ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ಹಣ: ಒಂದು ವಾರದೊಳಗೆ ಎಸ್‌ಐಟಿ ರಚಿಸಿ

By Ashwath
|
Google Oneindia Kannada News

ನವದೆಹಲಿ. ಮೇ. 23: ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣದ ತನಿಖೆಗೆ ಒಂದು ವಾರದೊಳಗೆ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಯುಪಿಎ ಸರ್ಕಾರ ಮೇ.1ರಂದು ಸುಪ್ರೀಂ ಕೋರ್ಟ್‌‌ನಲ್ಲಿ ಮೂರು ವಾರದೊಳಗೆ ಕಪ್ಪು ಹಣ ತರಲು ಎಸ್‌‌ಐಟಿ ರಚಿಸುವುದಾಗಿ ಹೇಳಿತ್ತು. ಮೂರು ವಾರದ ಗಡುವು ಮೇ.22ಕ್ಕೆ ಮುಗಿದಿದ್ದರೂ ಹೊಸ ಸರ್ಕಾರ ಎಸ್‌ಐಟಿ ರಚಿಸಲು ಇನ್ನು ಎರಡು ವಾರ ಗಡುವು ನೀಡಬೇಕು ಎಂದು ವಿನಂತಿಸಿತ್ತು. ಆದರೆ ಸುಪ್ರೀಂ ಕೋರ್ಟ್‌ ಹೊಸ ಸರ್ಕಾರದ ವಾದವನ್ನು ತಿರಸ್ಕರಿಸಿ ಒಂದು ವಾರದೊಳಗೆ ಎಸ್‌ಐಟಿ ರಚಿಸುವಂತೆ ಸೂಚನೆ ನೀಡಿದೆ.[ಕಪ್ಪುಹಣ ತನಿಖೆ ವಿಳಂಬ : ಯುಪಿಎ ಸರ್ಕಾರಕ್ಕೆ ಸುಪ್ರೀಂ ಚಾಟಿ]

supreme court

ಸುಪ್ರೀಂ ಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಧೀಶರಾದ ನ್ಯಾ.ಎಂಬಿ ಶಾ ಮತ್ತು ನ್ಯಾ. ಅರಿಜಿ‌ತ್‌ ಪಸಾಯತ್‌ ವಿಶೇಷ ತನಿಖಾ ದಳ ಮುಖ್ಯಸ್ಥರನ್ನಾಗಿ ನೇಮಿಸುವಂತೆ ಸುಪ್ರೀಂ ಕೋರ್ಟ್‌ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.[ಬಿಜೆಪಿ 15 ದಿನದಲ್ಲಿ ಕಪ್ಪು ಹಣ ವಾಪಸ್ ತರಲಿ-ಆಸ್ಕರ್ ಫರ್ನಾಂಡೀಸ್]

ಸುಪ್ರೀ ಕೋರ್ಟ್‌ ಇದೇ ಸಂದರ್ಭದಲ್ಲಿ ಎಲ್‌‌ಜಿಟಿ ಬ್ಯಾಂಕ್‌‌ನಲ್ಲಿ ಖಾತೆ ಹೊಂದಿರುವ ಭಾರತೀಯರ ಬಗ್ಗೆ ಜರ್ಮ‌ನಿ ನೀಡಿರುವ ದಾಖಲೆಗಳನ್ನು ಸುರಕ್ಷಿತವಾಗಿ ಇರಿಸುವಂತೆ ಕೇಂದ್ರ ಸರ್ಕಾರದ ಕಂದಾಯ ಇಲಾಖೆಯ ಕಾರ್ಯದರ್ಶಿ‌ಗೆ ಸೂಚಿಸಿದೆ.

English summary
The Supreme Court on Friday gave the Centre a week's time to notify a Special Investigation Team to probe black money stashed in foreign banks by Indians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X