ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣ್ ಜೇಟ್ಲಿ ಮುಂದಿನ ಹಣಕಾಸು ಸಚಿವ -ಮೋದಿ

By Srinath
|
Google Oneindia Kannada News

ನವದೆಹಲಿ, ಏ. 26: ಹಾಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿ ನಿರೀಕ್ಷೆಯಂತೆ ನರೇಂದ್ರ ಮೋದಿ ಅವರೇನಾದರೂ ಪ್ರಧಾನಿಯಾದರೆ ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ದೇಶದ ಮುಂದಿನ ಹಣಕಾಸು ಸಚಿವರಾಗುತ್ತಾರಂತೆ.

ಈ ಬಗ್ಗೆ ಸ್ವತಃ ನರೇಂದ್ರ ಮೋದಿ ಅವರೇ ನಿನ್ನೆ ಅಮೃತಸರದಲ್ಲಿ (ಏ 25) ನಡೆದ 'ಭಾರತ್ ವಿಜಯ್' ಸಾರ್ವಜನಿಕ ಸಭೆಯಲ್ಲಿ ಸುಳಿವು ನೀಡಿದ್ದಾರೆ. ಅರುಣ್ ಜೇಟ್ಲಿ ಅವರು ಕೇಂದ್ರ ಸರಕಾರಕ್ಕೆ ಒಳ್ಳೆಯ ಆಸ್ತಿ ಆಗುವುದಷ್ಟೇ ಅಲ್ಲ; ಅಕಾಲಿ ದಳ ನೇತೃತ್ವದ ಪಂಜಾಬ್ ಸರಕಾರಕ್ಕೂ ವರವಾಗುತ್ತಾರೆ ಎಂದು ಜೇಟ್ಲಿಯನ್ನು ಮೋದಿ ಪ್ರಶಂಸಿಸಿದರು.

Arun Jaitley next Finance Minister- Narendra Modi hints at Amritsar

ಅರುಣ್ ಜೇಟ್ಲಿ ಅವರು ಗೆದ್ದುಬಂದರೆ ನಮ್ಮ ಕೇಂದ್ರ ಸರಕಾರಕ್ಕೆ ದೊಡ್ಡ ಸಹಾಯವಾಗುತ್ತದೆ. ಅದು ಬಾದಲ್ ಸರಕಾರಕ್ಕೂ ಅದರಿಂದ ಪ್ರಯೋಜವಾದೀತು. ನನಗಿಂತ ಜೇಟ್ಲಿ ಅವರಿಂದಲೇ ಪಂಜಾಬ್ ಜನತೆ ಹೆಚ್ಚಿನದನ್ನು ನಿರೀಕ್ಷಿಸಬಹುದು' ಎಂದೂ ಸಭೆಯನ್ನುದ್ದೇಶಿಸಿ ಮೋದಿ ಹೇಳಿದರು. (ಪ್ರಧಾನಿ ಮನಮೋಹನ್ ಸಿಂಗ್ ಸಹೋದರ ಬಿಜೆಪಿಗೆ ಸೇರ್ಪಡೆ)

ಗಮನಾರ್ಹವೆಂದರೆ ಪಂಜಾಬಿನ ಅಠಾರಿಯಲ್ಲಿ ಕಳೆದ ತಿಂಗಳು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ (88) ಅವರು ' ಬಿಜೆಪಿ ಅಧಿಕಾರಕ್ಕೆ ಬಂದರೆ ಅರುಣ್ ಜೇಟ್ಲಿ ದೇಶದ ಮುಂದಿನ ಡೆಪ್ಯುಟಿ ಪ್ರೈಂ ಮಿನಿಸ್ಟರ್' ಎಂದು ಘಂಟಾಘೋಷವಾಗಿ ಹೇಳಿದ್ದರು. ಅಂದಹಾಗೆ ಪಂಜಾಬಿನ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ಸಿನ ಅಮರಿಂದರ್ ಸಿಂಗ್ ಅವರು ಅರುಣ್ ಜೇಟ್ಲಿ ಎದುರಾಳಿ.

'ಅರುಣ್ ಜೇಟ್ಲಿ ಅವರು ಸಂಸದರಾಗಿ ಗುಜರಾತಿಗೆ ಏನು ಮಾಡಿದ್ದಾರೆ ಎಂಬುದನ್ನೇ ಗಮನಿಸಿ. ಅನೇಕ ವರ್ಷಗಳಿಂದ ಜೇಟ್ಲಿ ಅವರು ಗುಜರಾತ್ ಅಭಿವೃದ್ಧಿ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರೀಗ ಪಂಜಾಬಿನಿಂದ ಕಣಕ್ಕಿಳಿದಿರುವುದು ಗುಜರಾತಿಗೆ ನಷ್ಟವಾದಂತೆ. ಆದರೆ ಅಮೃತಸರಕ್ಕೂ ಅವರು ನೆರವಾಗಲಿದ್ದಾರೆ' ಎಂದು ಮೋದಿ ಹೇಳಿದರು.

'ಎನ್ ಡಿಎ ಸರಕಾರಕ್ಕೆ ಈಗಾಗಲೇ ಶಂಕುಸ್ಥಾಪನೆಯಾಗಿದೆ. ಕಾಂಗ್ರೆಸ್ ಸೋಲುವುದು ಖಚಿತ. ಅಕಾಲಿದಳ ಮತ್ತು ಬಿಜೆಪಿ ಕೇಂದ್ರದಲ್ಲಿ ಸರಕಾರ ರಚಿಸುವುದು ಖಚಿತ' ಎಂದು ಮೋದಿ ಹೇಳಿದ್ದಾರೆ.

English summary
Lok Sabha polls 2014 - Arun Jaitley next Finance Minister- Narendra Modi hints at Amritsar. Hinting at a possible key position for Arun Jaitley in the government if NDA comes to power, Narendra Modi on Friday said the senior BJP leader will be an asset not only to the Centre but also to the Akali Dal-led government in Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X