ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಸೋಲಿಗೆ ಮಾಧ್ಯಮಗಳೇ ಕಾರಣವಂತೆ!

By Shubham Ghosh
|
Google Oneindia Kannada News

ಬೆಂಗಳೂರು: ಆ: 16: ಲೋಕಸಭಾ ಚುನಾವಣೆಯ ಸೋಲಿಗೆ ಕಾಂಗ್ರೆಸ್‌ ಹೊಸ ಕಾರಣ ಹುಡುಕಿಕೊಂಡಿದೆ. ಸೋಲಿಗೆ ಮಾಧ್ಯಮಗಳೇ ಕಾರಣ ಎಂದು ರಾಗ ತೆಗೆದಿದೆ. 2014ರ ಲೋಕಸಭಾ ಚುನಾವಣೆ ಸೋಲಿಗೆ ಮಾಧ್ಯಮಳ ನಡವಳಿಕೆಯೇ ಕಾರಣ ಹೊರತು ಪಕ್ಷದ ನಾಯಕತ್ವ ಕೊರತೆಯಲ್ಲ ಎಂದು ಹೇಳಿದೆ. ಕಾಂಗ್ರೆಸ್‌ ನಾಯಕರು ಇದೀಗ ಮಾಧ್ಯಮಗಳತ್ತ ಬೆರಳು ತೋರಿಸಲು ಆರಂಭಿಸಿದ್ದಾರೆ.

ವೈದ್ಯರಿಗೆ ರೋಗ ಬಂದರೆ ಔಷಧ ಕೋಡೋರು ಯಾರು?
ಭಿನ್ನಾಭಿಪ್ರಾಯಗಳ ಗೂಡಾಗಿರುವ ಕಾಂಗ್ರೆಸ್‌ ವಿನಾ ಕಾರಣ ಮಾಧ್ಯಮದ ಮೇಲೆ ಆರೋಪ ಮಾಡಲು ಆರಂಭಿಸಿದೆ. ವೈದ್ಯರಿಗೆ ರೋಗ ಬಂದರೆ ಔಷಧ ಕೋಡೋರು ಯಾರು? ಎಂಬಂಥ ಸ್ಥಿತಿಯಿದೆ ಕಾಂಗ್ರೆಸ್‌. ಉತ್ತಮ ನಾಯಕತ್ವವಿಲ್ಲದೇ ಪಕ್ಷವನ್ನು ಮತ್ತೇ ಬಲಪಡಿಸಲು ಅಸಾಧ್ಯ ಎಂಬುದು ಕಾಂಗ್ರೆಸ್ಸಿಗರಿಗೆ ಗೊತ್ತಿರದ ಸಂಗತಿಯೇನಲ್ಲ. ಪಕ್ಷದ ಸಾಮಾನ್ಯ ನಾಯಕರು 'ಗಾಂಧಿ'ಗಳ ನಡವಳಿಕೆ ವಿರೋಧಿಸುತ್ತಿದ್ದರೂ ಧ್ವನಿ ಗಟ್ಟಿಯಾಗಿ ಹೊರಹೊಮ್ಮಿಲ್ಲ. ಮಧ್ಯ ವರ್ಗದ ನಾಯಕರು ಪಕ್ಷ ಸೋಲಲಿ, ಗೆಲ್ಲಲ್ಲಿ ಹೈಕಮಾಂಡ್‌ಗೆ ಜೈಕಾರ ಹಾಕುವುದನ್ನು ಬಿಟ್ಟಿಲ್ಲ. ಇದು ಒಂದು ಶಾಶ್ವತ ಪರಂಪರೆ ರೀತಿ ನಡೆದುಕೊಂಡು ಬಂದಿರುವುದು ಎಲ್ಲರಿಗೂ ತಿಳಿದೇ ಇದೆ. ಇಂಥ ಅನೇಕ ತಪ್ಪುಗಳನ್ನು ತನ್ನಲ್ಲಿಯೇ ಇಟ್ಟುಕೊಂಡಿರುವ ಕಾಂಗ್ರಸ್‌ ಮಾಧ್ಯಮಗಳ ಮೇಲೆ ಯಾಕೆ ಗೂಬೆ ಕೂರಿಸುವ ಯತ್ನ ನಡೆಸುತ್ತಿದೆ?

bjp

ಮೋದಿ ತೆಗಳಿದ ಮಾಧ್ಯಮಗಳ ಬಗ್ಗೆ ಕಾಂಗ್ರೆಸ್‌ ಏನೆನ್ನುತ್ತೆ?

ಲೋಕಸಭಾ ಚುನಾವಣೆ ವೇಳೆ ಬಹುತೇಕ ಮಾಧ್ಯಮಗಳು ಮೋದಿಯನ್ನು ಖಳನಾಯಕನಂತೆ ಬಿಂಬಿಸಲು ಪ್ರಯತ್ನಪಟ್ಟಿದ್ದು ಸುಳ್ಳಲ್ಲ. 2002ರ ಗುಜರಾತ್‌ ದುರಂತವನ್ನೇ ಇಟ್ಟುಕೊಂಡು ಮೋದಿ ಮತ್ತು ಬಿಜೆಪಿ ಮೇಲೆ ಮಾಧ್ಯಮಗಳು ಹರಿಹಾಯ್ದಿದ್ದವು. ಜನರನ್ನು ಒಂದು ರೀತಿಯ ಭ್ರಮೆಗೆದೂಡಲು ಪ್ರಯತ್ನಿಸಿದ್ದವು. ಆದರೆ ಮೋದಿ ಅಲೆ ಎದುರು ಮಾಧ್ಯಮಗಳ ಅಪಪ್ರಚಾರ ನಡೆಯಲಿಲ್ಲ.

ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಹೆಸರಲ್ಲೇ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿತು. ಈಗ ಮಾಧ್ಯಮಗಳನ್ನು ದೂರುತ್ತಿರುವ ಕಾಂಗ್ರೆಸ್‌ ನಾಯಕರು ಅಂದು ಮೋದಿಯನ್ನು ತೆಗಳುತ್ತಿದ್ದಾಗ ಧ್ವನಿಗೂಡಿಸಿದ್ದರು ಎಂಬುದನ್ನು ಯಾರೂ ಮರೆಯುವುದಿಲ್ಲ. ಅಷ್ಟಾಗಿಯೂ ಈಗ ನರೇಂದ್ರ ಮೋದಿ ಸ್ವತಃ ಪ್ರಧಾನಿಯಾಗಿದ್ದಾರೆ ಇದು ಕಾಂಗ್ರೆಸ್‌ಗೆ ಯಾವ ಮುಜುಗರ ತರುತ್ತಿಲ್ಲವೇ?

2004ರ ಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್‌ ಮಾಧ್ಯಮಗಳನ್ನು ಅಭಿನಂದಿಸಿತ್ತೇ?
2004ರ ಲೋಕಸಭಾ ಚುನಾವಣೆಯ ಅನಿರೀಕ್ಷಿತ ಗೆಲುವಿನ ಬಳಿಕ ಸೋನಿಯಾ ಗಾಂಧಿ ಮಾಧ್ಯಮಗಳನ್ನು ಅಭಿನಂದಿಸಿದ್ದರೇ? ವಾಜಪೇಯಿ ಸರ್ಕಾರದ ರಾಜತಾಂತ್ರಿಕ ಕೊರತೆ ಬಿಜೆಪಿ ಸೋಲಿಗೆ ಕಾರಣವಾಗಿತ್ತೇ ವಿನಃ ಕಾಂಗ್ರೆಸ್‌ ಮೇಲಿಟ್ಟ ವಿಶ್ವಾಸವಲ್ಲ. ಎಲ್ಲ ಸರಿ ಇದ್ದುದ್ದರಿಂದ 2004ರಲ್ಲಿ ಸುಮ್ಮನಿದ್ದ ಕಾಂಗ್ರೆಸ್‌ ಈಗ ಮಾಧ್ಯಮಗಳ ಮೇಲೆ ಆರೋಪಗಳ ಸುರಿಮಳೆ ಮಾಡುತ್ತಿದೆ. ಮುಂದೆ ಎದುರಾಗುವ ಸಣ್ಣ ಪುಟ್ಟ ಚುನಾವಣೆಯಲ್ಲಿ ಈ ರೀತಿಯ ಆರೋಪಗಳು ಕೊಂಚ ಲಾಭ ತರಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ ತಲೆಯಲ್ಲಿರಬಹುದು.

ಎಂದೂ ಮಾಧ್ಯಮದೊಂದಿಗೆ ಸ್ಪಂದಿಸದ ಕಾಂಗ್ರೆಸ್‌ ನಾಯಕರು
ಹತ್ತು ವರ್ಷಗಳಿಂದ ಅಧಿಕಾರದ ಅಮಲಿನಲ್ಲಿದ್ದ ಕಾಂಗ್ರೆಸ್‌ ನಾಯಕರು ಯಾವತ್ತೂ ಮಾಧ್ಯಮಗಳೊಂದಿಗೆ ಉತ್ತಮವಾಗಿ ಸ್ಪಂದಿಸಲಿಲ್ಲ. ಒಂದು ರೀತಿಯ ತಿರಸ್ಕಾರ ಭಾವನೆಯಿಂದಲೇ ಮಾಧ್ಯಮಗಳತ್ತ ನೋಟ ಬೀರುತ್ತಿದ್ದರು. ಉತ್ತಮ ಮತ್ತು ಪಾರದರ್ಶಕ ಆಡಳಿತ ನೀಡುವಲ್ಲಿ ಮಾಧ್ಯಮಗಳನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ಕಿಂಚಿತ್ತೂ ಯೋಚಿಸಲಿಲ್ಲ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆಡಳಿತ ನಡೆಸಲು ಪ್ರತಿದಿನ ಹೆಣಗಾಡಿದರು. ಕಾಂಗ್ರೆಸ್‌ ಸೋಲಿಗೆ ದುರ್ಬಲ ಪ್ರಧಾನಿ ಮತ್ತು 'ಗಾಂಧಿ' ಕುಟುಂಬದ ದಮನಕಾರಿ ನೀತಿಗಳು ಕಾರಣ ಎಂಬ ಸಂಗತಿ ಸ್ವತಃ ಕಾಂಗ್ರೆಸ್ಸಿಗರಿಗೆ ಗೊತ್ತಾಗಿದ್ದು ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರವೇ.

ಮೊದಲು ತನ್ನ ವೈರಿ ಯಾರೆಂಬುದನ್ನು ಕಾಂಗ್ರೆಸ್‌ ಕಂಡುಕೊಳ್ಳಬೇಕಾಗಿದೆ
ಇವತ್ತಿನ ಪ್ರತಿಯೊಂದು ಚುನಾವಣೆಗಳಲ್ಲೂ ಸಾಮಾಜಿಕ ಮಾಧ್ಯಮಗಳದ್ದೇ ಪ್ರಮುಖ ಪಾತ್ರ. ಮಾಧ್ಯಮಗಳ ಮೇಲೆ ವೃಥಾ ಆರೋಪ ಮಾಡುವುದನ್ನು ಬಿಟ್ಟು ಪಕ್ಷದ ಸೋಲಿಗೆ ನಿಜವಾದ ಕಾರಣ ಏನೆಂಬುದನ್ನು ಕಾಂಗ್ರೆಸ್‌ ಹುಡುಕಬೇಕಾಗಿದೆ. ಶೋಚನೀಯ ಸ್ಥಿತಿಗೆ ತಲುಪಿರುವ ಕಾಂಗ್ರೆಸ್‌ ಮತ್ತು ಆ ಪಕ್ಷದ ನಾಯಕರು ಮಾಧ್ಯಮಗಳೊಂದಿಗೆ ಸೌಹಾರ್ದಯುತವಾಗಿ ವರ್ತಿಸುವುದನ್ನು ಕಲಿಯಬೇಕಾಗಿದೆ. ತನ್ನ ವೈರಿ ಯಾರು ಎಂದು ಸ್ಪಷ್ಟವಾಗಿ ಗುರುತಿಸಿ ಅದನ್ನು ಮೆಟ್ಟಿ ನಿಲ್ಲುವತ್ತ ಕಾಂಗ್ರೆಸ್‌ ಚಿಂತನೆ ನಡೆಸಬೇಕಿದೆ.

ಲೋಕಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೊಂದು ಪಾಠವಾಗಿದ್ದು ಆಧುನಿಕ ಮಾಧ್ಯಮಗಳೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಮೊದಲು ಅರ್ಥಮಾಡಿಕೊಂಡರೆ ಒಳಿತು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ದಂಡ ತೆರಬೇಕಾಗುತ್ತದೆ.

ಇಂದಿರಾ ಗಾಂಧಿ ಪಾತ್ರ ನಿಭಾಯಿಸಲು ಸಾಧ್ಯವಾ?
ಲೋಕಸಭಾ ಚುನಾವಣೆ ಸೋಲಿಗೆ ಮೇಲ್ಮಟ್ಟದ ನಾಯಕತ್ವ ಕೊರತೆ ಪ್ರಮುಖ ಕಾರಣ ಎಂಬ ಸಂಗತಿ ಕಾಂಗ್ರೆಸ್ಸಿಗರಿಗೆ ಗೊತ್ತೆ ಇದೆ. ಸರಿಯಾದ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಬೇಕಾದ ಅನಿವಾರ್ಯ ದೇಶದೆಲ್ಲಡೆ ಕಾಂಗ್ರೆಸ್‌ಗೆ ಎದುರಾಗಿದೆ. ಇಂದಿರಾ ಗಾಂಧಿಯಂಥ ನಾಯಕತ್ವ ಪಕ್ಷದಲ್ಲಿಲ್ಲ ಎಂಬುದನ್ನು ಕಾಂಗ್ರೆಸ್‌ ನಾಯಕರು ಮನವರಿಕೆ ಮಾಡಿಕೊಳ್ಳಬೇಕಿದೆ. ಇನ್ನಾದರೂ ಮಾಧ್ಯಮಗಳನ್ನು ದೂರುವುದು ಬಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಬೇಕಿದೆ.

English summary
The Congress, after a lot of ‘soul searching', has finally arrived at a conclusion on what failed it in the general election this year. According to the party, it is the media and not the top leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X