ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೃತ್‌ಸರ್‌: ಸ್ವರ್ಣಮಂದಿರದಲ್ಲಿ ಸಿಖ್ಖರ ನಡುವೆ ಘರ್ಷಣೆ

By Mahesh
|
Google Oneindia Kannada News

ಅಮೃತ್‌ಸರ, ಜೂ. 6: ಅಲ್ಲಿ ಶ್ರದ್ಧಾಂಜಲಿ ಸಭೆ ನಡೆದಿತ್ತು ಆದರೆ, ಅಲ್ಲಿ ನಡೆದಿದ್ದೇ ಬೇರೆ, ಸಿಖ್ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದರು ಕೊನೆಗೆ ಆಯುಧಗಳನ್ನು ಎತ್ತಿ ಸಮರಕ್ಕೆ ಮುಂದಾದ ಘಟನೆ ಪಂಜಾಬ್‌ನ ಅಮೃತಸರದಲ್ಲಿರುವ ಸ್ವರ್ಣಮಂದಿರದಲ್ಲಿ ಶುಕ್ರವಾರ ನಡೆದಿದೆ.

ಅಪರೇಷನ್ ಬ್ಲೂಸ್ಟಾರ್ ನಡೆದು ಇಂದಿಗೆ 30 ತುಂಬಿದ ಹಿನ್ನಲೆಯಲ್ಲಿ ವರ್ಷಾಚರಣೆ ನಡೆಸಲಾಗುತ್ತಿತ್ತು, ಈ ಸಂದರ್ಭದಲ್ಲಿ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿತ್ತು. ಎಂದಿನಂತೆ ಭಜನೆ, ಗ್ರಂಥ್ ಸಾಹಿಬ್ ಪಠಣ ಮುಗಿದಿತ್ತು.

ಸಭೆಯಲ್ಲಿ ಸೇರಿದವರಲ್ಲಿ ಹಲವರು 1984ರ ಸಿಖ್ ಹತ್ಯಾಕಾಂಡವನ್ನು ಖಂಡಿಸಿ ನಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ವಿಶ್ವಸಂಸ್ಥೆಗೆ ಈ ಬಗ್ಗೆ ಅಹವಾಲು ಸಲ್ಲಿಸಿ ನ್ಯಾಯ ಪಡೆಯುವ ಅವಶ್ಯಕತೆ ಎಂದು ಹೇಳಿದ್ದಾರೆ. ಅದರೆ, ಇದಕ್ಕೆ ಅಕಾಲಿದಳದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. [ಸಿಖ್ ದಂಗೆ ಬಗ್ಗೆ ರಾಹುಲ್ ಗಾಂಧಿ]

ದೇವಾಲಯದ ಆವರಣದಲ್ಲೇ ಅಕಾಲಿದಳ ಮತ್ತು ಎಸ್‌ಜಿಪಿಸಿ ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ತಲವಾರು, ಈಟಿ, ದೊಣ್ಣೆ, ಕತ್ತಿಗಳಿಂದ ಬಡಿದಾಡಿದ್ದಾರೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬಂದಿರುವ ಚಿತ್ರಗಳ ಸಂಗ್ರಹ ಇಲ್ಲಿದೆ ತಪ್ಪದೇ ನೋಡಿ....

1984 ರಲ್ಲಿ ನಡೆದ ಹತ್ಯಾಕಾಂಡ

1984 ರಲ್ಲಿ ನಡೆದ ಹತ್ಯಾಕಾಂಡ

ಸಿಖ್ ವ್ಯಕ್ತಿಗಳಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸಿಖ್ ಸಮುದಾಯ ವ್ಯಕ್ತಿಗಳನ್ನು ಕಂಡಕಂಡಲ್ಲಿ ಹತ್ಯೆ ಮಾಡಲಾಯಿತು. ಈ ಹತ್ಯೆಗೆ ಸಜ್ಜನ್ ಕುಮಾರ್ ಅವರು ಪ್ರಚೋದನೆ ನೀಡಿದರು ಎಂಬ ಆರೋಪ ಅವರ ಮೇಲಿದೆ.

1984 ರಲ್ಲಿ ನಡೆದ ಹತ್ಯಾಕಾಂಡದಲ್ಲಿ ಸುಮಾರು 3000 ಅಮಾಯಕ ಸಿಖ್ ಜನರು ಪ್ರಾಣ ಕಳೆದುಕೊಂಡರು. ಸಿಖ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಹಾಗೂ ಸಜ್ಜನಕುಮಾರ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ

ಅಪರೇಷನ್ ಬ್ಲೂಸ್ಟಾರ್ 30 ವರ್ಷಾಚರಣೆ

ಬ್ಲೂ ಸ್ಟಾರ್‌ನಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆ ನಡೆಸಲಾಗುತ್ತಿತ್ತು. ಈ ವೇಳೆ ನಾಯಕರು ಮಾತನಾಡುವ ವಿಚಾರದಲ್ಲಿ ಮಾರಾಮಾರಿ ಉಂಟಾಗಿದೆ. ಎರಡು ಸಿಖ್ ಗುಂಪುಗಳ ನಡುವೆ ವಾಗ್ವಾದ ಉಂಟಾಗಿದ್ದು, ಬಡಿದಾಟಕ್ಕೆ ತಿರುಗಿದೆ.

ಅಕಾಲಿದಳ ಮತ್ತು ಎಸ್‌ಜಿಪಿಸಿ ನಡುವೆ ಘರ್ಷಣೆ

ದೇವಾಲಯದ ಆವರಣದಲ್ಲೇ ಅಕಾಲಿದಳ ಮತ್ತು ಎಸ್‌ಜಿಪಿಸಿ ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ತಲವಾರು, ಈಟಿ, ದೊಣ್ಣೆ, ಕತ್ತಿಗಳಿಂದ ಬಡಿದಾಡಿದ್ದಾರೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

16 ಜನರ ಬಂಧಿಸಿದ ಪೊಲೀಸರು

ಗಲಭೆಗೆ ಸಂಬಂಧಿಸಿದಂತೆ 16 ಜನರನ್ನು ಬಂಧಿಸಲಾಗಿದೆ. ಒಂದು ಮಗು ಸೇರಿದಂತೆ 7 ಜನರಿಗೆ ಗಾಯಗಳಾಗಿದೆ.

ಅಮೃತಸರ ದೇಗುಲ ಬಾಗಿಲು ಬಂದ್

ಅಮೃತಸರದ ಸ್ವರ್ಣ ಮಂದಿರದಲ್ಲಿ ಗಲಭೆ ನಂತರ ದೇಗುಲವನ್ನು ಬಂದ್ ಮಾಡಲಾಗಿದೆ.

ಮಾಧ್ಯಮ ಪ್ರತಿನಿಧಿಗಳಿಗೂ ಗಾಯ

ಸಿಖ್ ಗುಂಪುಗಳ ಕಾದಾಟದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೂ ಗಾಯವಾಗಿದ್ದು, ಕೆಮೆರಾಗಳು ಮುರಿದುಬಿದ್ದಿವೆ.

ನಾಯಕರ ಭಾಷಣಕ್ಕೆ ಅಡ್ಡಿ ಹಿನ್ನೆಲೆ ಗಲಭೆ

ಅಕಾಲಿ ತಖ್ತ್ ನ ಸಿಮ್ರಾನ್ ಜಿತ್ ಸಿಂಗ್ ಮನ್ ಭಾಷಣಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಗಲಭೆ ಆರಂಭವಾಯಿತು ಎನ್ನಲಾಗಿದೆ.

ಸಿಖ್ ಮುಖಂಡರಿಂದ ತೀವ್ರ ಖಂಡನೆ

ಸಿಖ್ ಮುಖಂಡ ಪ್ರೇಮ್ ಸಿಂಗ್ ಚಾಂಡುಮಾಜ್ರಾ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

50 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರೆ?

ಎಎನ್ ಐ ವರದಿ ಪ್ರಕಾರ ಅಮೃತ್‌ಸರ್‌ನ ಸ್ವರ್ಣಮಂದಿರದಲ್ಲಿ ಗುಂಪು ಘರ್ಷಣೆ ಸಂಬಂಧ ಖಾಲ್ಸಾ ವಕ್ತಾರ ಕಾನ್ವರ್ ಪಾಲ್ ಸಿಂಗ್ ಸೇರಿದಂತೆ 50 ಜನರನ್ನು ಬಂಧಿಸಲಾಗಿದೆ.

ಮಾಧ್ಯಮಗಳಿಂದ ಕೆಮೆರಾ ಕಸಿದುಕೊಂಡರು

ಮಾಧ್ಯಮ ಪ್ರತಿನಿಧಿಗಳ ಕೆಮೆರಾ ಮುರಿದು ಹಾಕಿದರು, ಕೆಮೆರಾದಲ್ಲಿದ್ದ ಚಿತ್ರಗಳನ್ನು ಡಿಲೀಟ್ ಮಾಡಿದರು.

English summary
Twitter pics:1984 massacre 'haunts' Golden Temple, Amritsar; Sikh groups draw swords against each other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X