ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಮುಂದೆ ಅದೇನು ಶಿಸ್ತು, ಅದೇನು ಗೌರವ!

|
Google Oneindia Kannada News

ಹೈಕಮಾಂಡ್, ವರಿಷ್ಠರು ಎನ್ನುವ ಪದಕ್ಕೆ ಮೀರಿದ ಪದ ಏನಾದರೂ ಇದ್ದರೆ ಅದನ್ನು ಎಐಡಿಎಂಕೆ ಪಕ್ಷದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸೆಲ್ವಿ ಜಯಲಲಿತಾ ನಡೆಸುವ ದರ್ಬಾರಿಗೆ ಬಳಸಬಹುದೇನೋ?

ಪಕ್ಷ ಅಧಿಕಾರದಲ್ಲಿ ಇರಲಿ, ಇರದೇ ಇರಲಿ ಕಾಟಾಚಾರಕ್ಕೆ ಮಾತ್ರ ಪಕ್ಷಕ್ಕೆ ಖಜಾಂಜಿ, ಕಾರ್ಯದರ್ಶಿ, ಮತ್ತಿತ್ತರ ಹುದ್ದೆಗಳು, ಎಲ್ಲಾ ಕಂಟ್ರೋಲ್ ಜಯಲಲಿತಾ ಅವರದ್ದೇ. ಹಿರಿಯರು, ಕಿರಿಯರು ಅನ್ನದೇ ಸಾಷ್ಠಾಂಗ ನಮಸ್ಕಾರ ಮಾಡುವ ಪದ್ದತಿ ಇದ್ದರೆ ಅದು ತಮಿಳುನಾಡಿನಲ್ಲಿ ಮಾತ್ರ ಅದರಲ್ಲೂ ಎಐಡಿಎಂಕೆ ಪಕ್ಷದಲ್ಲಿ ಮಾತ್ರ.

ಜಯಲಲಿತಾ ಎದುರಿಗೆ ಬಂದರೆ ಸಾಕು ವಯೋಮಿತಿಯಿಲ್ಲದೇ ಪಕ್ಷದ ಸಚಿವರುಗಳು, ಲೋಕಸಭಾ ಅಭ್ಯರ್ಥಿಗಳು ತೋರುವ ಮರ್ಯಾದೆ ಹಲವು ಬಾರಿ ನಗೆಪಟಾಲಿಗೆ ಗುರಿಯಾಗಿದ್ದರೂ ಆ ಸಂಪ್ರದಾಯ ಮುಂದುವರಿಯುತ್ತಲೇ ಬರುತ್ತಿದೆ.

ಪಕ್ಷದ ಮುಖಂಡರು ಜಯಲಲಿತಾಗೆ ತೋರುವ ಮರ್ಯಾದೆಯ ಪರಮಾವಧಿಯ ಕೆಲವು ದೃಶ್ಯಗಳು ಸ್ಲೈಡಿನಲ್ಲಿವೆ ನೋಡಿ..

ಜಯಾ ಎದುರು ಸ್ಕೂಲಿನ ಶಿಸ್ತು

ಜಯಾ ಎದುರು ಸ್ಕೂಲಿನ ಶಿಸ್ತು

ಚುನಾವಣಾ ಪ್ರಚಾರಕ್ಕೆ ಹೆಲಿಕಾಪ್ಟರಿನಲ್ಲಿ ಬರುವ ಜಯಲಲಿತಾಗೆ ಹೆಲಿಪ್ಯಾಡಿನಿಂದ ವೇದಿಕೆಯ ವರೆಗೆ ಸಾಲಾಗಿ ಕ್ಯೂನಲ್ಲಿ ವೈಟ್ ಎಂಡ್ ವೈಟ್ ಬಟ್ಟೆಯಲ್ಲಿ ತಲೆ ತಗ್ಗಿಸಿ ನಿಂತು ಪಕ್ಷದ ನಾಯಕರು ತೋರುವ ಮರ್ಯಾದೆ ಸ್ಕೂಲಿನ ಶಿಸ್ತನ್ನು ನೆನಪಿಸುತ್ತದೆ.

ಪ್ರಮಾಣವಚನ ಸಮಾರಂಭ

ಪ್ರಮಾಣವಚನ ಸಮಾರಂಭ

ಸಚಿವರುಗಳು ಪ್ರಮಾಣವಚನ ಸ್ವೀಕರಿಸುವ ಮುನ್ನ ಜಯಾಗೆ ಶಿರಬಾಗಿ ನಮಸ್ಕರಿಸಿಯೇ ಮುನ್ನಡೆಯುವುದು.

ಸಚಿವರ, ಮುಖಂಡರ ಮನೆಯಲ್ಲೂ ಜಯಮ್ಮ

ಸಚಿವರ, ಮುಖಂಡರ ಮನೆಯಲ್ಲೂ ಜಯಮ್ಮ

ಸಚಿವರುಗಳ ಕಾರ್ಯಾಲಯದಲ್ಲಿ ಮಾತ್ರವಲ್ಲದೇ ಮನೆಯಲ್ಲೂ ದೇವರ ಫೋಟೋದ ಪಕ್ಕದಲ್ಲಿ ಜಯಮ್ಮನ ಭಾವಚಿತ್ರ.

ವೇದಿಕೆಗೆ ಜಯಾ

ವೇದಿಕೆಗೆ ಜಯಾ

ಹೆಲಿಪ್ಯಾಡಿನಿಂದ ವೇದಿಕೆ ಕೂಗಳೆತೆ ದೂರದಲ್ಲಿದ್ದರೂ ಬೆಂಗಾವಲು ಪಡೆಯ ವಾಹನದ ಮೂಲಕವೇ ವೇದಿಕೆ ಬಳಿ ಬರುವ ಜಯಾ.

ಅಭ್ಯರ್ಥಿಗಳು ಬರುವ ಹಾಗಿಲ್ಲ

ಅಭ್ಯರ್ಥಿಗಳು ಬರುವ ಹಾಗಿಲ್ಲ

ಕಣದಲ್ಲಿರುವ ಅಭ್ಯರ್ಥಿಗಳು ಚುನಾವಣಾ ಪ್ರಚಾರದ ವೇದಿಕೆ ಹತ್ತಿದ್ದರೆ ಸಮಾವೇಶದ ಲೆಕ್ಕ ಅಭ್ಯರ್ಥಿಗಳ ಅಕೌಂಟಿಗೆ ಹೋಗುವುದರಿಂದ ಅಭ್ಯರ್ಥಿಗಳು ವೇದಿಕೆ ಹತ್ತುವುದಿಲ್ಲ. ಆದರೆ ಜಯಲಲಿತಾ ಚುನಾವಣಾ ಸಮಾವೇಶದಲ್ಲಿ ಅಭ್ಯರ್ಥಿ ಸಮಾವೇಶದ ಹತ್ತಿರವೇ ಸುಳಿವಹಾಗಿಲ್ಲ. ಇದು ಅಮ್ಮನ ಹುಕುಂ.

ಅಮ್ಮನ ಮೇಲೆ ಅಸಮಾಧಾನ

ಅಮ್ಮನ ಮೇಲೆ ಅಸಮಾಧಾನ

ಹೆಲಿಪ್ಯಾಡ್ ಮತ್ತು ಕಾರಿನಲ್ಲೇ ಸುತ್ತಾಡುವ ಜಯಲಲಿತಾ ಮೇಲೆ ಆಮ್ ಆದ್ಮಿಗೆ ತುಸು ಬೇಸರವಿದೆ ಎನ್ನುವ ಮಾತು ತಮಿಳುನಾಡಿನಲ್ಲಿ ಕೇಳಿಬರುತ್ತಿದೆ.

ಜಯಾ ಲೆಕ್ಕಾಚಾರ ಕಮ್ಮಿಯಾಗುತ್ತಿದೆ

ಜಯಾ ಲೆಕ್ಕಾಚಾರ ಕಮ್ಮಿಯಾಗುತ್ತಿದೆ

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸಿದಾಗ ನಲವತ್ತಕ್ಕೆ ನಲವತ್ತೂ ಗೆಲ್ಲುತ್ತೇವೆ ಎನ್ನುತ್ತಿದ್ದ ಜಯಲಲಿತಾ ಈಗ 25-30 ಅನ್ನುತ್ತಿದ್ದಾರೆ.

ಸಮೀಕ್ಷೆ ಪ್ರಕಾರ

ಸಮೀಕ್ಷೆ ಪ್ರಕಾರ

ತಮಿಳುನಾಡಿನಲ್ಲಿ ಚುನಾವಣಾಪೂರ್ವ ಮತ್ತು ಮತಗಟ್ಟೆ ಸಮೀಕ್ಷೆ ಉಲ್ಟಾಪಲ್ಟಾ ಹೊಡೆದ ಉದಾಹರಣೇಗಳೇ ಹೆಚ್ಚು. ಆದರೂ, ಸಮೀಕ್ಷೆ ಪ್ರಕಾರ ದಿನದಿಂದ ದಿನಕ್ಕೆ ಜಯಾ ಜನಪ್ರಿಯತೆ ಕಮ್ಮಿಯಾಗುತ್ತಿದೆ.

ನರೇಂದ್ರ ಮೋದಿ

ನರೇಂದ್ರ ಮೋದಿ

ಮೋದಿ ಜೊತೆ ಉತ್ತಮ ಸಂಬಂಧ ಹೊಂದಿದ್ದ ಜಯಾ, NDAಗೆ ಬೆಂಬಲ ನೀಡುವುದು ನಿಶ್ಚಿತ ಎನ್ನವ ಮಾತು ಕೇಳಿಬರುತ್ತಿತ್ತು. ಆದರೆ ಜಯಾ ಈಗ ತೃತೀಯ ರಂಗದ ಮೇಲೆ ಹೆಚ್ಚಿನ ಒಲವು ಇಟ್ಟುಕೊಂಡಿದ್ದಾರೆ. ಒಟ್ಟಿನಲ್ಲಿ, ಪಕ್ಷದ ಅಭ್ಯರ್ಥಿಗಳು, ಮುಖಂಡರು ತೋರುವ ಶಿಸ್ತು ಜಯಾ ಮೇಲಿನ ಭಯಕ್ಕೋ ಅಥವಾ ಗೌರವಕ್ಕೋ?

English summary
AIADMK candidates and leaders show high respect and are highly disciplined in front of Tamil Nadu Chief Minister J Jayalalaithaa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X