ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಡಿಟಿ ಕೈಗೆ ಸ್ವಿಸ್ ಬ್ಯಾಂಕ್ ಖಾತೆ ವಿವರ ಲಭ್ಯ

By Mahesh
|
Google Oneindia Kannada News

ನವದೆಹಲಿ, ಆ.25: ವಿದೇಶಿ ಬ್ಯಾಂಕ್ ಗಳಲ್ಲಿ ಅದರಲ್ಲೂ ಸ್ವಿಡ್ಜರ್ಲೆಂಡ್ ನ ವಿವಿಧ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕಪ್ಪು ಹಣದ ಮಾಹಿತಿ ಕಲೆ ಹಾಕುತ್ತಿರುವ ಭಾರತೀಯ ತನಿಖಾ ತಂಡಕ್ಕೆ ಮಹತ್ವದ ದಾಖಲೆ ಕೊನೆಗೂ ಸಿಕ್ಕಿದೆ. ಸ್ವಿಸ್ ಸರ್ಕಾರ ತನ್ನ ದೇಶದ ಬ್ಯಾಂಕ್ ಖಾತೆದಾರರ ವಿವರ ನೀಡಲು ನಿರಾಕರಿಸಿದ ಬೆನ್ನಲ್ಲೇ ಕಪ್ಪು ಹಣ ಠೇವಣಿದಾರರ ವಿವರಗಳನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಹೆಕ್ಕಿ ತೆಗೆದಿದೆ.

ಕಪ್ಪು ಹಣವಿಟ್ಟಿರುವ ಬಗ್ಗೆ ತನಿಖೆ ನಡೆಸುತ್ತಿದ್ದ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಗೆ ಮೊದಲ ಯಶಸ್ಸು ಸಿಕ್ಕಿದೆ. ಸ್ವಿಸ್ ಬ್ಯಾಂಕ್ ಅಧಿಕೃತ ಮಾಹಿತಿ ನೀಡಲು ಹಿಂದೇಟು ಹಾಕಿದರೂ, ತಾನೇ ಒಂದು ತಂತ್ರ ರಚಿಸುವ ಮೂಲಕ ಮಾಹಿತಿ ಕಲೆ ಹಾಕಿದೆ

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ತಂಡಕ್ಕೆ 100 ಕಪ್ಪುಹಣ ಠೇವಣಿದಾರರ ಪಟ್ಟಿ ಸಿಕ್ಕಿದೆಯಂತೆ. ಈ ಎಲ್ಲರ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ. ಇದರಿಂದ, ಬೊಕ್ಕಸಕ್ಕೆ ರು.50-80 ಕೋಟಿ ತೆರಿಗೆ ಸಂಗ್ರಹ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.

Blackmoney: Indian agencies get Swiss banks' data of hoarders

ಅನಧಿಕೃತ ಮೂಲಗಳಿಂದ ಸಂಪಾದಿಸಿದ ಕೆಲ ಮಾಹಿತಿಗಳ ಸಹಾಯದಿಂದ ನೂರು ಜನರ ಗೌಪ್ಯ ಪಟ್ಟಿಯನ್ನು ಸಿಬಿಡಿಟಿ ತಯಾರಿಸಿತ್ತು. ಗೌಪ್ಯಪಟ್ಟಿಯಲ್ಲಿದ್ದ ಹೆಸರುಗಳನ್ನು ಆದಾಯ ತೆರಿಗೆ ಇಲಾಖೆಗೆ ನೀಡಿದ್ದ ಸಿಬಿಡಿಟಿ, ಇವರ ವ್ಯವಹಾರಗಳ ವಿವರ ನೀಡುವಂತೆ ಸೂಚಿಸಿತ್ತು. ಜೊತೆಗೆ, ಪಟ್ಟಿಯಲ್ಲಿದ್ದವರನ್ನು ತೆರಿಗೆ ವಂಚಕರೆಂದು ಪರಿಗಣಿಸುವಂತೆಯೂ ಸೂಚಿಸಿತ್ತು. ಆದರೆ, ಇವರನ್ನು 'ಉದ್ದೇಶಪೂರ್ವಕ ತೆರಿಗೆ ವಂಚಕ'ರೆಂಬ ಹಣೆಪಟ್ಟಿಯಿಂದ ಹೊರಗಿಡಲು ಸೂಚಿಸಿತ್ತು.

ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಸಿಬಿಡಿಟಿ ಠೇವಣಿದಾರರನ್ನು ಸಂಪರ್ಕಿಸಿ ಮಾಹಿತಿ ನೀಡಿದರೆ ಕನಿಷ್ಠ ಶಿಕ್ಷೆಗೆ ಒಳಪಡಿಸುವ ಆಮಿಷ ನೀಡಿ ಖಾತೆ ವಿವರ ಪಡೆಯುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಚಂದೀಗಢ ಮುಂತಾದ ಕಡೆ ನೆಲೆಸಿರುವ ವ್ಯಕ್ತಿಗಳಿಗೆ ಸೇರಿದ ಖಾತೆ ವಿವರ ಈಗ ಸಿಬಿಡಿಟಿ ಕೈ ಸೇರಿದೆ. ಈ ವಿವರಗಳನ್ನು ವಿಶೇಷ ತನಿಖಾ ದಳ(SIT) ಜೊತೆ ಸಿಬಿಡಿಟಿ ಹಂಚಿಕೊಂಡಿದೆ. ಈ ಎಲ್ಲಾ ದಾಖಲೆಗಳನ್ನು ಸುಪ್ರೀಂಕೋರ್ಟಿಗೆ ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

English summary
Tax investigators pursuing instances of blackmoney stashed abroad by Indians have finally been able to circumvent the Swiss secrecy code by asking over 100 such account holders to submit on their own details of personal balances in these banks, brought under the tax net recently, for lesser penal action for evasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X