಸೇರಿದಂತೆ ಒಟ್ಟಾರೆ 100 ಬಿಲಿಯನ್ ಡಾಲರ್ ಹೂಡಿಕೆಗೆ ಚೀನಾ ಮುಂದಾಗಿದೆ.

English summary
President Xi Jinping has arrived in Ahmedabad today(Sep.17) to kick off his three day official visit.Gujarat CM Anandiben Patel and Governor received the Chinese President Xi Jinping at the Ahmedabad airport. Prime Minister Narendra Modi has already reached Ahmedabad to welcome the Chinese President.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X