ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಅಭ್ಯರ್ಥಿ ಮೋದಿ ದಿನಚರಿ ಹೀಗಿದೆ ಗೊತ್ತಾ?

By Srinath
|
Google Oneindia Kannada News

ಅಹಮದಾಬಾದ್, ಏ.29- 64 ವರ್ಷದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶದ ಉದ್ದಗಲಕ್ಕೂ ಹೆಜ್ಜೆಹಾಕುತ್ತಿದ್ದಾರೆ. ದಿನಕ್ಕೆ ಐದು ತಿಂಗಳಿಗೆ 100ಕ್ಕೂ ಹೆಚ್ಚು ಸಭೆಗಳಂತೆ ಮೂರ್ನಾಲ್ಕು ತಿಂಗಳಿಂದ ಓಡಾಡುತ್ತಿದ್ದಾರೆ.

ರಾಜಕೀಯವಾಗಿ ದೇಶದಲ್ಲಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಬೇಕೆಂಬ ಹಸಿವಿನೊಂದಿಗೆ ಬೆಳಗ್ಗೆ 5 ಗಂಟೆಗೇ ಏಳುವ ಪುಣ್ಮಾತ್ಮ ರಾತ್ರಿ 1 ಗಂಟೆವರೆಗೂ ಅಕ್ಷರಶಃ ಅಹರ್ನಿಶಿ ದುಡಿಯುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಹುಶಃ ಈ ಪಾಟಿ ದುಡಿಯುವ ರಾಜಕಾರಣಿ ಬೇರೆ ಯಾರೂ ಇಲ್ಲ ಅನ್ನಬಹುದು. ಪ್ರಯತ್ನವಿದ್ದೆಡೆ ಪ್ರತಿಫಲವಿದ್ದೇ ಇರುತ್ತದೆ.

bjp-pm-candidate-modi-day-to-day-life-cycle-during-elections-2014

ದೇಶದ ಯಾವುದೇ ಮೂಲೆಯಲ್ಲಿದ್ದರೂ ಗಾಂಧಿನಗರದಲ್ಲಿರುವ ತಮ್ಮ (ಲೋಕಸಭಾ) ಸಮರ ಸೇನಾನಿಗಳ ಜತೆ ನಿಕಟ ಸಂಪರ್ಕ ಹೊಂದುವ ಮೋದಿ, ತಾಜಾ ಬೆಳವಣಿಗೆಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ಕಾಲಕಾಲಕ್ಕೆ ಪಡೆಯುತ್ತಿರುತ್ತಾರೆ. ಹೇಳಬೇಕು ಈ ಸೇನಾನಿಗಳ ತಂಡದ ಆಣತಿಯಂತೆ ಮೋದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅತ್ಯಂತ ಕರಾರುವಕ್ಕಾಗಿ ಗಡಿಯಾರದ ಮುಳ್ಳಿನಂತೆ ಮೋದಿ ದಿನಚರಿ ಸಾಗುತ್ತದೆ. ಬೆಳಗ್ಗೆ 5 ಗಂಟೆಗೇ ಎದ್ದೇಳುವ ಮೋದಿ ಯೋಗ ಮತ್ತು ಕಾಲ್ನಡಿಗೆಯಲ್ಲಿ ತೊಡಗುತ್ತಾರೆ. ಬೆಳಗ್ಗೆ ತಿಂಡಿ ಅಂದರೆ ಸಾದಾ ದೋಸೆ, ಸ್ವಲ್ಪ ಹಣ್ಣು. ಬೇಕು ಅಂದರೆ ಗುಜರಾತಿ ಸ್ನಾಕ್ಸ್. ಅದಾಗುತ್ತಿದ್ದಂತೆ ವಿಮಾನ ಹತ್ತಿ ದಿನದ ಮೊದಲ ಸಭೆಗೆ ಹೊರಡುತ್ತಾರೆ. ಕೆಲವು ಬಾರಿ ಅವರು ಊಟ ತಪ್ಪಿಸುವುದೂ ಉಂಟು. ಊಟಕ್ಕೆ ಸಾಮಾನ್ಯವಾಗಿ ಮೇಥಿ ಚಪಾತಿ, ಅನ್ನ, ದಾಲ್, ತರಕಾರಿ ಕಿಚಡಿ, ಮೊಸರು ತೆಗೆದುಕೊಳ್ಳುತ್ತಾರೆ.

ಭಾಷಣ ಮಾಡುವಾಗ ಮತ್ತು ಅದಕ್ಕೂ ಮುನ್ನ ಏನೇ ತಾಜಾ ರಾಜಕೀಯ ಬೆಳವಣಿಗೆಗಳು, ವಿರೋಧ ಪಕ್ಷಗಳ ಹೇಳಿಕೆಗಳು ಇದ್ದರೆ ಅದನ್ನು ಗಾಂಧಿನಗರದಲ್ಲಿರುವ ತಂಡ ಮೋದಿ ಗಮನಕ್ಕೆ ತರುತ್ತದೆ. ಮುಖ್ಯಮಂತ್ರಿ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿ ಎಕೆ ಶರ್ಮಾ, ಗುಜರಾತಿನ ನಿವೃತ್ತ ಅಧಿಕಾರಿ ಕೆ ಕೈಲಾಶನಾಥನ್ ಮತ್ತು ಅವರ ತಂಡ ಮೋದಿ ಭಾಷಣಕ್ಕೆ ಅಗತ್ಯವಿರುವ ಮಾಹಿತಿಯನ್ನು ಒದಗಿಸುತ್ತದೆ. ಅಷ್ಟೂ ಮಾಹಿತಿನ್ನು ಸ್ಪಪ್ಟವಾಗಿ, ಸ್ಫುಟವಾಗಿ ಗುಜರಾತಿ ಭಾಷೆಯಲ್ಲಿ ಬರೆದುಕೊಡಲಾಗುತ್ತದೆ.

'ಮೋದಿ ತುಂಬಾ ವ್ಯವಸ್ಥಿತವಾಗಿ ಕೆಲಸ ಮಾಡುವವರು. ವಿಷಯ ಯಾವುದೇ ಇರಲಿ ಅದರ ಬಗ್ಗೆ ಶಾಂತಚಿತ್ತರಾಗಿ ಆಲೋಚಿಸುತ್ತಾರೆ. ಮತ್ತು ಅದರ ದೂರಗಾಮಿ ಪರಿಣಾಮಗಳ ಬಗ್ಗೆ ಚಿಂತನೆ ನಡೆಸುತ್ತಾರೆ. ಹಾಗಾಗಿ ನಮ್ಮ ಆಲೋಚನಾ ಕ್ರಮವೂ ಅವರನ್ನು ಅನುಸರಿಸುತ್ತದೆ' ಅನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

ಇನ್ನು ದಿನದಲ್ಲಿ ಒಂದು ಘಳಿಗೆಯನ್ನೂ ವೇಸ್ಟ್ ಮಾಡಲು ಬಯಸದ ಮೋದಿ, ತಮ್ಮ ಸಹಾಯಕ ನಾಯಕರ ಮುಖಾಂತರ ಮುಂಚಿತವಾಗಿಯೇ ಸಭೆಗಳಿಗೆ ಮಾರ್ಗಸೂಚಿಗಳನ್ನು ನೀಡುತ್ತಿರುತ್ತಾರೆ. (ರಾಜೀವ್ ಮಾದರಿಯಲ್ಲಿ ಮೋದಿ ಹತ್ಯೆಗೆ ಸಂಚು)

ಕಳೆದೊಂದು ವರ್ಷದಿಂದ ಮೋದಿ ಹೊಟ್ಟೆಬಿರಿಯುವಂತೆ ಊಟ ಮಾಡಿದವರೇ ಅಲ್ಲ. ಗುಣಮಟ್ಟ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅವರ ಆಹಾರದ ಮೇಲೆ ನಿಗಾಯಿಡಲಾಗುತ್ತದೆ. ಊಟಕ್ಕೆಂದು ಸಮಯ ಕಳೆಯಲು ಇಚ್ಚಿಸದ ಮೋದಿ ವಿಮಾನ/ಹೆಲಿಕಾಪ್ಟರಿನಲ್ಲೇ ಊಟದ ಶಾಸ್ತ್ರ ಮುಗಿಸುತ್ತಾರೆ. (ಚಾಲೆಂಜ್! ಈ ಮೂರೂ ಗ್ರಾಮಗಳಲ್ಲಿ ಮೋದಿಗೇ ಮತ )

English summary
BJP prime ministerial candidate Narendra Modi day to day life cycle in Lok Sabha polls 2014. clocking more than 100 rallies a month, even addressing up to five a day in the scorching heat of summer 64 year old Modi is all set to reach Delhi seat in time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X