ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಗಿಲ್‌ ವಿಜಯ್‌ ದಿವಸ: ಪಾಕ್ ಗುಂಡಿನ ದಾಳಿ

By Ashwath
|
Google Oneindia Kannada News

ಜಮ್ಮು, ಜು.26: ಭಾರತೀಯ ಸೇನೆ ಕಾರ್ಗಿಲ್ ಯುದ್ದದ 'ಆಪರೇಷನ್ ವಿಜಯ್'ನ 15ನೇ ವಾರ್ಷಿಕೋತ್ಸವದ ವಿಶೇಷ ಸಂಭ್ರಮಾಚರಣೆಯಲ್ಲಿದ್ದರೆ, ಇತ್ತ ಪಾಕ್‌ ಮತ್ತೆ ಗಡಿಯಲ್ಲಿ ತನ್ನ ಖ್ಯಾತೆ ಮುಂದುವರೆಸಿದೆ.

ಕಳೆದ 24 ಗಂಟೆಯಲ್ಲಿ ಎರಡು ಭಾರಿ ಕದನ ಉಲ್ಲಂಘಿಸಿದ ಪಾಕ್‌ ಸೈನಿಕರು ಪೂಂಛ್ ವಲಯದ ಪೋನಾ, ಪಿಲ್ಲಿ, ರಾಣಿ ಟೆಕ್ರಿ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಪಾಕ್‌ ದಾಳಿಗೆ ಭಾರತೀಯರು ಪ್ರತಿದಾಳಿ ನಡೆಸಿದ್ದು, ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Ceasefire violation

ಉಗ್ರರ ದಾಳಿ: ಈ ಮಧ್ಯೆ ಶನಿವಾರ ರಾತ್ರಿ 2:30ರ ವೇಳೆಗೆ ಪೊಲೀಸರ ಮೇಲೆ ಉಗ್ರರು ಗ್ರೆನೇಡ್‌ ದಾಳಿ ನಡೆಸಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಸೋಪುರ್‌ನಲ್ಲಿ ನಡೆದ ದಾಳಿಯಲ್ಲಿ ಓರ್ವ‌ ಪೊಲೀಸ್‌ ಪೇದೆ ಮೃತಪಟ್ಟಿದ್ದು, 4 ಪೇದೆಗಳಿಗೆ ಗಾಯವಾಗಿದೆ.[ಫಾರ್ವರ್ಡ್ ಪೋಸ್ಟ್ ಬಗ್ಗೆ ತಿಳಿಯಲೇಬೇಕಾದ ಸಂಗತಿ]

ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಬಲವಾದ ಗಾಯವಾಗಿದ್ದು ಶ್ರೀನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಪೇದೆಗಳನ್ನು ಸೋಪುರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಾರ್ಗಿಲ್ ವಿಜಯ ದಿವಸ ಸರಣಿಯ ಎಲ್ಲಾ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ: ಕಾರ್ಗಿಲ್ ವಿಜಯ ದಿವಸ

English summary
Ceasefire violation: Pakistan troops target 3 Indian posts in Balakote area of Poonch District
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X