ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟ ಮೋಹನ್ ಲಾಲ್ ವೆಬ್ ಸೈಟಿಗೆ ಪಾಕಿಗಳ ಕನ್ನ

By Mahesh
|
Google Oneindia Kannada News

ತಿರುವನಂತಪುರ, ಅ.7: ದಕ್ಷಿಣ ಭಾರತದ ಜನಪ್ರಿಯ ನಟ ಮೋಹನ್‌ಲಾಲ್‌ ಅವರ ಅಧಿಕೃತ ವೆಬ್‌ಸೈಟ್ ಹ್ಯಾಕ್ ಆಗಿದೆ. ಮಂಗಳವಾರ ಬೆಳಗ್ಗೆ ದುಷ್ಕರ್ಮಿಗಳು ವೆಬ್ ಸೈಟ್ ಹ್ಯಾಕ್‌ ಮಾಡಿ ಕಾಶ್ಮೀರ ಪ್ರತ್ಯೇಕಾವಾದಿಗಳ ಪರ ಹೇಳಿಕೆಗಳನ್ನು ಹಾಕಲಾಗಿದೆ.

ಫ್ರೀ ಕಾಶ್ಮೀರ್‌ ಎಂಬ ಸಂಘಟನೆ ಟೀಮ್‌ ಸೈಬರ್‌ ವಾರಿಯರ್ ತಂಡ ಲಾಲೆಟ್ಟ ಅವರ ವೆಬ್‌ಸೈಟನ್ನು ಹ್ಯಾಕ್‌ ಮಾಡಿ ಕಾಶ್ಮೀರ ಪರವಾದ ಹೇಳಿಕೆಗಳನ್ನು ಹಾಕಿದೆ. ಅದರೆ, ಕೆಲ ಹೊತ್ತಿನ ನಂತರ ವೆಬ್ ಸೈಟನ್ನು ಪುನರ್ ಸ್ಥಾಪಿಸಲಾಗಿದೆ.

ಪಾಕಿಸ್ತಾನಿ ಬಾವುಟ ಕಾಶ್ಮೀರ ಮುಕ್ತಗೊಳಿಸಿ ಎಂಬ ಹೇಳಿಕೆಗಳು ಮೋಹನ್ ಲಾಲ್ ಅವರ ವೆಬ್ ತಾಣದಲ್ಲಿ ಕಾಣಿಸಿಕೊಂಡಿತ್ತು. ಸರಕಾರಿ ವೆಬ್‌ಸೈಟ್‌ಗಳು ನಮ್ಮ ಗುರಿ ಎಂದು ಹೇಳಲಾಗಿತ್ತು.

Actor Mohanlal's official website hacked; Pak flag

"ಜಮ್ಮು-ಕಾಶ್ಮೀರದಲ್ಲಿ ಸಾವಿರಾರು ಮಂದಿ ಸಾವಿಗೀಡಾಗಿದ್ದಾರೆ. ನೀವು ನಮಗೆ ಮಾಡಿದ ಅನ್ಯಾಯವನ್ನು ನಾವು ಮರೆತಿಲ್ಲ. ಭಾರತೀಯ ಸೇನೆ ಕಾಶ್ಮೀರದ ಕುಟುಂಬಗಳನ್ನು ಹತ್ಯೆ ಮಾಡಿದೆ. ಅಮಾಯಕರನ್ನು ಬಲಿ ಹಾಕಿದೆ. ಯಾರನ್ನು ರಕ್ಷಿಸಿಲ್ಲ" ಎಂದು ಇಂಗ್ಲೀಷ್ ನಲ್ಲಿ ಬರೆಯಲಾಗಿದೆ.

ನಿಮ್ಮ ಕ್ರೆಡಿಟ್‌ ಕಾರ್ಡ್‌, ಬ್ಯಾಂಕ್‌ ಖಾತೆಗಳು, ಸರ್ವರ್‌ಗಳು ಅಪಾಯದಲ್ಲಿವೆ ಎಂಬ ಸಂದೇಶದ ಬೆನ್ನಲ್ಲೇ 'ಡಿಯರ್ ಅಡ್ಮಿನ್ ನಾವು ಈ ಸಂದೇಶವನ್ನು ನಿಮ್ಮ ವೆಬ್ ತಾಣದ ಮೂಲಕ ಪ್ರಪಂಚಕ್ಕೆ ತಿಳಿಯುವಂತೆ ಮಾಡುವುದೇ ನಮ್ಮ ಗುರಿ. ಮುಸ್ಲಿಮರೆಲ್ಲ ಉಗ್ರರಲ್ಲ ಎಂಬ ಸಂದೇಶವನ್ನು ಹಾಕಲಾಗಿತ್ತು.

ದೇಶ ವಿದೇಶಗಳಲ್ಲಿ ಮೋಹನ್ ಲಾಲ್ ಅವರು ಜನಪ್ರಿಯತೆ ಇಂದಿಗೂ ಕಾಯ್ದುಕೊಂಡಿದ್ದಾರೆ. ಬ್ಲಾಗರ್ ಆಗಿ ಕೂಡಾ ಇತ್ತೀಚೆಗೆ ಗುರುತಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪರ ಇತ್ತೀಚೆಗೆ ಬ್ಲಾಗ್ ಪೋಸ್ಟ್ ವೊಂದರಲ್ಲಿ ಹೊಗಳಿಕೆ ಮಾತುಗಳನ್ನು ಬರೆದಿದ್ದರು.

ಹ್ಯಾಕಿಂಗ್‌ ಸಮುದಾಯದ ನೆರವಿನಿಂದ ನಿಮ್ಮನ್ನು ಅಂತರ್‌ಜಾಲ ಲೋಕದಿಂದ ಹೊರದೂಡುತ್ತೇವೆ. ನಮ್ಮ ಸಮುದಾಯಕ್ಕೆ ಎಂಬ ಸಂದೇಶವನ್ನು ವೆಬ್‌ಸೈಟ್‌ನಲ್ಲಿ ಹಾಕಿದ್ದಾರೆ.

English summary
South Indian actor Mohanlal's official website was hacked on Tuesday morning, allegedly by pro-Kashmir separatists. The hackers also posted anti-state slogans on the homepage. However, the website was restored shortly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X