ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ 370 ವಿಧಿ ರದ್ದು ಮಾಡುವಂತಿಲ್ಲ: ಒಮರ್

By Mahesh
|
Google Oneindia Kannada News

ಶ್ರೀನಗರ, ಮೇ.28: ಮೋದಿ ಸಂಪುಟದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರ ಆರ್ಟಿಕಲ್ 370 ಕುರಿತ ಹೇಳಿಕೆ ಹಾಗೂ ಸಿಎಂ ಒಮರ್ ಅಬ್ದುಲ್ಲಾ ಅವರ ಪ್ರತಿಕ್ರಿಯೆಕಣಿವೆ ರಾಜ್ಯ ಕಾಶ್ಮೀರದಲ್ಲಿ ಕಿಚ್ಚು ಹಬ್ಬಿಸಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ 370 ವಿಧಿಗೆ ಬಿಜೆಪಿ ಸರ್ಕಾರ ಕೊಕ್ಕೆ ಹಾಕಲು ಸಾಧ್ಯವಿಲ್ಲ. ಸುಮ್ಮನೆ ಗೊಂದಲ ಮೂಡಿಸಿ ರಾಜ್ಯದ ಜನರನ್ನು ಪ್ರತ್ಯೇಕತೆಯಿಂದ ನೋಡುವಂಥ ಪರಿಸ್ಥಿತಿ ಸೃಷ್ಟಿಸಬೇಡಿ ಎಂದು ಒಮರ್ ಹೇಳಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ನೀಡಲಾಗಿರುವ ಸಂವಿಧಾನದ 370 ವಿಧಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಈ ಮೂಲಕ ದಶಕಗಳಿಂದ ಚರ್ಚೆಯ ಹಂತದಲ್ಲಿದ್ದ ವಿಚಾರದ ಬಗ್ಗೆ ದೃಢ ತೀರ್ಮಾನ ಕೈಗೊಳ್ಳಲು ಮೋದಿ ಸರ್ಕಾರ ಮುಂದಾಗಿದೆ. ಈ ಬಗ್ಗೆ ಮಾತನಾಡಿರುವ ಪ್ರಧಾನಿ ಕಚೇರಿಯಲ್ಲಿ ಸಹಾಯಕ ಸಚಿವರಾಗಿರುವ ಜಿತೇಂದ್ರ ಸಿಂಗ್ ಕಣಿವೆ ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ ಬಗ್ಗೆ ಚರ್ಚೆಯಾಗಬೇಕು ಎಂದಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು.

'ವಿಶೇಷ ಸ್ಥಾನಮಾನ ಹಿಂಪಡೆಯುವ ಬಗ್ಗೆ ಚುನಾವಣೆಗೂ ಮುನ್ನ ಬಿಜೆಪಿ ಸಾರ್ವಜನಿಕರ ಮುಂದಿಟ್ಟಿತ್ತು. ಇದು ತಿಳಿದಿದ್ದರೂ ಜನ ಅಲ್ಲಿನ ಒಟ್ಟು ಲೋಕಸಭಾ ಕ್ಷೇತ್ರಗಳಲ್ಲಿ ಅರ್ಧದಷ್ಟು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ' ಎಂದುಸಚಿವ ಜಿತೇಂದ್ರ ಸಿಂಗ್ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.

ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ವಿಶೇಷ ಮಾನ್ಯತೆ ಇರಬೇಕು ಇಲ್ಲದಿದ್ದರೆ ಕಾಶ್ಮೀರ ಭಾರತದ ಭಾಗವಾಗಿರುವುದಿಲ್ಲ ಎಂದು ಉದ್ಧಟತನದ ಮಾತನಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು 'ನಾನು ಮಾಡಿದ ಟ್ವೀಟ್ ಅನ್ನು ಮೋದಿ ಸರ್ಕಾರ ಸೇವ್ ಮಾಡಿ ಇಟ್ಟುಕೊಳ್ಳಬೇಕು. ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370 ವಿಧಿ ಜಾರಿಯಲ್ಲಿರಬೇಕು. ಇಲ್ಲದಿದ್ದರೆ ಅದು ಭಾರತದಿಂದ ಪ್ರತ್ಯೇಕಗೊಳ್ಳಲಿದೆ' ಎಂದಿದ್ದಾರೆ.

ಯಾರೂ ಕೂಡಾ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ

ಯಾರೂ ಕೂಡಾ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ

ಜಮ್ಮು ಮತ್ತು ಕಾಶ್ಮೀರ ರಾಜ್ಯವಷ್ಟೇ ಅಲ್ಲ ಇನ್ನೂ ಅನೇಕ ರಾಜ್ಯಗಳಲ್ಲಿ 370ನೇ ವಿಧಿ ಜಾರಿಯಲ್ಲಿದೆ ಆದರೆ ಯಾರೂ ಕೂಡಾ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬಿಜೆಪಿ ಸರ್ಕಾರ ಕಣಿವೆ ರಾಜ್ಯದ ಮೆಲೆ ಕಣ್ಣಿಟ್ಟಿರುವುದೇಕೆ ಎಂದು ಒಮರ್ ಪ್ರಶ್ನಿಸಿದ್ದಾರೆ.

ಒಮರ್ ಟ್ವೀಟ್ ಸರಣಿ ಭಾಗ-1

ಒಮರ್ ಉದ್ಧಟತನಕ್ಕೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ, ಕಾಶ್ಮೀರ ಭಾರತದ ಅಂಗ. ಇನ್ನು ಮುಂದೆ ಅದು ಸರಿಯಾದ ದಿಕ್ಕಿನಲ್ಲೇ ಸಾಗಲಿದೆ. ಅಬ್ದುಲ್ಲಾ ಅಲ್ಲಿರಬೇಕೋ ಬೇಡವೋ ಎಂದು ನಿರ್ಧರಿಸುವುದು ಅವರಿಗೆ ಸೇರಿದ್ದು ಎಂದಿದ್ದಾರೆ.

ಒಮರ್ ಟ್ವೀಟ್ ಸರಣಿ ಭಾಗ-2

ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ವಿಶೇಷ ಮಾನ್ಯತೆ ಇರಬೇಕು ಇಲ್ಲದಿದ್ದರೆ ಕಾಶ್ಮೀರ ಭಾರತದ ಭಾಗವಾಗಿರುವುದಿಲ್ಲ ಎಂದು ಉದ್ಧಟತನದ ಮಾತನಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು 'ನಾನು ಮಾಡಿದ ಟ್ವೀಟ್ ಅನ್ನು ಮೋದಿ ಸರ್ಕಾರ ಸೇವ್ ಮಾಡಿ ಇಟ್ಟುಕೊಳ್ಳಬೇಕು. ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370 ವಿಧಿ ಜಾರಿಯಲ್ಲಿರಬೇಕು. ಇಲ್ಲದಿದ್ದರೆ ಅದು ಭಾರತದಿಂದ ಪ್ರತ್ಯೇಕಗೊಳ್ಳಲಿದೆ' ಎಂದಿದ್ದಾರೆ.

ಜಮ್ಮು ಹಾಗೂ ಭಾರತ ನಡುವಿನ ಕೊಂಡಿ

ಸಂವಿಧಾನದ 370ನೇ ಪರಿಚ್ಛೇದ ಜಮ್ಮು ಹಾಗೂ ಭಾರತ ನಡುವಿನ ಕೊಂಡಿ

ಏನಿದು 370ನೇ ಪರಿಚ್ಛೇದ

ಏನಿದು 370ನೇ ಪರಿಚ್ಛೇದ

ಸಂವಿಧಾನದ 370ನೇ ಪರಿಚ್ಛೇದ ಜಾರಿ ಇರುವ ಕಾಶ್ಮೀರದಲ್ಲಿ ಪೌರತ್ವ, ನಿರ್ದಿಷ್ಟ ಆಸ್ತಿಯ ಮಾಲೀಕತ್ವ, ಮೂಲಭೂತ ಹಕ್ಕುಗಳ ಅನುಷ್ಠಾನ ಮುಂತಾದ ವಿಚಾರಗಳಲ್ಲಿ ವಿಶೇಷ ಕಾನೂನುಗಳು ಅನುಷ್ಠಾನಗೊಳ್ಳುತ್ತವೆ. ಕೇಂದ್ರ ಸರ್ಕಾರದ ಯಾವುದೇ ನಿರ್ಧಾರಗಳನ್ನು ಆ ರಾಜ್ಯದಲ್ಲಿ ಜಾರಿಗೊಳಿಸಬೇಕಾದಲ್ಲಿ, ಅದಕ್ಕೆ ಆ ನಿರ್ದಿಷ್ಟ ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರದ ಸಹಮತ ಅಗತ್ಯ. ಆದರೆ, ದೇಶದ ರಕ್ಷಣೆ, ವಿದೇಶಾಂಗ ವ್ಯವಹಾರ, ಮಾಹಿತಿ ಮತ್ತು ಪ್ರಸಾರ ಹಕ್ಕುಗಳ ಇಲಾಖೆಗಳ ನಿಯಮಗಳು ಮಾತ್ರ ಇತರೆ ರಾಜ್ಯಗಳಿಗೆ ಅನ್ವಯವಾಗುವಂತೆ 370 ಪರಿಚ್ಛೇದ ಅನ್ವಯವಾಗುವ ರಾಜ್ಯಕ್ಕೂ ನೇರವಾಗಿ ಅನ್ವಯವಾಗುತ್ತದೆ.

English summary
Contending that it was impossible for BJP government to abrogate Article 370 that gives special status to Jammu and Kashmir, Chief Minister Omar Abdullah today said confusion was being deliberately created on the issue which would further alienate the people of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X