ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪ್‌ ನಾಯಕಿ ಶಾಜಿಯಾ ಇಲ್ಮಿ ರಾಜೀನಾಮೆ

By Ashwath
|
Google Oneindia Kannada News

ನವದೆಹಲಿ. ಮೇ.24: ಜನಾಂದೋಲನದ ಮೂಲಕವೇ ಪ್ರಸಿದ್ದಕ್ಕೆ ಬಂದ ಆಮ್‌ ಆದ್ಮಿ ಪಕ್ಷ ದೊಡ್ಡ ನಾಯಕರು ರಾಜೀನಾಮೆ ನೀಡಲು ಆರಂಭಿಸಿದ್ದು,ಇದಕ್ಕೆ ಹೊಸ ಸೇರ್ಪಡೆಯಾಗಿ ಎಎಪಿ ಸ್ಥಾಪಕರಲ್ಲಿ ಒಬ್ಬರಾದ ಶಾಜಿಯಾ ಇಲ್ಮಿ ರಾಜೀನಾಮೆ ನೀಡಿದ್ದಾರೆ.

ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ.ನನ್ನನ್ನು ಆಪ್‌ನ ನಾಯಕರು ಮೂಲೆಗುಂಪು ಮಾಡುತ್ತಿರುವ ಹಿನ್ನಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಇಲ್ಮಿ ಹೇಳಿದ್ದಾರೆ. ಶಾಜಿಯಾ ಇಲ್ಮಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶ‌ನವೊಂದರಲ್ಲಿ ನಿನ್ನೆ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದರು.

ಆಪ್‌ ಸಂಸ್ಥಾಪಕ ಅರವಿಂದ್‌ ಕೇಜ್ರಿವಾಲ್‌ ಬಗ್ಗೆ ನನಗೆ ತುಂಬಾ ಗೌರವವಿದೆ. ಮುಂದೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಗಾಜಿಯಾಬಾದ್ ಕ್ಷೇತ್ರದಿಂದ ಸ್ಪರ್ಧಿ‌ಸಿದ್ದ ಇಲ್ಮಿ ಬಿಜೆಪಿ ಅಭ್ಯರ್ಥಿ‌ ವಿ.ಕೆ ಸಿಂಗ್‌ ಎದುರು ಭಾರೀ ಅಂತರದಿಂದ ಸೋತು ಐದನೇ ಪಡೆದಿದ್ದಾರೆ. ವಿ.ಕೆ ಸಿಂಗ್‌ 7,58,482 ಮತಗಳನ್ನು ಪಡೆದಿದ್ದರೆ, ಇಲ್ಮಿ 89,147 ಮತಗಳನ್ನು ಪಡೆದಿದ್ದರು.

 ರಾಜೀನಾಮೆಗೆ ಏನು ಕಾರಣ?

ರಾಜೀನಾಮೆಗೆ ಏನು ಕಾರಣ?

ಲೋಕಸಭಾ ಚುನಾವಣೆಯಲ್ಲಿ ಶಾಜಿಯಾ ಇಲ್ಮಿ ದೆಹಲಿಯ ಯಾವುದಾದರು ಒಂದು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿ‌ಸಲು ಬಯಸಿದ್ದರು. ಆದರೆ ಆಪ್‌ ದೆಹಲಿಯಲ್ಲಿ ಸ್ಪರ್ಧಿ‌ಸಲು ಇಲ್ಮಿಗೆ ಟಿಕೆಟ್‌ ನೀಡಿರಲಿಲ್ಲ.

ಕೇಜ್ರಿವಾಲ್‌ ಬೆಂಬಲ ಇಲ್ಲ:

ಕೇಜ್ರಿವಾಲ್‌ ಬೆಂಬಲ ಇಲ್ಲ:


ಶಾಜಿಯಾ ಇಲ್ಮಿ ಅವರಿಗೆ ಆಪ್‌ ಸಂಸ್ಥಾಪಕ ಕೇಜ್ರಿವಾಲ್‌ ಬೆಂಬಲ ನೀಡುತ್ತಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ವಿವಿಧೆಡೆ ಕೇಜ್ರಿವಾಲ್‌ ಪ್ರಚಾರ ಭಾಷಣ ನಡೆಸಿದ್ದರೂ ಗಾಜೀಯಾಬಾದ್‌‌‌ನಲ್ಲಿ ಇಲ್ಮಿ ಪರ ಪ್ರಚಾರ ನಡೆಸದೇ ಇದ್ದದ್ದು ರಾಜೀನಾಮೆ ನೀಡಲು ಒಂದು ಕಾರಣವಾಗಿದೆ.

ಶಾಜಿಯಾ ಇಲ್ಮಿ ವಿವಾದ

ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮುಸಲ್ಮಾನರೇ ನೀವು ಹೀಗೇ ಜಾತ್ಯಾತೀತರಾಗುಳಿದರೆ ಸಾಲದು; ನೀವು ಇನ್ನಷ್ಟು ಕೋಮುವಾದಿಗಳಾಗಬೇಕು' ಎಂದು ಶಾಜಿಯಾ ಇಲ್ಮಿ ಮುಸ್ಲಿಂ ಬಾಂಧವರಿಗೆ ಕರೆ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು

ಶಾಜಿಯಾ ಇಲ್ಮಿ ವಿವಾದ

ಶಾಜಿಯಾ ಇಲ್ಮಿ ವಿವಾದ

ಶಾಜಿಯಾ ಇಲ್ಮಿ ಸೇರಿದಂತೆ 9 ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ರಸೀದಿ ನೀಡದೆ ದೇಣಿಗೆ ಸಂಗ್ರಹಿಸುತ್ತಿದ್ದದನ್ನು ಮಾಧ್ಯಮವೊಂದು ಕುಟುಕು ಕಾರ್ಯಾಚರಣೆ ಮೂಲಕ ಬಹಿರಂಗಗೊಳಿಸಿತ್ತು. ಈ ವಿಡಿಯೋದಲ್ಲಿ ದೇಣಿಗೆಯನ್ನು ನಗದು ರೂಪದಲ್ಲೇ ನೀಡಬೇಕು ಎಂದು ಇಲ್ಮಿ ಹೇಳಿರುವುದು ವಿಡಿಯೋದಲ್ಲಿ ಚಿತ್ರಿತವಾಗಿತ್ತು.

 ಮಧು ಭಾದುರಿ ರಾಜೀನಾಮೆ:

ಮಧು ಭಾದುರಿ ರಾಜೀನಾಮೆ:

ಎಎಪಿ ಸಹ ಸ್ಥಾಪಕಿ ಮತ್ತು ಮಾಜಿ ರಾಯಭಾರಿ ಮಧು ಭಾದುರಿ ಪಕ್ಷದಲ್ಲಿನ ವಿವಿಧ ಹುದ್ದೆಗಳಿಗೆ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದ್ದರು. ಎಎಪಿ ಹೈಕಮಾಂಡ್‌ ಪಕ್ಷವಾಗಿ ರೂಪಗೊಂಡಿದ್ದು, ಭಿನ್ನಮತೀಯರ ಧ್ವನಿಯನ್ನು ಆಲಿಸುತ್ತಿಲ್ಲ ಎಂದು ಕೇಜ್ರಿವಾಲ್‌ ವಿರುದ್ಧ ಆರೋಪ ಮಾಡಿದ್ದರು.

 ವಿನೋದ್‌ ಕುಮಾರ್‌ ಬಿನ್ನಿ ರಾಜೀನಾಮೆ:

ವಿನೋದ್‌ ಕುಮಾರ್‌ ಬಿನ್ನಿ ರಾಜೀನಾಮೆ:

ಎಎಪಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೇಜ್ರಿವಾಲ್ ವಿಫಲರಾಗಿದ್ದಾರೆ ಎಂದು ಹೇಳಿಎಎಪಿ ಶಾಸಕ ವಿನೋದ್‌ ಕುಮಾರ್‌ ಬಿನ್ನಿ ಆರೋಪಿಸಿ ರಾಜೀನಾಮೆ ನೀಡಿದ್ದರು.

English summary
Blaming a lack of inner party democracy in Aam Aadmi Party, Shazia Ilmi, one of its founder members, resigned from all party positions on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X