ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈನಿತಾಲ್: ಜೈಲಿಂದಲೇ ಆಮ್ ಆದ್ಮಿ ಅಭ್ಯರ್ಥಿ ಕಣಕ್ಕೆ

By Srinath
|
Google Oneindia Kannada News

ಡೆಹ್ರಾಡೂನ್, ಏ.25: ಜೈಲು ಸೇರಿರುವ ವ್ಯಕ್ತಿಯೊಬ್ಬರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ. ಪ್ರಸ್ತುತ ಹಲ್ಡವಾನಿ ಜೈಲಿನಲ್ಲಿರುವ ಬಲ್ಲಿ ಸಿಂಗ್ ಕೀಮಾ ಅವರು ನೈನಿತಾಲ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘಟನೆಯಡಿ ಬಲ್ಲಿ ಸಿಂಗ್ ಕೀಮಾ ಅವರನ್ನು ಜೈಲಿಗಟ್ಟಲಾಗಿದೆ. ಆದರೆ ಜಾಮೀನು ಪಡೆದು ಹೊರಬಹುದಾದರೂ ಬಲ್ಲಿ ಸಿಂಗ್ ಕೀಮಾ ತಾನು ಜಾಮೀನು ಪಡೆಯುವುದಿಲ್ಲ. ಜೈಲಿನಲ್ಲಿದ್ದುಕೊಂಡೇ ನಾಮಪತ್ರ ಸಲ್ಲಿಸಿ, ಸ್ಪರ್ಧಿಸ ಬಯಸುವೆ ಎಂದು ಪಣ ತೊಟ್ಟಿದ್ದಾರೆ.

ಅಧಿಕಾರಿಗಳು ತನ್ನ ಪ್ರಚಾರ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಸಿಟ್ಟಿಗೆದ್ದು ಬಲ್ಲಿ ಸಿಂಗ್ ಕೀಮಾ ತಮ್ಮ ಇಬ್ಬರು ಬೆಂಬಲಿಗರೊಂದಿಗೆ ರುದ್ರಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿ ಎದುರು ಏಪ್ರಿಲ್ 22ರಂದು ಧರಣಿ ನಡೆಸಿದ್ದರು. ಆ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದರು.

aap-nainital-candidate-balli-cheema-refuse-bail-to-contest-from-prison

ಪೊಲೀಸರು ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಪ್ರಚಾರ ಉದ್ದೇಶಕ್ಕೆ ಪೂರ್ವಾನುಮತಿ ಪಡೆದೇ ತನ್ನ ವಾಹನವನ್ನು ಬಳಸುತ್ತಿದ್ದೆ. ಆದರೆ ಪೊಲೀಸರು ಅದನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಂಡಿದ್ದಾರೆ ಎಂಬುದು ಬಲ್ಲಿ ಸಿಂಗ್ ಕೀಮಾ ಅವರ ದೂರು.

'ಇದೇ ಆರೋಪದಲ್ಲಿ ಜೈಲು ಸೇರಿರುವ ಬಲ್ಲಿ ಸಿಂಗ್ ಕೀಮಾ ಅವರ ಇತರೆ 14 ಮಂದಿ ಬೆಂಬಲಿಗರನ್ನು ಜಾಮೀನಿನ ಮೇಲೆ ಬಿಟ್ಟು ಕಳುಹಿಸಲಾಗಿದೆ. ಆದರೆ ಬಲ್ಲಿ ಸಿಂಗ್ ಕೀಮಾ ಮತ್ತು ಅವರ ಇನ್ನಿಬ್ಬರು ಬೆಂಬಲಿಗರು ಜೈಲಿನಲ್ಲೇ ಇದ್ದಾರೆ' ಎಂದು ಉಧಾಮ್ ಸಿಂಗ್ ನಗರದ SSP ರಿಧಿಂ ಅಗರವಾಲ್ ತಿಳಿಸಿದ್ದಾರೆ.

ಆಪ್ ವಿರೋಧಿಗಳ ಚಿತಾವಣೆ ಮೇರೆಗೆ ರಿಧಿಂ ಅಗರವಾಲ್ ಅವರು ತಮ್ಮ ವಿರುದ್ಧ ದ್ವೇಷ ಸಾಧಿಸಿದ್ದಾರೆ. ಯಾವುದೇ ಅಪರಾಧ ಮಾಡದಿದ್ದರೂ ಕೀಮಾರನ್ನು ಜೈಲಿಗಟ್ಟಲಾಗಿದೆ. ಆದರೆ ಅವರು ಜಾಮೀನು ಪಡೆಯದೆ ಜೈಲಿನಲ್ಲಿದ್ದುಕೊಂಡೇ ಚುನಾವಣೆ ಎದುರಿಸಲಿದ್ದಾರೆ' ಎಂದು ಉತ್ತರಾಖಂಡ ಎಎಪಿ ಸಂಚಾಲಕರು ಕಿಡಿಕಾರಿದ್ದಾರೆ.

ಆಪ್ ನಾಯಕರಾದ ಕುಮಾರ್ ವಿಶ್ವಾಸ್ ಅವರಂತೆಯೇ ಬಲ್ಲಿ ಸಿಂಗ್ ಕೀಮಾ ಅವರೂ ಸಹ ಕವಿ. ಹಾಗಾಗಿ ಕುಮಾರ್ ವಿಶ್ವಾಸ್ ಮತ್ತು ಶಾಜಿಯಾ ಇಲ್ಮಿ ಮುಂತಾದ ನಾಯಕರು ಹಲ್ಡವಾನಿ ಜೈಲಿಗೆ ಭೇಟಿ ನೀಡಿ, ಬಲ್ಲಿ ಸಿಂಗ್ ಕೀಮಾಗೆ ಬೆಂಬಲ ಸೂಚಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

English summary
Lok Sabha Election 2014: Aam Aadmi Party Nainital candidate Balli Singh Cheema refuses bail to contest from prison. Jailed AAP candidate from Nainital seat Balli Singh Cheema today refused to accept bail and said he would contest the Lok Sabha polls from Haldwani jail where he is lodged for alleged violation of model code of conduct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X