ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ರಾಷ್ಟ್ರಾಧ್ಯಕ್ಷ ರೇಸಿನಲ್ಲಿರುವ ಅಂತಿಮ ಹೆಸರು

|
Google Oneindia Kannada News

ನವದೆಹಲಿ, ಜು 9: ಪ್ರಧಾನಿ ನರೇಂದ್ರ ಮೋದಿಯವರ ಬ್ರೆಜಿಲ್ ಪ್ರವಾಸದ ಮುನ್ನ ನೂತನ ರಾಷ್ಟ್ರಾಧ್ಯಕ್ಷ ಹೆಸರನ್ನು ಬಿಜೆಪಿ ಅಧಿಕೃತವಾಗಿ ಹೊರಡಿಸಲಿದೆ ಎಂದು ತಿಳಿದುಬಂದಿದೆ. ಖಚಿತ ಮೂಲಗಳ ಪ್ರಕಾರ ಬುಧವಾರ (ಜು 9) ಮಧ್ಯಾಹ್ನದ ವೇಳೆಗೆ ಪ್ರಕಟಣೆ ಹೊರಬೀಳಲಿದೆ.

ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ದಿಗ್ವಿಜಯ ತಂದುಕೊಟ್ಟ ಮತ್ತು ಪ್ರಧಾನಿ ಮೋದಿಯವರ ಪರಮಾಪ್ತ ಅಮಿತ್ ಶಾ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ಇದೇ ತಿಂಗಳ 11ರಿಂದ ಮೋದಿ ಬ್ರೆಜಿಲ್ ಪ್ರವಾಸಕ್ಕೆ ತೆರಳಲಿದ್ದಾರೆ. ಅದಕ್ಕೂ ಮುನ್ನ ಬಿಜೆಪಿ ಸಂಸದೀಯ ಮಂಡಳಿಯ ಸಭೆ ಸೇರಿ ಅಮಿತ್ ಶಾ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ಬಿಜೆಪಿ ಮೂಲಗಳಿಂದ ಖಚಿತ ಪಟ್ಟಿದೆ. (ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನ: ಹೆಸರು ಬಹುತೇಕ ಅಂತಿಮ)

ಒಬ್ಬರಿಗೆ ಒಂದೇ ಹುದ್ದೆ ಎನ್ನುವ ಸಿದ್ದಾಂತದಂತೆ ಈಗಿನ ಅಧ್ಯಕ್ಷರಾಗಿರುವ ರಾಜನಾಥ್ ಸಿಂಗ್, ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಿರುವುದರಿಂದ ಅವರು ಅಧ್ಯಕ್ಷ ಸ್ಥಾನವನ್ನು ತೆರವು ಮಾಡಲಿದ್ದಾರೆ. ಒಂದು ವೇಳೆ ಬುಧವಾರ ಪ್ರಕಟಣೆ ಹೊರಬೀಳದಿದ್ದರೆ ಶುಕ್ರವಾರದೊಳಗೆ (ಜು 11) ಬಿಜೆಪಿ ಈ ಸಂಬಂಧ ಅಧಿಕೃತವಾಗಿ ಹೆಸರು ಘೋಷಿಸಲಿದೆ.

ಅಡ್ವಾಣಿ, ಸುಷ್ಮಾ ಒಪ್ಪಿಗೆ

ಅಡ್ವಾಣಿ, ಸುಷ್ಮಾ ಒಪ್ಪಿಗೆ

ಚಾಣಾಕ್ಷ ರಾಜಕಾರಣಿ ಅಮಿತ್ ಶಾಗೆ ಆಯಕಟ್ಟಿನ ಅಧ್ಯಕ್ಷ ಹುದ್ದೆ ನೀಡಲು ಪಕ್ಷದ ಪ್ರಮುಖರಾದ ಎಲ್ ಕೆ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಹಸಿರು ನಿಶಾನೆ ತೋರಿಸಿದ್ದು, ಆರ್ಎಸ್ಎಸ್ ಪ್ರಮುಖರೂ ಒಪ್ಪಿಗೆ ಸೂಚಿಸಿದ್ದಾರೆ.

ಜೂನ್ 28ರಂದೇ ಘೋಷಣೆಯಾಗ ಬೇಕಿತ್ತು

ಜೂನ್ 28ರಂದೇ ಘೋಷಣೆಯಾಗ ಬೇಕಿತ್ತು

ಪ್ರಮುಖವಾಗಿ ಆರ್ಎಸ್ಎಸ್ ಪ್ರಮುಖರು ಜೂನ್ 28ರಂದೇ ಅಮಿತ್ ಶಾ ಹೆಸರಿಗೆ ಅಸ್ತು ಎಂದಿದ್ದರು. ಆದರೂ, ರೈಲ್ವೆ ಮತ್ತು ವಿತ್ತ ಬಜೆಟ್ ಇರುವುದರಿಂದ ಜುಲೈ ಎರಡನೇ ವಾರದಲ್ಲಿ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಲು ಬಿಜೆಪಿ ನಿರ್ಧರಿಸಿತ್ತು.

ವಿಧಾನಸಭಾ ಚುನಾವಣೆ

ವಿಧಾನಸಭಾ ಚುನಾವಣೆ

ಹರ್ಯಾಣ, ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯದಲ್ಲಿ ಇದೇ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಅಧ್ಯಕ್ಷ ಹುದ್ದೆ ಅಮಿತ್ ಶಾ ಸೂಕ್ತ ಆಯ್ಕೆ ಎಂದು ಬಿಜೆಪಿ ವರಿಷ್ಠರು ಮತ್ತು ಆರ್ಎಸ್ಎಸ್ ಮುಖಂಡರು ನಿರ್ಧರಿಸಿದ್ದಾರೆ.

ನಿತಿನ್ ಗಡ್ಕರಿಗೆ ನಿರಾಶೆ

ನಿತಿನ್ ಗಡ್ಕರಿಗೆ ನಿರಾಶೆ

ಆದಾಯ ತೆರಿಗೆ ಇಲಾಖೆ ತನ್ನ ಮೇಲೆ ಯಾವುದೇ ಕೇಸಿಲ್ಲ ಎಂದು ಸ್ಪಷ್ಟನೆ ನೀಡಿದ ಮೇಲೆ ರಾಷ್ಟ್ರಾಧ್ಯಕ್ಷ ಹುದ್ದೆಯ ಮೇಲೆ ಭಾರೀ ಲಾಬಿ ನಡೆಸಿದ್ದ ಸಚಿವ ನಿತಿನ್ ಗಡ್ಕರಿಗೆ ನಿರಾಶೆಯಾಗಿದೆ.

ರೇಸಿನಲ್ಲಿದ್ದ ಹೆಸರುಗಳು

ರೇಸಿನಲ್ಲಿದ್ದ ಹೆಸರುಗಳು

ರೇಸಿನಲ್ಲಿ ಹಲವು ಪ್ರಮುಖರ ಹೆಸರು ತೇಲಿ ಬಂತಿತ್ತಾದರೂ ಹಿಮಾಚಲ ಪ್ರದೇಶ ಮೂಲದ, ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ ಪಿ ನಡ್ಡಾ ಅವರ ಹೆಸರೇ ಅಂತಿಮಗೊಳ್ಳುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಮುಂಬರುವ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಅಮಿತ್ ಶಾ ಹೆಸರು ಅಂತಿಮ ಗೊಳಿಸಲಾಗಿದೆ ಎನ್ನುವುದು ಸದ್ಯಕ್ಕೆ ಲಭಿಸಿರುವ ಬಹುತೇಕ ಖಚಿತ ವರದಿ.

English summary
Amit Shah,a close aide of PM Narendra Modi, is all set to be the new BJP National President. Parties highest decision making body expected to announce his name on June 9th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X