ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನಲ್ಲಿ ಶೇ11ರಷ್ಟು ಮಹಿಳೆಯರ ಪ್ರಾಬಲ್ಯ

By Mahesh
|
Google Oneindia Kannada News

ನವದೆಹಲಿ, ಮೇ 18: ಇದೇ ಮೊಟ್ಟ ಮೊದಲ ಬಾರಿಗೆ 61 ಮಹಿಳೆಯರು ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿ ದೇಶದ ರಾಜಕೀಯ ಇತಿಹಾಸದಲ್ಲೆ ಹೊಸ ದಾಖಲೆ ಬರೆದಿದ್ದಾರೆ.

ಕಳೆದ 15ನೇ ಲೋಕಸಭೆ ಚುನಾವಣೆಯಲ್ಲಿ ಒಟ್ಟು 58 ಮಹಿಳಾ ಸದಸ್ಯರು ಆಯ್ಕೆಯಾಗಿದ್ದರು. ಈ ಬಾರಿ 16ನೇ ಲೋಕಸಭೆಯಲ್ಲಿ 61 ಮಹಿಳೆಯರು ಆಯ್ಕೆಯಾಗಿ ಬಂದಿದ್ದಾರೆ. ಆಯ್ಕೆಯಾಗಿರುವ ಮಹಿಳೆಯರ ಪೈಕಿ ಸೋನಿಯಾಗಾಂಧಿ, ಸುಷ್ಮಾ ಸ್ವರಾಜ್, ಹೇಮ ಮಾಲಿನಿ, ಪೂನಮ್ ಮಹಾಜನ್, ಉಮಾ ಭಾರ್ತಿ, ಡಿಂಪಲ್ ಯಾದವ್, ಚಿತ್ರನಟಿ ಕಿರಣ್ ಕೇರ್, ಮೀನಾಕ್ಷಿ ಲೇಖಿ ಪ್ರಮುಖರಾಗಿದ್ದಾರೆ. ಶೇ 11ರಷ್ಟು ಮಹಿಳಾ ಸಂಸದರು ಶೇ 89ರಷ್ಟು ಪುರುಷ ಸಂಸದರನ್ನು ಸಂಸತ್ ಹೊಂದಲಿದೆ.

ಇನ್ನುಳಿದಂತೆ ಪಶ್ಚಿಮ ಬಂಗಾಳ ರಾಜ್ಯವೊಂದರಿಂದಲೇ 13 ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿ ಬಂದಿದ್ದಾರೆ. 2004ರಲ್ಲಿ 45 ಮಹಿಳೆಯರು ಆಯ್ಕೆಯಾಗಿದ್ದರು. ಅದೇ ರೀತಿ 1999ರಲ್ಲಿ 49 ಮಹಿಳೆಯರು ಆಯ್ಕೆಯಾಗಿದ್ದರು. 1957ರಲ್ಲಿ ಕೇವಲ 22 ಮಹಿಳೆಯರು ಮಾತ್ರ ಲೋಕಸಭೆಗೆ ಆಯ್ಕೆಯಾಗಿ ಬಂದಿದ್ದರು. 1977ರಲ್ಲಿ ಕೇವಲ 19 ಮಂದಿ ಮಾತ್ರ ಆಯ್ಕೆಯಾಗಿದ್ದರು.

16th Lok Sabha will have record of 61 women leaders

ಈ ಬಾರಿ ದೆಹಲಿಯಲ್ಲಿ ಹಾಲಿ ಸಂಸದ ಕಾಂಗ್ರೆಸ್ಸಿನ ಅಜಯ್ ಮಾಕೇನ್ ಅವರನ್ನು ಸೋಲಿಸುವ ಮೂಲಕ 54 ವರ್ಷಗಳ ನಂತರ ದೆಹಲಿಗೆ ಮಹಿಳಾ ಪ್ರಾತಿನಿಧ್ಯವನ್ನು ಬಿಜೆಪಿಯ ಮೀನಾಕ್ಷಿ ಲೇಖಿ ಒದಗಿಸಿದ್ದಾರೆ. ಈ ಮುಂಚೆ ಇಲ್ಲಿಂದ ಸ್ವಾತಂತ್ರ್ಯ ಹೋರಾಟಗಾರ್ತಿ, ಉತ್ತರಪ್ರದೇಶದ ಸಿಎಂ ಆಗಿದ್ದ ಸುಚೇತಾ ಕೃಪಲಾನಿ ಅವರು ಸಂಸತ್ತಿಗೆ ಆಯ್ಕೆಯಾಗಿದ್ದರು. 1952 ರಿಂದ 1957ರ ತನಕ ಸುಚೇತಾ ವಿಜಯಿಯಾಗಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ಅವರು ನಂತರ ದೆಹಲಿಯಿಂದ ಜನತಾ ಪಾರ್ಟಿ ಹಾಗೂ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುತ್ತಾ ಬಂದಿದ್ದರು.

ವಯೋಮಿತಿ ವಿಷಯಕ್ಕೆ ಬಂದರೆ 543 ಸಂಸತ್ ಸದಸ್ಯರ ಪೈಕಿ ಶೇ 47ರಷ್ಟು ಮಂದಿ 55 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. 15ನೇ ಲೋಕಸಭೆಯಲ್ಲಿ ಈ ಪ್ರಮಾಣ ಶೇ 43ರಷ್ಟಿತ್ತು. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಂಪಿಗಳ ಸಂಖ್ಯೆ 71 ದಾಟಿಲ್ಲ.

ವಿದ್ಯಾವಂತರ ಅಂಕಿ ಅಂಶ: ಸುಮಾರು 75% ಸಂಸತ್ ಸದಸ್ಯರು ಪದವೀಧರರಾಗಿದ್ದರೆ, 10% ಮೆಟ್ರಿಕ್ಯುಲೇಷನ್ ತನಕ ಓದಿದ್ದಾರೆ. ಆದರೆ, ಈ ಅಂಕಿ ಅಂಶ 15ನೇ ಲೋಕಸಭೆಗೆ ಹೋಲಿಸಿದರೆ ಕಡಿಮೆಯಾಗಿದೆ. 79% ಪದವೀಧರರನ್ನು ಕಳೆದ ಸಂಸತ್ ಹೊಂದಿತ್ತು ಎಂದು ಪಿಆರ್ ಎಸ್ ಸಂಸ್ಥೆ ಹೇಳಿದೆ.

English summary
The 16th Lok Sabha will have a record number of 61 women leaders as compared to 59 women MPs elected during the previous General Elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X