ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

16ನೇ ಲೋಕಸಭೆಗೆ 24 ಮುಸ್ಲಿಂ ಸಂಸದರು

By Mahesh
|
Google Oneindia Kannada News

ನವದೆಹಲಿ, ಮೇ 18: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಅಂಕಿ ಅಂಶಗಳು ಕುತೂಹಲಕಾರಿ ಸಂಗತಿಗಳನ್ನು ಹೇಳುತ್ತಿವೆ. ಈ ಬಾರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮುಸ್ಲಿಮ್ ಸಂಸದರು ಲೋಕಸಭೆ ಪ್ರವೇಶಿಸಲಿದ್ದಾರೆ. 20 ಸಂಸದರು ಮಾತ್ರ ಸಂಸತ್ ಪ್ರವೇಶ ಯೋಗ ಪಡೆದುಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಯಾವುದೇ ಮುಸ್ಲಿಂ ಅಭ್ಯರ್ಥಿ ಜಯಗಳಿಸುವಲ್ಲಿ ವಿಫಲವಾಗಿದ್ದಾರೆ.

1952ರ ಪ್ರಥಮ ಮಹಾಚುನಾವಣೆಯೊಂದನ್ನು ಬಿಟ್ಟು ಇದುವರೆಗಿನ ಮಿಕ್ಕುಳಿದ ಚುನಾವಣೆಗಳನ್ನು ಅವಲೋಕಿಸಿದರೆ ಅತ್ಯಂತ ಕಡಿಮೆ ಸಂಖ್ಯೆಯ ಮುಸ್ಲಿಮ್ ಸಂಸದರು ಈ ಬಾರಿ ಲೋಕಸಭೆ ಪ್ರವೇಶಿಸಲಿದ್ದಾರೆ ಎನ್ನುವುದನ್ನು ಅಂಕಿ ಅಂಶಗಳು ವ್ಯಕ್ತಪಡಿಸುತ್ತದೆ.

16ನೇ ಲೋಕಸಭೆಯಲ್ಲಿ ಕೇವಲ 24 ಮುಸ್ಲಿಮ್ ಸಂಸದರಿದ್ದಾರೆ. 15ನೇ ಲೋಕಸಭೆಯಲ್ಲಿ ಇದರ ಸಂಖ್ಯೆಯು 30ರಷ್ಟಿತ್ತು. ಸದನದ ಒಟ್ಟು ಸದಸ್ಯರ ಕೇವಲ ಶೇ.4.4ರಷ್ಟನ್ನು ಮಾತ್ರ ಮುಸ್ಲಿಮರು ಪ್ರತಿನಿಧಿಸಲಿದ್ದಾರೆ. 1952ರ ಪ್ರಥಮ ಲೋಕಸಭೆಯಲ್ಲಿ ಶೇ.4.3 ಪ್ರಮಾಣದಲ್ಲಿ ಮುಸ್ಲಿಮ್ ಸಂಸದರಿದ್ದರು. 1980ರ ಚುನಾವಣೆಯಲ್ಲಿ ಇದು ಉಚ್ಚಮಟ್ಟಕ್ಕೆ ಅಂದರೆ 49 ಸದಸ್ಯರು ಸಂಸತ್ತಿಗೆ ಆಯ್ಕೆಯಾಗಿದ್ದರು. ಸದನದ ಶೇ.9.3 ಭಾಗದಷ್ಟು ಸಂಸದರು ಮುಸ್ಲಿಮರಾಗಿದ್ದರು.

24 Muslim MPs in next 16th Lok Sabha

ಕಳೆದ 25 ವರ್ಷಗಳ ಅವಧಿಯ ಲೋಕಸಭೆಯಲ್ಲಿ ಮುಸ್ಲಿಮ್ ಸಂಸದರ ಪ್ರಮಾಣ 5 ಶೇಕಡಾದಿಂದ 6 ಶೇಕಡಾದ ನಡುವೆ ಏರಿಕೆ ಇಳಿಕೆಯಾಗುತ್ತಿತ್ತು. ಗಣನೀಯ ಪ್ರಮಾಣದ ಮುಸ್ಲಿಮ್ ಜನಸಂಖ್ಯೆಯಿದ್ದರೂ ಪ್ರಸ್ತುತ ಲೋಕಸಭೆಯಲ್ಲಿ ಉತ್ತರ ಪ್ರದೇಶದಿಂದ ಒಬ್ಬನೇ ಒಬ್ಬ ಮುಸ್ಲಿಂ ಸಂಸದ ಆಯ್ಕೆಯಾಗಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಮಹಾರಾಷ್ಟ್ರದಿಂದಲೂ ಮುಸ್ಲಿಮ್ ಸಂಸದರು ಆಯ್ಕೆಯಾಗಿಲ್ಲ. ಸಂಸತ್ತಿಗೆ ಆಯ್ಕೆಯಾಗಿರುವ ಮುಸ್ಲಿಮ್ ಸಂಸದರ ರಾಜ್ಯವಾರು ಬಲಾಬಲ ಹೀಗಿದೆ.

ಪಶ್ಚಿಮ ಬಂಗಾಳ(8), ಜಮ್ಮು ಹಾಗೂ ಕಾಶ್ಮೀರ (4), ಬಿಹಾರ(4), ಕೇರಳ(3), ಅಸ್ಸಾಮ್(2), ಆಂಧ್ರಪ್ರದೇಶ, ತಮಿಳುನಾಡು ಹಾಗೂ ಲಕ್ಷದ್ವೀಪ ತಲಾ ಒಂದು ಮಾತ್ರ. ಈ ಪೈಕಿ ಜಮ್ಮು ಹಾಗೂ ಕಾಶ್ಮೀರ ಮತ್ತು ಲಕ್ಷದ್ವೀಪಗಳು ಮುಸ್ಲಿಂ ಬಹುಸಂಖ್ಯಾತರನ್ನು ಹೊಂದಿರುವ ರಾಜ್ಯಗಳಾಗಿವೆ. ಬಿಜೆಪಿಯು ಈ ಚುನಾವಣೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಆದರೆ ಬಹುಪಾಲು ಎಲ್ಲಾ ಕ್ಷೇತ್ರಗಳಲ್ಲಿಯೂ ಅದು ಗೆಲುವಿನ ನಗೆ ಬೀರಿದೆ. ಸದನದಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ಕಡಿಮೆಯಾಗಲು ಇದು ಒಂದು ಕಾರಣ ಎಂದರೆ ತಪ್ಪಾಗಲಾರದು. ಮೋದಿ ಅಲೆಯಲ್ಲಿ ಉತ್ತರಪ್ರದೇಶ ಮುಳುಗಿದ್ದರಿಂದ ಆಡಳಿತಾರೂಢ ಸಮಾಜವಾದಿ ಪಕ್ಷ ಕೂಡಾ ತತ್ತರಿಸಿದ್ದು ಸುಳ್ಳಲ್ಲ. (ಪಿಟಿಐ)

English summary
The 16th Lok Sabha will have one of the lowest numbers of Muslim MPs with just about 24 of them emerging victorious in the Lok Sabha polls which saw a saffron surge in the whole north and western parts of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X