ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಪಟ್ಟಾಭಿಷೇಕ: 8 ರೀತಿಯಲ್ಲಿ ವಿಶಿಷ್ಟ ಕಾರ್ಯ‌ಕ್ರಮ

By Ashwath
|
Google Oneindia Kannada News

ನವದೆಹಲಿ ಮೇ.26: ನರೇಂದ್ರ ಮೋದಿ ದೇಶದ 15ನೇ ಪ್ರಧಾನಿಯಾಗಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನ ಮೋದಿ ಪದಗ್ರಹಣ ಸಮಾರಂಭಕ್ಕೆ ಸಂಪೂರ್ಣ‌ ಸಜ್ಜಾಗಿದೆ.

ಗುಜರಾತ್‌ ಮುಖ್ಯಮಂತ್ರಿಯಾಗಿದ್ದಗಲೇ ವಿಶ್ವ ಮಟ್ಟದಲ್ಲಿ ಸುದ್ದಿಯಾಗಿದ್ದ ನರೇಂದ್ರ ಮೋದಿಯವರು ಈಗ ಭಾರತದ ಇತಿಹಾಸದಲ್ಲಿ ವಿಶಿಷ್ಟವಾಗಿ ಪ್ರಮಾಣ ವಚನ ಸ್ವೀಕಸರಿಸುವ ಮೂಲಕ ವಿಶ್ವದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಸಾಧಾರಣವಾಗಿ ರಾಷ್ಟ್ರಪತಿ ಭವನದ ದರ್ಬಾರ್ ಸಭಾಂಗಣದದಲ್ಲಿ ಪ್ರಧಾನ ಮಂತ್ರಿಯವರ ಪ್ರತಿಜ್ಞಾ ವಿಧಿ ಸಮಾರಂಭ ನಡೆಯುತ್ತದೆ. ಈ ಸಭಾಂಗಣದ ಆಸನ ಸಾಮರ್ಥ್ಯ 500 ಮಾತ್ರ. ಆದರೆ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ಪ್ರತಿನಿಧಿಗಳೂ ಸೇರಿದಂತೆ ದೇಶ ವಿದೇಶಗಳ ಗಣ್ಯಾತಿಗಣ್ಯರನ್ನು ಆಹ್ವಾನಿಸಲು ನಿರ್ಧರಿಸಿದ್ದರಿಂದ ರಾಷ್ಟ್ರಪತಿ ಭವನದ ಹೊರ ಆವರಣದಲ್ಲಿ ಸಮಾರಂಭ ನಡೆಯುತ್ತಿದೆ.

ರಾಷ್ಟ್ರಪತಿ ಭವನದ ಹೊರ ಅವರಣದಲ್ಲಿ ಪ್ರಧಾನ ಮಂತ್ರಿಗಳ ಪ್ರಮಾಣ ವಚನ ಸಮಾರಂಭ ನಡೆಯುವುದು ಇದೇ ಮೊದಲೇನಲ್ಲ. ಈ ಹಿಂದೆ ಬಿಜೆಪಿ ಮೊದಲ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರಪತಿ ಭವನದ ಹೊರ ಆವರಣದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದರು. ಅದಕ್ಕೂ ಮೊದಲು ಚಂದ್ರಶೇಖರ್ ಹೊರ ಆವರಣದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಆದರೆ ಇಷ್ಟೊಂದು ಪ್ರಮಾಣದಲ್ಲಿ ದೇಶವಿದೇಶಗಳಿಂದ ಅತಿಥಿಗಳು ಆ ಕಾರ್ಯ‌ಕ್ರಮಕ್ಕೆ ಪಾಲ್ಗೊಂಡಿರಲಿಲ್ಲ.

ಈ ವಿಶೇಷತೆಯಿಂದಾಗಿ 'ಮೋದಿ ಪಟ್ಟಾಭಿಷೇಕ' ಸಮಾರಂಭ ಹಲವು ದಾಖಲೆಗಳನ್ನು ನಿರ್ಮಿಸಲಿದೆ. ಮುಂದಿನ ಪುಟದಲ್ಲಿ ಮೋದಿ ಪಟ್ಟಾಭಿಷಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳನ್ನು ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ರಾಷ್ಟ್ರಪತಿ ಭವನದ ದೊಡ್ಡ ಕಾರ್ಯಕ್ರಮ

ರಾಷ್ಟ್ರಪತಿ ಭವನದ ದೊಡ್ಡ ಕಾರ್ಯಕ್ರಮ

ರಾಷ್ಟ್ರಪತಿ ಭವನ ಪ್ರಥಮ ಬಾರಿಗೆ ನಾಲ್ಕು ಸಾವಿರಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಳ್ಳುತ್ತಿರುವ ಸಮಾರಂಭವನ್ನು ಆಯೋಜಿಸುತ್ತಿದೆ.

 ವಿಶ್ವದೆಲ್ಲೆಡೆ ವೀಕ್ಷಣೆಯಾಗಲಿರುವ ಕಾರ್ಯ‌ಕ್ರಮ

ವಿಶ್ವದೆಲ್ಲೆಡೆ ವೀಕ್ಷಣೆಯಾಗಲಿರುವ ಕಾರ್ಯ‌ಕ್ರಮ

ದೂರದರ್ಶನದ ಮೂಲಕ ಸಾರ್ಕ್‌ ದೇಶಗಳು ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳು ವೀಕ್ಷಿಸಲಿರುವ ದೇಶದ ದೊಡ್ಡ ಕಾರ್ಯ‌ಕ್ರಮ.

 ವಿಶ್ವದ ಗಣ್ಯರ ಜೊತೆ ದೇಶಿ ಅತಿಥಿಗಳು

ವಿಶ್ವದ ಗಣ್ಯರ ಜೊತೆ ದೇಶಿ ಅತಿಥಿಗಳು

ಪ್ರಥಮ ಬಾರಿಗೆ ಸಾರ್ಕ್‌ ನಾಯಕರು, ರಾಜತಾಂತ್ರಿಕರು, ರಾಜ್ಯಪಾಲರು, ಮುಖ್ಯಮಂತ್ರಿಗಳು ಮುಖ್ಯ ನ್ಯಾಯಧೀಶರು, 777 ಸಂಸದರು, ಯುಪಿಎ-2 ಕ್ಯಾಬಿನೆಟ್‌ ಖಾತೆಯನ್ನು ಹೊಂದಿದ ಸಚಿವರು ಪಾಲ್ಗೊಳ್ಳುತ್ತಿರುವ ದೇಶದ ಪ್ರಥಮ ಕಾರ್ಯ‌ಕ್ರಮ ಇದಾಗಿದೆ.

 ದೂರದರ್ಶ‌ನದಲ್ಲಿ ನೇರಪ್ರಸಾರ:

ದೂರದರ್ಶ‌ನದಲ್ಲಿ ನೇರಪ್ರಸಾರ:

ಡಿಡಿ ಈ ಕಾರ್ಯ‌ಕ್ರಮವನ್ನು 8 ಕ್ಯಾಮೆರಾ ಒಂದು ಒಬಿ(outdoor broadcast) ವ್ಯಾನ್‌ ಮೂಲಕ ಸಂಪೂರ್ಣ‌ವಾಗಿ ಸೆರೆಹಿಡಿಯಲಿದೆ. ಹೆಚ್ಚುವರಿಯಾಗಿ ನಾಲ್ಕು ಕ್ಯಾಮೆರಾ ಒಂದು ಮತ್ತೊಂದು ಒಬಿ ವ್ಯಾನ್‌ನ್ನು ಡಿಡಿ ನಿಯೋಜಿಸಿದೆ. ಕಾರ್ಯ‌ಕ್ರಮ ಡಿಡಿಯ ಎಲ್ಲಾ 15 ಪ್ರಾದೇಶಿಕ ಭಾಷೆಗಳ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ.

 12 ಕುದುರೆ ಗಾಡಿ

12 ಕುದುರೆ ಗಾಡಿ

ನಡೆಯಲು ಸಾಧ್ಯವಿಲ್ಲದ ಅತಿಥಿಗಳಿಗಾಗಿ ಕಾರ್ಯಕ್ರಮಕ್ಕೆ ಕರೆ ತರಲು ರಾಷ್ಟ್ರಪತಿ ಭವನ 12 ಕುದುರೆ ಗಾಡಿಗಳನ್ನು ನಿಯೋಜಿಸಿದೆ.

ದೇಶಭಕ್ತಿ ಗೀತೆಯ ಲೈವ್‌ಬ್ಯಾಂಡ್‌:

ದೇಶಭಕ್ತಿ ಗೀತೆಯ ಲೈವ್‌ಬ್ಯಾಂಡ್‌:

ಸಮಾರಂಭದಲ್ಲಿ ದೇಶಭಕ್ತಿ ಗೀತೆಯ ಲೈವ್ ಬ್ಯಾಂಡ್ ಇರುವುದು ವಿಶೇಷ.

 ಹತ್ತು ಸಾವಿರ ಸಿಬಂದಿ

ಹತ್ತು ಸಾವಿರ ಸಿಬಂದಿ

ಪೊಲೀಸರು,ಬಿಎಸ್‍ಎಫ್, ಸಿಐಎಸ್‍ಎಫ್, ಸಿಆರ್‌‌ಪಿಎಫ್, ಎನ್‍ಎಸ್‍ಜಿ ಸೇರಿ ಮೋದಿ ಪ್ರಮಾಣ ವಚನ ಸಮಾರಂಭದ ಭದ್ರತೆ ಹೊಣೆ ಹೊತ್ತವರ ಸಂಖ್ಯೆ.

 350 ಪತ್ರಕರ್ತರು

350 ಪತ್ರಕರ್ತರು

ಪತ್ರಿಕೆ ಹಾಗೂ ಸುದ್ದಿವಾಹಿನಿಗಳು ಸೇರಿದಂತೆ ಭಾರೀ ಸಂಖ್ಯೆಯ ಮಾಧ್ಯಮ ವರ್ಗ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
Narendra Modi's oath-taking ceremony on Monday will be one of the biggest events hosted by Rashtrapati Bhavan with the guest list crossing the 4,000 mark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X