ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ಆಸ್ತಿ ಕೇವಲ 343 ಕೋಟಿ, ವಾಹನವೇ ಇಲ್ಲ

By Srinath
|
Google Oneindia Kannada News

ಹೈದರಾಬಾದ್, ಏ.18: ಹರಿದು ಹಂಚಿಹೋಗಿರುವ ಆಂಧ್ರ ಪ್ರದೇಶದಲ್ಲಿ ಲೋಕಸಭಾ ಚುನಾವಣಾ ಕಾವು ದಿನೇ ದಿನೆ ಏರುತ್ತಿದೆ. ವೈಎಸ್ಆರ್ ಕಾಂಗ್ರೆಸ್ ಪಕ್ಷದ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ಕಡಪ ಜಿಲ್ಲೆಯ ಪುಲಿವೆಂದಲ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ತಮ್ಮ ಬಳಿ 343 ಕೋಟಿ ರೂ ಆಸ್ತಿ ಪಾಸ್ತಿ ಇದೆಯೆಂದು ನಿನ್ನೆ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಜಗನ್ ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸಿದ್ದಾರೆ.

andhra-assembly-polls-jagan-and-nandamuri-balakrishna-file-nominations
ಇಷ್ಟಾಗಿ ಅವರ ಬಳಿ ವಾಹನವೇ ಇಲ್ಲವಂತೆ. ಚರಾಸ್ತಿ 313 ಕೋಟಿಯಿದ್ದು, ಸ್ಥಿರಾಸ್ತಿ 30 ಕೋಟಿ ರೂ ನಷ್ಟಿದೆ. ಅವರ ಪತ್ನಿ ಭಾರತಿ ಬಳಿ ಚರಾಸ್ತಿ 57 ಕೋಟಿಯಿದ್ದು, ಸ್ಥಿರಾಸ್ತಿ 14 ಕೋಟಿ ರೂ ನಷ್ಟಿದೆ. 2012-13 ಸಾಲಿನಲ್ಲಿ ತಮ್ಮ ಆದಾಯ 2.63 ಕೋಟಿ ರೂ. ಎಂದೂ ಪತ್ನಿಯ ಆದಾಯ 4.21 ಕೋಟಿ ರೂ ಎಂದು ದಾಖಲೆ ನೀಡಿದ್ದಾರೆ.

ಜತೆಗೆ, ಹೈದರಾಬಾದ್ ಸಿಬಿಐ ಕೋರ್ಟಿನಲ್ಲಿ ತಮ್ಮ ವಿರುದ್ಧ 10 ಕ್ಕೂ ಹೆಚ್ಚು ಕ್ರಿಮಿನಲ್ ಕೇಸುಗಳು ದಾಖಲಾಗಿವೆ ಎಂದು ನಮೂದಿಸಿದ್ದಾರೆ.

ನಂದಮೂರಿ ಬಾಲಕೃಷ್ಣ ಆಸ್ತಿ 424 ಕೋಟಿ ರೂ:
ಕರ್ನಾಟಕ ಗಡಿ ಜಿಲ್ಲೆಯಾದ ಹಿಂದೂಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ತೆಲುಗು ದೇಶಂ ಅಭ್ಯರ್ಥಿ ನಂದಮೂರಿ ಬಾಲಕೃಷ್ಣ ಅವರು ಮೊದಲ ಬಾರಿಗೆ ರಾಜಕೀಯ ಅಖಾಡಕ್ಕೆ ಧುಮಕಿದ್ದಾರೆ. ತಮ್ಮ ಬಳಿ 424 ಕೋಟಿ ರೂ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ.

ಚುನಾವಣೆಗೂ ಮುನ್ನವೇ ತಮ್ಮ ಗೆಲುವು ನಿಕ್ಕಿ ಮಾಡಿಕೊಂಡಿರುವ ಬಾಲಯ್ಯನ ಹೆಸರಿನಲ್ಲಿ 170 ಕೋಟಿ ರೂ, ಪತ್ನಿ ವಸುಂಧರಾ ಹೆಸರಿನಲ್ಲಿ 130 ಕೋಟಿ, ಮತ್ತು ಪುತ್ರ ಮೋಕ್ಷಗ್ಯನ ಹೆಸರಿನಲ್ಲಿ 122 ಕೋಟಿ ರೂ ಆಸ್ತಿಯಿರುವುದಾಗಿ ಅವರು ಘೋಷಿಸಿದ್ದಾರೆ.

ನಂದಮೂರಿ ಬಾಲಕೃಷ್ಣಗೆ 25 ಕೋಟಿ ರೂ ಬ್ಯಾಂಕ್ ಸಾಲವೂ ಇದೆ. ಸರಕಾರಕ್ಕೂ ಅವರು 15 ಕ್ಷ ರೂ ಸಾಲ ತೀರಿಸಬೇಕಾಗಿದೆ. 2 ಬಿಎಂಡಬ್ಲ್ಯು ಕಾರುಗಳು, ಒಂದು ಸ್ಕೋಡಾ, ಒಂದು ಆಡಿ ಎ6 ವಾಹನ ಇದೆ. 2012-13ನೇ ಸಾಲಿನಲ್ಲಿ 3 ಕೋಟಿ ರೂ ಆದಾಯ ತೆರಿಗೆಯನ್ನೂ ಪಾವತಿಸಿದ್ದಾರೆ.

English summary
Andhra Assembly polls Jagan Mohan Reddy Nandamuri Balakrishna file nominations. YSR Congress president YS Jagan Mohan Reddy who filed his nomination for Pulivendula assembly seat in Kadapa owns assets of more than Rs. 343 crore but does not own a vehicle. Nandamuri Balakrishna who filed nomination from Hindupur constituency has declared that his assets are worth Rs 424 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X