ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಗದ ರೈಲು: ದೆಹಲಿ ಟು ಆಗ್ರಾ 90 ನಿಮಿಷ

By Ashwath
|
Google Oneindia Kannada News

ನವದೆಹಲಿ,ಜು. 4: ಪ್ರಧಾನಿ ನರೇಂದ್ರ ಮೋದಿಯವರ ಹೈ ಸ್ಪೀಡ್‌‌ ರೈಲಿನ ಕನಸು ನನಸಾಗುವ ಕಾಲ ಸಮೀಪಿಸಿದೆ. ನವೆಂಬರ್‌‌ನಿಂದ ದೆಹಲಿ-ಆಗ್ರಾ ರೈಲು ಪ್ರಯಾಣಕ್ಕೆ ಕೇವಲ 90 ನಿಮಿಷ ಸಾಕಾಗಲಿದೆ.

ಗಂಟೆಗೆ ಬರೋಬ್ಬರಿ 160 ಕಿ.ಮೀ. ಸಂಚರಿಸುವ ಸೆಮಿ ಹೈಸ್ಪೀಡ್‌ ರೈಲಿನ ಪ್ರಾಯೋಗಿಕ ಸಂಚಾರ ಗುರುವಾರ ಯಶಸ್ವಿಯಾಗಿ ಕೇವಲ 90 ನಿಮಿಷಗಳಲ್ಲಿ ರೈಲು ಆಗ್ರಾ ತಲುಪಿದ್ದು ದೇಶದ ಇತಿಹಾಸದಲ್ಲಿ ದಾಖಲಾಗಿದೆ. ದೆಹಲಿಯಿಂದ ಬೆಳಗ್ಗೆ 11.15ಕ್ಕೆ ಗಂಟೆಗೆ ಹೊರಟ ರೈಲು 200 ಕಿ.ಮೀ ದೂರದಲ್ಲಿರುವ ಆಗ್ರಾವನ್ನು 99 ನಿಮಿಷಗಳಲ್ಲಿ ತಲುಪಿದೆ.

ದೆಹಲಿಯ ನಿಜಾಮುದ್ದೀನ್‌ ಸ್ಟೇಷನ್‌ನಿಂದ ಹೋಲಿಸಿದರೆ ನಿಗದಿತ 90 ನಿಮಿಷದಲ್ಲಿ ಆಗ್ರಾ ತಲುಪಿದೆ. ಸಾಮಾನ್ಯವಾಗಿ ಇದೇ ಮಾರ್ಗದಲ್ಲಿ ಸಂಚರಿಸುವ ಉಳಿದ ರೈಲುಗಳು ಆಗ್ರಾ ತಲುಪಲು ಎರಡು ಗಂಟೆ ತಗೆದುಕೊಳ್ಳುತ್ತದೆ.[ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಬಳಸಿ ಎಸೆಯಬಲ್ಲ ಹಾಸಿಗೆ?]

Delhi-Agra high speed train
ಈ ಮಾರ್ಗದಲ್ಲಿ 16 ವೇಗ ನಿಯಂತ್ರಕ ಸ್ಥಳಗಳನ್ನು ಗುರುತಿಸಲಾಗಿದ್ದು ಅವುಗಳನ್ನು 15 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆ‌ಗೆರಲಿವೆ. ನವೆಂಬರ್‌ನಲ್ಲಿ ಈ ರೈಲು ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ದೆಹಲಿ ಆಗ್ರಾದ ಬಳಿಕ ದೆಹಲಿ ಕಾನ್ಪುರ ಮತ್ತು ಚಂಡೀಗಢ ಮಾರ್ಗದಲ್ಲಿ ಸೆಮಿ ಹೈಸ್ಪೀಡ್‌ ರೈಲಿನ ಸಂಚಾರ ನಡೆಸಲು ರೈಲ್ವೆ ಸಿದ್ದತೆ ನಡೆಸುತ್ತಿದೆ.

ಪ್ರಸ್ತುತ ಗಂಟೆಗೆ 150 ಕಿ.ಮೀ. ವೇಗದಲ್ಲಿ ಓಡುತ್ತಿರುವ ದಿಲ್ಲಿ - ಭೋಪಾಲ್‌ ನಡುವೆ ಸಂಚರಿಸುವ ಶತಾಬ್ದಿ ರೈಲು ದೇಶದ ಅತ್ಯಂತ ವೇಗದ ರೈಲಾಗಿದೆ. ಚೀನಾ, ಇಟಲಿ,ಜರ್ಮನಿ, ಜಪಾನ್‌ಗೆ ಹೋಲಿಸಿದರೆ ಭಾರತದ ರೈಲಿನ ವೇಗ ತುಂಬಾ ಕಡಿಮೆ.

English summary
A passenger train set a new national speed record of 160 kilometres an hour (100 miles an hour) on Thursday during a test between New Delhi and Agra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X