ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿಯಲ್ಲಿ ಬಿಜೆಪಿ ವಕ್ತಾರನ ಚುನಾವಣಾ ಭವಿಷ್ಯ

By Mahesh
|
Google Oneindia Kannada News

ತಿರುಮಲ, ಏ.22: ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಎನ್ ಡಿಎ ಮಿತ್ರ ಪಕ್ಷಗಳು ಭರ್ಜರಿಯಾಗಿ ಫಲಿತಾಂಶ ಹೊರ ಹಾಕಲಿವೆ. ಈ ಬಾರಿ ಸರಿ ಸುಮಾರು 55 ಸ್ಥಾನಗಳು ಎನ್ ಡಿಎ ಪಾಲಾಗಲಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ತಿರುಪತಿಯಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್, ಕರ್ನಾಟಕದಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆಲ್ಲಲಿದೆ ಇದೇ ರೀತಿ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲೂ ಮತ ಹಂಚಿಕೆ ಹೆಚ್ಚಾಗಲಿದೆ. ಮೋದಿ ಅಲೆ ಪರಿಣಾಮವಾಗಿ ಈ ಬಾರಿ ಕೇರಳದಲ್ಲೂ ಅಕೌಂಟ್ ಓಪನ್ ಆಗಲಿದೆ ಎಂದು ಪ್ರಕಾಶ್ ಭರವಸೆ ವ್ಯಕ್ತಪಡಿಸಿದರು.

NDA will get 55-plus seats in South India, predicts BJP spokesperson

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಡಬ್ಬಲ್ ಡಿಜಿಟ್ ದಾಟುವುದಿಲ್ಲ. ನ್ಯಾಷನಲ್ ಡೆಮಾಕ್ರಾಟಿಕ್ ಅಲೈಯನ್ಸ್(ಎನ್ ಡಿಎ) ಹಾಗೂ ಯುನೈಟೆಡ್ ಪ್ರೊಗೇಸಿವ್ ಅಲೈಯನ್ಸ್(ಯುಪಿಎ) ಫಲಿತಾಂಶಗಳು ಈಗಾಗಲೇ ನಿರ್ಧಾರವಾಗಿವೆ. ಘೋಷಣೆ ಮಾತ್ರ ಬಾಕಿ ಇದೆ. ದಕ್ಷಿಣ ಭಾರತದಲ್ಲಿ 2009ರಲ್ಲಿ ಬಿಜೆಪಿ 15 ಸ್ಥಾನಗಳನ್ನು ಗಳಿಸಿದ್ದರೆ, ಯುಪಿಎ 85 ಸ್ಥಾನ ಗಳಿಸಿತ್ತು. ಈ ಬಾರಿ ಎನ್ ಡಿಎ 55ಕ್ಕೂ ಅಧಿಕ ಸ್ಥಾನಗಳಿಸಲಿದೆ ಎಂದಿದ್ದಾರೆ.

ಎನ್ ಡಿಎ ಅಭ್ಯರ್ಥಿಗಳಾದ ರಾಜಂಪೇಟ್ ಹಾಗೂ ತಿರುಪತಿ ಕೆ ಜಯರಾಮ್ ಮತ್ತು ಡಿ ಪುರಂದೇಶ್ವರಿ ಅವರಿಗೆ ಭರ್ಜರಿ ಜಯ ಸಿಗಲಿದೆ ಎಂದ ಪ್ರಕಾಶ್, ಟಿಡಿಪಿ-ಬಿಜೆಪಿ ನಡುವೆ ವೈಮನಸ್ಯ ಇಲ್ಲ, ಟಿಕೆಟ್ ಹಂಚಿಕೆ ವಿಷಯ ಈಗ ಮುಗಿದ ಅಧ್ಯಾಯ ಎಂದಿದ್ದಾರೆ.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ರಿಮೋಟ್ ಕಂಟ್ರೋಲ್ ಸರ್ಕಾರ ಎಂಬುದನ್ನು ಪ್ರಧಾನಿಗಳ ಮಾಜಿ ಮಾಧ್ಯಮ ಸಲಹೆಗಾರ ಸಂಜಯ ಬರು ಬಹಿರಂಗಗೊಳಿಸಿದ್ದಾರೆ. ಜನರಿಗೆ ಯುಪಿಎ ಮೇಲೆ ಸಂಪೂರ್ಣ ಭರವಸೆ ಕಳೆದುಹೋಗಿದೆ ಎಂದು ಪ್ರಕಾಶ್ ಹೇಳಿದರು.

English summary
Tirupati: BJP spokesperson Prakash Javadekar said that his party would get at least 55 seats in South India in the Lok Sabha election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X