ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ 1 ಲಕ್ಷ ಕೋಟಿ ಕಪ್ಪು ಹಣ ಪತ್ತೆ

By Mahesh
|
Google Oneindia Kannada News

ನವದೆಹಲಿ, ಜು.17: ದೇಶದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಸುಮಾರು 1 ಲಕ್ಷ ಕೋಟಿ ರು ಕಪ್ಪುಹಣ ಪತ್ತೆಯಾಗಿದೆ. ಸ್ವಿಜರ್‌ಲೆಂಡ್ ಮತ್ತು ಇತರ ದೇಶಗಳ ಬ್ಯಾಂಕ್‌ಗಳಲ್ಲಿರುವ 14,000 ಕೋಟಿ ಮೊತ್ತಕ್ಕಿಂತ ಅಧಿಕವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕೃತ ಮಾಹಿತಿ ಹೊರ ಹಾಕಿದೆ.

2012-13ನೇ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ದೇಶದಾದ್ಯಂತ ನಡೆಸಿದ ಶೋಧ ಕಾರ್ಯ ನಡೆಸಿ ಪತ್ತೆಹಚ್ಚಿದ ಹಣಕ್ಕಿಂತ ಇದು ಅಧಿಕವಾಗಿದೆ. 2013-14ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆ ಸೂಕ್ತ ದಾಖಲೆ ಇಲ್ಲದ 10,791.63 ಕೋಟಿ ರು ಹಣವನ್ನು ಜಪ್ತಿ ಮಾಡಲಾಗಿತ್ತು. ಇದರ ಜತೆಗೆ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ 90,390.71 ಕೋಟಿ ರು ಮೊತ್ತವನ್ನು ಹೊರಗೆಳೆಯಲಾಗಿತ್ತು.

Over Rs 1 lakh crore illegal income detected

ತೆರಿಗೆ ಕಳ್ಳರು, ಉದ್ಯಮಿಗಳು, ಕೈಗಾರಿಕಾ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ವೇಳೆ 1,01,181 ಕೋಟಿ ರು ಹಣ ವಶಪಡಿಸಿಕೊಳ್ಳಲಾಗಿದೆ.

2012-13ನೇ ಹಣಕಾಸು ವರ್ಷದಲ್ಲಿ ದೇಶಾದ್ಯಂತ ಐಟಿ ಇಲಾಖೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ವಶಪಡಿಸಿಕೊಂಡದ್ದು ಕೇವಲ 29,628 ಕೋಟಿ ರು ಎಂದು ತಿಳಿದು ಬಂದಿದೆ. ಇದಕ್ಕೆ ಹೋಲಿಸಿದಾಗ ಕಳೆದ ಹಣಕಾಸು ವರ್ಷದಲ್ಲಿ ದೇಶದಲ್ಲಿ ಕಪ್ಪುಹಣದ ಮೊತ್ತ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ಕಾಣಬಹುದು.

ಈ ಎಲ್ಲಾ ದಾಖಲೆಗಳನ್ನು ವಿಶೇಷ ತನಿಖಾ ತಂಡ(ಎಸ್ ಐಟಿ) ಗೆ ನೀಡಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಬೋರ್ಡ್(ಸಿಬಿಡಿಟಿ) ಹೇಳಿದೆ. ದೇಶ ವಿದೇಶಗಳಲ್ಲಿರುವ ಕಪ್ಪು ಹಣ ಕುರಿತಂತೆ ಎಸ್ ಐಟಿ ತನ್ನ ತನಿಖೆ ಮುಂದುವರೆಸಿದೆ. ಆದರೆ, ಇತ್ತೀಚೆಗೆ ಭಾರತೀಯ ಮೂಲದ ಖಾತೆದಾರರು ಸ್ವಿಟ್ಜರ್ಲೆಂಡ್ ನಲ್ಲಿ ಹೂಡಿಕೆ ಮಾಡಿರುವ ಮಾಹಿತಿ ನೀಡದಿರುವುದು ತನಿಖೆಗೆ ಕೊಂಚ ಹಿನ್ನಡೆಯಾಗಿದೆ ಎನ್ನಬಹುದು. (ಏಜೆನ್ಸೀಸ್)

English summary
In a shocking revelation, over Rs one lakh crore of undisclosed income in the last financial year has been detected by the government. The money shows a figure which is more than double as compared to the search and seizure action undertaken by the Income Tax department during 2012-13 to check black money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X