ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವಿಶ್ವ' ತೋರಿಸಿದ್ದ ಸೈಬರ್‌ ಕೆಫೆಗಳಿಗೆ ಬೀಗ?

|
Google Oneindia Kannada News

ಬೆಂಗಳೂರು, ಸೆ. 1 : ಇಡಿ ಭಾರತಕ್ಕೆ ಒಂದು ಕಾಲದಲ್ಲಿ ಅಂತರ್ಜಾಲವೆಂಬ 'ವಿಶ್ವ' ತೋರಿಸಿದ್ದ ಸೈಬರ್‌ ಕೆಫೆಗಳು ಕೆಲವೇ ದಿನದಲ್ಲಿ ಬಾಗಿಲು ಹಾಕಲಿವೆಯೇ? ಎಂಬ ಪ್ರಶ್ನೆ ಎದುರಾಗಿದೆ.

90ರ ಮತ್ತು ಕಳೆದ ದಶಕದಲ್ಲಿ ದೇಶದ ಮಹಾನಗರದಿಂದ ಹಿಡಿದು ಚಿಕ್ಕ ಚಿಕ್ಕ ಪಟ್ಟಣಗಳಲ್ಲೂ ಸೈಬರ್‌ ತಾಣಗಳು ತಲೆ ಎತ್ತಿದ್ದವು. ಸ್ನೇಹಿತರೊಂದಿಗೆ ಚಾಟ್‌ ನಡೆಸಲು, ಕಾಲೇಜು ಅಡ್ಮಿಶನ್‌ ಮಾಡಿಸಲು, ಅಶ್ಲೀಲ ಚಿತ್ರ ವೀಕ್ಷಿಸಲು ಹೀಗೆ ಅವರವರ ಭಾವಕ್ಕೆ ತಕ್ಕಂತೆ ಸೈಬರ್‌ ಕೆಫೆಗಳು ಬಳಕೆಯಾಗುತ್ತಿದ್ದವು. ಬಾಲಿವುಡ್‌ ಸಿನಿಮಾಗಳ ರೊಮ್ಯಾನ್ಸ್‌ ದೃಶ್ಯಗಳಿಗೂ ಆಧಾರವಾಗಿದ್ದವು.

cyber

ಆದರೆ ಈಗ ಸೈಬರ್‌ ಕೆಫೆಗಳು ವಿಡಿಯೋ ಪಾರ್ಲರ್‌ ಆಗಿಯೋ, ಗೇಮ್‌ ಪಾರ್ಲರ್‌ ಆಗಿಯೋ ಬದಲಾವಣೆ ಹೊಂದುತ್ತಿವೆ. ಕೆಲವೆಡೆ ಸಂಪೂರ್ಣವಾಗಿ ಮರೆಯಾಗುತ್ತಿವೆ. ಈ ಬೆಳವಣಿಗೆ ಮಹಾನಗರದಿಂದ ಹಿಡಿದು, ಚಿಕ್ಕ ಪಟ್ಟಣದಲ್ಲೂ ಒಂದೇ ತೆರನಾಗಿದೆ. ಕೆಲ ಕಾಯಂ ಗ್ರಾಹಕರನ್ನು ನಂಬಿಕೊಂಡಿರುವ ಕೆಫೆಗಳು ಮಾತ್ರ ಅಸ್ತಿತ್ವ ಉಳಿಸಿಕೊಂಡಿವೆ.

ಸೈಬರ್‌ ಕೆಫೆಗೆ ಹೊಡೆತ ಕೊಟ್ಟವರು ಯಾರು?

ಕಳೆದ 2013ರಲ್ಲಿ ಕೇವಲ ಶೇ. 5ರಷ್ಟು ಜನ ಸೈಬರ್‌ ಕೆಫೆಗೆ ಭೇಟಿ ನೀಡಿದ್ದರು. 2009ರಲ್ಲಿ ಈ ಪ್ರಮಾಣ ಶೇ. 46ರಷ್ಟಿತ್ತು. ಆದರೆ ಇದೆ ಅವಧಿಗೆ ಹೋಲಿಸಿದರೆ ಮನೆಯಿಂದ ಅಂತರ್ಜಾಲ ಜಾಲಾಡುತ್ತಿದ್ದವರ ಸಂಖ್ಯೆ ಶೇ. 58ರಿಂದ ಶೇ.78ಕ್ಕೆ ಏರಿದೆ. ಮೊಬೈಲ್‌ನಲ್ಲಿ ಬ್ರೌಸ್‌ ಮಾಡುವವರ ಸಂಖ್ಯೆ ಶೇ.12 ರಿಂದ ಶೇ. 18ಕ್ಕೇರಿದೆ ಎಂದು ಟಾಟಾ ಕನ್ಸಟನ್ಸಿಯ ಸಮೀಕ್ಷೆಯೊಂದು ಹೇಳುತ್ತದೆ.

ಮತ್ತೊಂದು ಆಯಾಮದಲ್ಲಿ ಹೇಳುವುದಾದರೆ ಸೈಬರ್‌ ಕೆಫೆಗಳ ಅವನತಿಗೆ ಸ್ಮಾರ್ಟ್ ಫೋನ್‌ಗಳ ಔನತ್ಯ, ಕಡಿಮೆ ದರದಲ್ಲಿ ವಿವಿಧ ಕಂಪನಿಗಳು ಬ್ರಾಡ್‌ಬ್ಯಾಂಡ್‌ ಸೇವೆ ಕಲ್ಪಿಸಿದ್ದೂ ಕಾರಣ.

'ನನ್ನ ಮೊಬೈಲ್‌ನಲ್ಲೇ ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಫೇಸ್‌ಬುಕ್‌ ಅಪಡೆಟ್ಸ್‌ ಚೆಕ್ ಮಾಡುತ್ತೇನೆ. ನಾನೇಕೆ ಸೈಬರ್‌ ಕೆಫೆಗೆ ಹೋಗಬೇಕು?' ಎಂಬುದು ಮುಂಬೈ ವಿದ್ಯಾರ್ಥಿಯೊಬ್ಬನ ಪ್ರಶ್ನೆ.

ಕಾಲೇಜುಗಳ ಸಮೀಪವಿರುವ ಕೆಲವೊಂದು ಸೈಬರ್‌ ಕೆಫೆಗಳು ಮಾತ್ರ ಇಂದಿಗೂ ಅಸ್ತಿತ್ವ ಉಳಿಸಿಕೊಂಡಿವೆ. ಅದಕ್ಕೆ ಕಾರಣ ಅಲ್ಲಿನ ವಿದ್ಯಾರ್ಥಿಗಳು ಎನ್ನಬಹುದಾರೂ, ಅವರು ಆಗಮಿಸುತ್ತಿರುವುದು ಬ್ರೌಸಿಂಗ್‌ಗಾಗಿ ಅಲ್ಲ. ಪ್ರಿಂಟ್‌ ಔಟ್‌ ಪಡೆದುಕೊಳ್ಳಲು, ಕಂಪ್ಯೂಟರ್‌ ಗೇಮ್‌ ಆಡಲು ಎಂಬುದನ್ನು ಗಮನಿಸಬೇಕಾಗುತ್ತದೆ.

ಬೆಂಗಳೂರಲ್ಲಿ ಪರಿಸ್ಥಿತಿ ಹೇಗಿದೆ?
ಭಾರತದ ಐಟಿ ರಾಜಧಾನಿ ಎಂದೇ ಕರೆಸಿಕೊಂಡಿರುವ ಬೆಂಗಳೂರಿನಲ್ಲೂ ಇದೇ ಪರಿಸ್ಥಿತಿಯಿದೆ. ಅಂತರ್ಜಾಲದ ಹುಚ್ಚು ಜನರಿಗೆ ಇದ್ದಾಗಲೇ ಸೈಬರ್‌ ಕೆಫೆಗಳು ಸಾಕಷ್ಟು ದುಡ್ಡು ಮಾಡಿಕೊಂಡಿವೆ. ಇನ್ನು ಮತ್ತೊಮ್ಮೆ ಜನ ಸೈಬರ್‌ ಕೆಫೆಗೆ ನುಗ್ಗುವಂಥ ವಾತಾವರಣ ಸೃಷ್ಟಿಯಾಗುವುದು ಅಸಾಧ್ಯ ಎಂದು ಬೆಂಗಳೂರು ತಿಪ್ಪಸಂದ್ರದ ಸೈಬರ್‌ ಕೆಫೆ ಜಾಗದಲ್ಲಿ ಹಣ ಚಲಾವಣೆ ಕೇಂದ್ರ ತೆರೆದಿರುವ ಅಭಯ್‌ ಕುಮಾರ್‌ ಸಿಂಗ್‌ ಹೇಳುತ್ತಾರೆ.

ಅನೇಕ ಮಹಾನಗರದ ಬಡಾವಣೆಗಳು ವೈ-ಫೈ ಆಗಿವೆ, ಆಗುತ್ತಿವೆ. ಪಂಚತಾರಾ ಹೋಟೆಲ್‌ಗಳು ಉಚಿತ ಅಂತರ್ಜಾಲ ಸಂಪರ್ಕ ಕಲ್ಪಿಸಿವೆ. ವಿವಿಧ ಟೆಲಿಕಾಂ ಕಂಪನಿಗಳು ಸ್ಪರ್ಧೆಗೆ ಬಿದ್ದು 3 ಜಿ ಸಂಪರ್ಕ ನೀಡುತ್ತಿವೆ ಇದೆಲ್ಲದರ ಪರಿಣಾಮ ಸೈಬರ್‌ ಕೆಫೆಗಳ ಮೇಲಾಗುತ್ತಿದೆ. ವೈ-ಫೈ ಮತ್ತು ವಾಟ್ಸ್‌ ಆಪ್‌ ಯುಗದಲ್ಲಿ ಸೈಬರ್‌ ಕೆಫೆಗಳು ಅಸ್ತಿತ್ವ ಕಾಪಾಡಿಕೊಂಡು ಹೋಗುವುದು ಕಷ್ಟಸಾಧ್ಯ ಎಂದೇ ಹೇಳಬಹುದು.

English summary
The decline of the cybercafe is start now because of the growing popularity of smartphones and cheap broadband. In 2013, a measly 5% visited cybercafes to browse as against 46% in 2009. During the period, internet use from home rose from 58% to 78% and access via cellphones rose from 12% to 18%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X