ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ನೂತನ ಮುಖ್ಯಮಂತ್ರಿ ಇವರೇನಾ?

By Srinath
|
Google Oneindia Kannada News

ಅಹಮದಾಬಾದ್,ಮೇ 21: ಗುಜರಾತಿಗೆ ನೂತನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೊನೆಯ ಕ್ಷಣಗಳ ಬದಲಾವಣೆಗಳ ಹೊರತಾಗಿ, ಆನಂದಿಬೆನ್ ಪಟೇಲ್ ಅವರು ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಂಭವವಿದೆ. ನಿಯೋಜಿತ ಪ್ರಧಾನಿ, ಮಣಿನಗರದ ಶಾಸಕ ನರೇಂದ್ರ ಮೋದಿ ಅವರು ನಿನ್ನೆಯೇ ಗಾಂಧಿನಗರಕ್ಕೆ ಆಗಮಿಸಿದ್ದು, ಮುಂದೆ ರಾಜ್ಯ ಚುಕ್ಕಾಣಿ ಯಾರಿಗೆ ಹಸ್ತಾಂತರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. ಆನಂದಿಬೆನ್ ಪಟೇಲ್ ಅವರ ಹೆಸರು ಅಖೈರಾಗಿದೆಯಾದರೂ ಕೊನೆಯ ಕ್ಷಣದಲ್ಲಿ ಏನು ಆಗುತ್ತದೋ ಹೇಳಲಾಗದು.

ಏ.30ರ ಸುದ್ದಿ: ಕಳೆದ ವರ್ಷ ಸೆ. 15ರಿಂದ ದೇಶಾದ್ಯಂತ ಓಡುತ್ತಿರುವ ಬಿಜೆಪಿಯ ನರೇಂದ್ರ ಮೋದಿ ಎಂಬ ಯಾಗದ ಕುದುರೆ ತನ್ನ ಪರಿಭ್ರಮಣವನ್ನು ಮೇ 10ಕ್ಕೆ ನಿಲ್ಲಿಸುವ ಅಂದಾಜಿದೆ. ಆದರೆ ಮೋದಿ ಅಭಿಮಾನಿಗಳು ಹೇಳುವಂತೆ ಮೋದಿ ಪರಿಭ್ರಮಣ ನಿಜವಾಗಿಯೂ ಶುರುವಾಗುವುದು ಮೇ 16ರ ನಂತರ. ಈ ಮಧ್ಯೆ, ಮೇ 16ರ ನಂತರ ಗುಜರಾತಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಬಿರುಸಾಗಿ ನಡೆದಿವೆ.

ಆದರೆ ಗುಜರಾತ್ ಸೆಕ್ರೆಟರಿಯೇಟ್ ಮೂಲಗಳ ಪ್ರಕಾರ ಅದು ಈಗಾಗಲೇ ಅಖೈರಾಗಿದೆ. ಅಂದರೆ ಅಕಸ್ಮಾತ್ ತಾವು ಗೆದ್ದು ದಿಲ್ಲಿಯತ್ತ ಹೊರಟುನಿಂತರೆ ಗುಜರಾತಿನ ಮುಖ್ಯಮಂತ್ರಿ ಕುರ್ಚಿಯಲ್ಲಿ ಯಾರನ್ನು ಪ್ರತಿಷ್ಠಾಪಿಸಬೇಕು ಎಂಬುದನ್ನು ಮೋದಿ ಅದಾಗಲೇ ನಿರ್ಧರಿಸಿಯಾಗಿದೆಯಂತೆ. ಹಾಗಾದರೆ ಯಾರದು ಗುಜರಾತಿನ ಮುಂದಿನ ಮುಖ್ಯಮಂತ್ರಿ!?

ಬಲ್ಲ ಮೂಲಗಳ ಪ್ರಕಾರ ಆನಂದಿಬೆನ್ ಪಟೇಲ್ ಅವರು ಗುಜರಾತಿನ ಭಾವಿ ಮುಖ್ಯಮಂತ್ರಿ. ಬನ್ನಿ ಹಾಗಾದರೆ ಈ ಆನಂದಿಬೆನ್ ಪಟೇಲ್ ಯಾರು ಏನು ಎತ್ತ ಅವರ ಕಾರ್ಯಕ್ಷಮತೆ ಹೇಗೆ ಎಂಬುದನ್ನು ತಿಳಿಯೋಣ. ಪಸ್ತುತ, ಆನಂದಿಬೆನ್ ಪಟೇಲ್ ಅವರು ಪಸ್ತುತ ಕಂದಾಯ, ನಗರಾಭಿವೃದ್ಧಿ ಮತ್ತು ನಗರ ವಸತಿ, ರಸ್ತೆ ನಿರ್ಮಾಣ, ನೈಸರ್ಗಿಕ ವಿಪತ್ತು ನಿರ್ವಹಣೆ ಮತ್ತು ಬೃಹತ್ ಬಂಡವಾಳ ಯೋಜನೆಗಳ ಖಾತೆಯನ್ನು ನಿಭಾಯಿಸುತ್ತಿದ್ದಾರೆ.

ಆನಂದಿಬೆನ್- ಮದುವೆಯ ನಂತರ ಎಂಎಸ್ಸಿ ಸ್ನಾತಕೋತ್ತರ

ಆನಂದಿಬೆನ್- ಮದುವೆಯ ನಂತರ ಎಂಎಸ್ಸಿ ಸ್ನಾತಕೋತ್ತರ

72 ವರ್ಷದ ಆನಂದಿಬೆನ್ ಪಟೇಲ್ ಅವರು ಮೆಹಸಾನಾ ಜಿಲ್ಲೆಯ ವಿಜಾಫುರ ತಾಲೂಕಿನ ಖರೋಡ್ ಗ್ರಾಮದವರು. ಬಿಎಸ್ಸಿ ಆಗುತ್ತಿದ್ದಂತೆ ಮಫತ್ ಭಾಯ್ ಪಟೇಲ್ ಜತೆ ಮದುವೆ. ದಂಪತಿಗೆ ಸಂಜಯ್ ಪಟೇಲ್ ಮತ್ತು ಅನಾರ್ ಪಟೇಲ್ ಎಂಬಿಬ್ಬರು ಮಕ್ಕಳಿದ್ದಾರೆ. ಮದುವೆಯ ನಂತರ ಅಹಮದಾಬಾದಿಗೆ ಬಂದವರು ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದರು. ತುಂಬು/ ಕೂಡು ಕುಟುಂಬವನ್ನು ಸರಿದೂಗಿಸಲು ಬಿಎಡ್ ಮಾಡಿಕೊಂಡು 1970ರಲ್ಲಿ ಶಾಲಾ ಶಿಕ್ಷಕಿಯಾದರು. ಮುಂದೆ 30 ವರ್ಷ ಕಾಲ ಮೊಹ್ನಿಬಾ ವಿದ್ಯಾಲಯದ ಜತೆ ನಿರಂತರವಾಗಿ ಗುರುತಿಸಿಕೊಂಡರು.

ಆನಂದಿಬೆನ್ ರಾಜಕೀಯ ಪ್ರವೇಶವೇ ಸಾಹಸಮಯ

ಆನಂದಿಬೆನ್ ರಾಜಕೀಯ ಪ್ರವೇಶವೇ ಸಾಹಸಮಯ

ಆನಂದಿಬೆನ್ ರಾಜಕೀಯ ಪ್ರವೇಶವೇ ಸಾಹಸದಿಂದ ಕೂಡಿದೆ. 1987ರಲ್ಲಿ ಶಾಲಾ ಪ್ರವಾಸ ಕೈಗೊಂಡಿದ್ದಾಗ ಒಂದು ಆಕಸ್ಮಿಕ ಘಟನೆ ನಡೆಯುತ್ತದೆ. ಇಬ್ಬರು ಬಾಲಕಿಯರು ನರ್ಮದಾ ನದಿಯಲ್ಲಿ ಆಕಸ್ಮಿಕವಾಗಿ ಜಾರಿಬೀಳುತ್ತಾರೆ. ಆಗ ಹಿಂದೆಮುಂದೆ ನೋಡದ ಆನಂದಿಬೆನ್, ಸೀದಾ ನದಿಗೆ ಹಾರಿ ಇಬ್ಬರನ್ನೂ ದಡ ಮುಟ್ಟಿಸುತ್ತಾರೆ. ಮುಂದೆ ರಾಜಕೀಯ ದಡ ಸೇರಲು ಆ ಘಟನೆಯೇ ಅವರಿಗೆ ದಾರಿಯಾಗುತ್ತದೆ. ಬಿಜೆಪಿ ಪಕ್ಷವು ಸಾಹಸಿ ಆನಂದಿಬೆನ್ ಅವರ ಕೈಹಿಡಿಯುತ್ತದೆ. 1987ರಲ್ಲಿ ಗುಜರಾತ್ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗುತ್ತಾರೆ.

ರಾಜ್ಯಸಭೆಗೆ ಆಯ್ಕೆ, ವಾಜಪೇಯಿ ಜತೆ ನಿಕಟ

ರಾಜ್ಯಸಭೆಗೆ ಆಯ್ಕೆ, ವಾಜಪೇಯಿ ಜತೆ ನಿಕಟ

ಈ ಮಧ್ಯೆ, 1994ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ಪ್ರತಿಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಜತೆ ನಿಕಟವಾಗಿ ಕೆಲಸ ಮಾಡುತ್ತಾರೆ. 1998ರಲ್ಲಿ ರಾಜ್ಯಸಭೆಗೆ ರಾಜೀನಾಮೆ ನೀಡಿ ಗುಜರಾತ್ ರಾಜ್ಯ ಪಾಲಿಟಿಕ್ಸ್ ಗೆ ಧುಮುಕಿದರು. 1998ರಲ್ಲಿ ಮೊದಲ ಬಾರಿಗೆ ಮಂಡಲ್ ಶಾಸಕಿಯಾಗುತ್ತಾರೆ. ಆಗಿನಿಂದಲೂ ಶಾಸಕಿಯಾಗಿ ಆಯ್ಕೆಯಾಗುತ್ತಲೇ ಇದ್ದಾರೆ. ನಾಲ್ಕು ಬಾರಿ ಶಾಸಕಿಯಾಗಿ ಆಯ್ಕೆಯಾದ ಏಕೈಕ ಮಹಿಳೆ ಆನಂದಿಬೆನ್ ಪಟೇಲ್. ಇಷ್ಟೊಂದು ದೀರ್ಘಾವಧಿಗೆ ಶಾಸಕಿಯಾಗಿ ಸೇವೆ ಸಲ್ಲಿಸಿದ ಬೇರೊಬ್ಬ ಮಹಿಳೆ ಇಲ್ಲ. ಮೋದಿಗಿಂತ ಹಿರಿಯರು.

ಆನಂದಿಬೆನ್ ಶಿಕ್ಷಣ 'ಲೋಕದರ್ಬಾರ್' ಮೂಲಕ ಖ್ಯಾತಿ

ಆನಂದಿಬೆನ್ ಶಿಕ್ಷಣ 'ಲೋಕದರ್ಬಾರ್' ಮೂಲಕ ಖ್ಯಾತಿ

1998ರಲ್ಲಿ ಮಂಡಲ್ ಜಿಲ್ಲೆಯಿಂದ ಅಸೆಂಬ್ಲಿಗೆ ಆಯ್ಕೆಯಾದ ಆನಂದಿಬೆನ್ ಪಟೇಲ್ ಅವರು ಕೇಶುಭಾಯಿ ಪಟೇಲ್ ಮಂತ್ರಿಮಂಡಲದಲ್ಲಿ ಶಿಕ್ಷಣ ಸಚಿವರಾಗಿ ನೇಮಕಗೊಂಡರು. 2002ರಲ್ಲಿ ಪಟಾನ್ ಕ್ಷೇತ್ರದಿಂದ ಆಯ್ಕೆಯಾದ ನಂತರ ಈ ಬಾರಿ ಮೋದಿ ಸರಕಾರದಲ್ಲಿ ಮತ್ತೆ ಶಿಕ್ಷಣ ಸಚಿವೆಯಾದರು. 'ಲೋಕದರ್ಬಾರ್' ಜನತಾದರ್ಶನ ನಡೆಸುವ ಮೂಲಕ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸತೊಡಗಿದರು.

ನಾಲ್ಕನೆಯ ಬಾರಿ ಆಯ್ಕೆಯಾಗಿ ನಾಲ್ಕು ಖಾತೆ ಹೆಚ್ಚಿಗೆ

ನಾಲ್ಕನೆಯ ಬಾರಿ ಆಯ್ಕೆಯಾಗಿ ನಾಲ್ಕು ಖಾತೆ ಹೆಚ್ಚಿಗೆ

2007ರಲ್ಲಿ ಮತ್ತೊಮ್ಮೆ ಪಟಾನ್ ಕ್ಷೇತ್ರದಿಂದ ಆಯ್ಕೆಯಾದ ಆನಂದಿಬೆನ್, ಈ ಬಾರಿ ಕಂದಾಯ ಮತ್ತರು ರಸ್ತೆ ನಿರ್ಮಾಣ ಖಾತೆಯನ್ನು ನಿಭಾಯಿಸಲಾರಂಭಿಸಿದರು. ನಾಲ್ಕನೆಯ ಬಾರಿಗೂ ಘಟ್ಲೋಡಿಯಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾದ ಆನಂದಿಬೆನ್ ನಾಲ್ಕು ಖಾತೆಗಳನ್ನು ಹೆಚ್ಚಿಗೆ ನಿಭಾಯಿಸಲಾರಂಭಿಸಿದರು.

English summary
Anandiben Patel senoir minister in modi ministry may be next Chief Minister of Gujarat. Now, with the ongoing Lok Sabha elections in Gujarat and results just a few days away, we wonder what will happen to Gujarat after Narendra Modi becomes a Member of Parliament. The most probable candidate for the role of the chief minister of Gujarat is Anandiben Patel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X