ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಸೇವೆಗೆ ಆಧಾರ ಕಡ್ಡಾಯ ಏಕೆ?: ಕೋರ್ಟ್

By Mahesh
|
Google Oneindia Kannada News

ನವದೆಹಲಿ, ಮಾ.24: ಸರ್ಕಾರದ ಕೆಲವು ಸೇವೆಗಳಿಗೆ ಆಧಾರ್ ಗುರುತಿನ ಚೀಟಿ ಕಡ್ಡಾಯವಾಗಿ ಪಡೆಯಬೇಕೆಂಬ ಆದೇಶವನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ನ್ಯಾಯಪೀಠ ಸೋಮವಾರ ಮಹತ್ವದ ಆದೇಶ ನೀಡಿದೆ.

ಯಾವುದೇ ಮಾಹಿತಿ ಇಲ್ಲವೇ ಸರ್ಕಾರದ ಸೇವೆಗೆ ಆಧಾರ್ ‌ಕಾರ್ಡ್ ‌ನ್ನು ಕಡ್ಡಾಯಗೊಳಿಸಬಾರದು. ಸದ್ಯಕ್ಕೆ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ನ್ಯಾಯಮೂರ್ತಿ ಬಿ.ಎಸ್.ಚವ್ಹಾಣ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸೂಚನೆ ನೀಡಿದೆ. ಆಧಾರ್ ಗುರುತಿನ ಚೀಟಿಗೆ ಸಂವಿಧಾನದ ಮಾನ್ಯತೆ ನೀಡಬೇಕೆಂಬ ಕೇಂದ್ರ ಸರ್ಕಾರದ ಮನವಿಯನ್ನು ತಳ್ಳಿ ಹಾಕಿದ ನ್ಯಾಯಾಧೀಶರು ಯಾವುದೇ ಸೇವೆಗೆ ಇದು ಕಡ್ಡಾಯವಲ್ಲ ಎಂದು ಪುನರ್ ಉಚ್ಚರಿಸಿದರು.

ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಇಂತಹ ಬೃಹತ್ ಯೋಜನೆಯಲ್ಲಿ ಯಾವುದೇ ರೀತಿಯ ಲೋಪದೋಷ ಉಂಟಾಗಬಾರದು. ಈ ಹಿನ್ನೆಲೆಯಲ್ಲಿ ಆಧಾರ್ ಗುರುತಿನ ಚೀಟಿಗೆ ಸಂವಿಧಾನದ ಮಾನ್ಯತೆ ನೀಡುವಂತೆ ಸರ್ಕಾರ ಕೋರಿಕೊಂಡಿತ್ತು. ಈಗಾಗಲೇ ಕೆಲವು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಆಧಾರ್ ಕಡ್ಡಾಯವಾಗಲಾರದು. ಸರ್ಕಾರ ಹೆ ರಡಿಸಿರುವ ಆದೇಶವನ್ನು ಹಿಂತೆಗೆದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟರು. ಇದಕ್ಕೂ ಮುನ್ನ 2013ರಲ್ಲಿ ಅಪೆಕ್ಸ್ ಕೋರ್ಟ್ ಆಧಾರ್ ಗುರುತಿನ ಚೀಟಿ ಕಡ್ಡಾಯಗೊಳಿಸಬಾರದೆಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Aadhar Card should not be mandatory: SC tells Centre

ಸರ್ಕಾರದ ಯೋಜನೆಗಳಿಗೆ ಇದನ್ನು ಕಡ್ಡಾಯ ಮಾಡುವುದರಿಂದ ನಿಜವಾದ ಫಲಾನುಭವಿಗಳು ಯೋಜನೆ ಪಡೆಯದೆ ವಂಚಿತರಾಗುತ್ತಾರೆ ಎಂದು ನ್ಯಾಯಾಧೀಶರು ಹೇಳಿದ್ದರು. ಸಾರ್ವಜನಿಕ ಖಾಸಗಿ ಕ್ಷೇತ್ರ, ಐಓಸಿಎಲ್, ಪಿಪಿಸಿಎಲ್, ಎಚ್ ‌ಪಿಸಿಎಲ್ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರ ಆಧಾರ ಗುರುತಿನ ಚೀಟಿ ಯೋಜನೆಯನ್ನು ಪ್ರಾರಂಭಿಸಿತ್ತು. ನ್ಯಾಯಾಲಯದ ಈ ತೀರ್ಪೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ಭಾರಿ ಹಿನ್ನಡೆಯಾಗಿದೆ.

ಯುಐಡಿಎಐ ಆಧಾರ್ ಸಂಖ್ಯೆಯ ನೋಂದಣಿಯನ್ನು ಕಡ್ಡಾಯ ಮಾಡಿಲ್ಲ. ಫಲಾನುಭವಿಗಳನ್ನು ಹೇಗೆ ಗುರುತಿಸಬೇಕೆಂಬುದು ಕೇಂದ್ರೀಯ ಇಲಾಖೆಗಳು, ಸಚಿವರು ಹಾಗೂ ರಾಜ್ಯ ಸರಕಾರಗಳ ನಿರ್ಧಾರಕ್ಕೆ ಸೇರಿದ ವಿಷಯವಾಗಿದೆ. ಆಧಾರ್, ವ್ಯಕ್ತಿಯ ಗುರುತನ್ನು ಸಾಬೀತುಪಡಿಸುತ್ತದೆಯೇ ಹೊರತು ಆತನ ರಾಷ್ಟ್ರೀಯತೆಯನ್ನಲ್ಲ. ಅದು ವಾಸ್ತವ್ಯ ದಾಖಲೆ ಯಾಗಿಯೂ ಕೆಲಸ ಮಾಡುತ್ತದೆ. ಅಲ್ಲದೆ ಅದು ಐಚ್ಛಿಕ ಸೌಲಭ್ಯ ವಾಗಿದ್ದು ಕಡ್ಡಾಯವಲ್ಲ ಎಂದು ಕೇಂದ್ರ ಯೋಜನಾ ಸಚಿವ ರಾಜೀವ್ ಶುಕ್ಲಾ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮದುವೆ ನೋಂದಣಿಗೂ ಆಧಾರ್ ಕಡ್ಡಾಯ ಎಂಬ ವಿಷಯ ಕೇಳಿದ ಮೇಲೆ ಆಧಾರ್ ಮಾನ್ಯತೆ ಬಗ್ಗೆ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆಎಸ್ ಪುಟ್ಟಸ್ವಾಮಿ ಅವರು ಸುಪ್ರೀಂಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ಹಾಕಿದ್ದರು.

English summary
The Supreme Court on Monday directed the central government to withdraw all its orders making Aadhar mandatory for people for availing any government services. The SC passed its order on the petitions challenging the constitutional validity of Aadhaar card with those opposing the mega project saying it was not backed by any statute and compromises with national security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X