ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹೈದ್ರಾಬಾದ್ ಭಾಷಣದಲ್ಲಿನ ಕೆಮಿಸ್ಟ್ರಿ ಹೀಗಿತ್ತು

By Srinath
|
Google Oneindia Kannada News

ಹೈದರಾಬಾದ್, ಏ. 23: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಿನ್ನೆ ರಾತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ಟೇಡಿಯಂನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದಾರೆ. ಇದು ಹಾಲಿ ಲೋಕಸಭಾ ಚುನಾವಣೆಯಲ್ಲಿ ಮೊದಿಯ ಅತ್ಯುತ್ತಮ ಮತ್ತು ಪರಿಣಾಮಕಾರಿ ಭಾಷಣವೆನ್ನಬಹುದು.

ವೇದಿಕೆಯಲ್ಲಿ ಮುಖ್ಯವಾಗಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರು ವೇದಿಕೆಯಲ್ಲಿ ಆಸೀನರಾಗಿದ್ದರೆ ಅವರ ಜತೆಗೆ ಇನ್ನೂ ಅನೇಕ ನಾಯಕರು ಮತ್ತು ಅಭ್ಯರ್ಥಿಗಳು ಉಪಸ್ಥಿತರಿದ್ದರು. ಇನ್ನು ಸುಮಾರು ಒಂದು ಲಕ್ಷದಷ್ಟು ಮಂದಿ ಸಭಿಕರೂ ಪಾಲ್ಗೊಂಡಿದ್ದರು. (ಚಂದ್ರಬಾಬು ನಾಯ್ಡು- ಮೋದಿ ಇನ್ನೂ ಹತ್ತಿರವಾದ್ರು)

ಕಾಂಗ್ರೆಸ್ ಪಕ್ಷವು ಆಂದ್ರ ಪ್ರದೇಶಕ್ಕೆ ಏನೆಲ್ಲಾ 'ಕೊಡುಗೆ' ನೀಡುತ್ತಾ ಬಂದಿದೆ. ರಾಜ್ಯವನ್ನು ಹೇಗೆ ಛಿದ್ರಗೊಳಿಸಿದೆ, ಇಲ್ಲಿನ ರಾಜಕೀಯ ನಾಯಕರನ್ನು ಹೇಗೆ ತುಚ್ಛವಾಗಿ ನಡೆಸಿಕೊಂಡು ಬಂದಿದೆ ಎಂಬುದನ್ನು ಮೋದಿ ಅವರು ತಮ್ಮ ಭಾಷಣದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರು. ತತ್ಫಲವಾಗಿ ಬುದ್ಧಿವಂತ ತೆಲುಗು ಜನ ಕಾಂಗ್ರೆಸ್ ಪಕ್ಷವನ್ನು ಹೇಗೆ ಅಧಿಕಾರದಿಂದ ದೂರವಿಟ್ಟಿದ್ದಾರೆ ಎಂಬುದನ್ನೂ ಮೋದಿ ವಿವರಿಸಿದರು.

ಆಂಧ್ರದ ಇಡೀ ಚರಿತ್ರೆಯನ್ನು ಮೋದಿ ಬಿಡಿಸಿಡುತ್ತಿದ್ದರೆ ಚಂದ್ರಬಾಬು ಮತ್ತು ಪವನ್ ಕಲ್ಯಾಣ್ ಗೆ ತಲೆದೂಗಿಸುವುದಷ್ಟೇ ಕೆಲಸವಾಯ್ತು. ಮಾತಿನ ಮಧ್ಯೆ ಹಿರಿಯರನ್ನೆಲ್ಲಾ ರಾಜಕೀಯ ನಾಯಕರು ಎಂದು ಸಂಭೋದಿಸಿದರೆ ಪವನ್ ಕಲ್ಯಾಣ್ ತನ್ನ ಯುವಮಿತ್ರ. ವೇದಿಕೆಯ ಮೇಲೆ ಒಬ್ಬ ಪವನ್ ಇದ್ದರೆ ಪ್ರೇಕ್ಷಕರ ಮಧ್ಯೆ ಸಾವಿರಾರು ಯುವ ಪವನ್ ಕಲ್ಯಾಣ್ ಗಳು ಕಾಣಿಸುತ್ತಿದ್ದಾರೆ ಎಂದು ಪವನ್ ಅಂತಹ ಯುವನಾಯಕನ ಪ್ರಸ್ತುತತೆಯನ್ನು ಮೋದಿ ಒತ್ತಿ ಹೇಳಿದರು.

nda-narendra-modi-speech-at-lb-stadium-hyderabad

ವೇದಿಕೆಯ ಮೇಲೆ ಆಂಧ್ರದ ಜನತೆಗೆ ಮೋದಿ, ಪವನ್ ಕಲ್ಯಾಣ್ ಮತ್ತು ಚಂದ್ರಬಾಬು ನಾಯ್ಡು ಕುಳಿತಿದ್ದಾರೆ. ಇವರು ಮೂವರು ಸೇರಿದರೆ ಮೂರಾಗುವುದಿಲ್ಲ; ಬದಲಿಗೆ ಅವರ ಶಕ್ತಿ 111 ಆಗುತ್ತದೆ. ಇವರ ಮಧ್ಯೆಯಿರುವುದ ಅಂಕಗಣಿತವಲ್ಲ- ಅದು ಪಕ್ಕಾ ಕೆಮಿಸ್ಟ್ರಿ. ಮುಂದಿನ ಚುನಾವಣೆ ತೆಲಂಗಾಣ ಮತ್ತು ಸೀಮಾಂಧ್ರ ಜನತೆಗೆ ಬಹುಮುಖ್ಯವಾಗಿರುತ್ತದೆ. ಹಾಗಾಗಿ ಆಂಧ್ರದ ಜನತೆ ಅಖಂಡವಾಗಿ ಟಿಡಿಪಿ ಅಭ್ಯರ್ಥಿಗಳಿಗೆ ಮತ ನೀಡುವಂತಾಗಬೇಕು ಎಂದು ಮೋದಿ ಆಶಿಸಿದರು.

ಮೋದಿ ಅವರು ಪ್ರಧಾನಿಯಾಗುವುದಕ್ಕೆ ಎಲ್ಲ ಅರ್ಹತೆ/ಯೋಗ್ಯತೆ ಪಡೆದಿದ್ದಾರೆ. ದೇಶದ ನಾಗರಿಕರೂ ಸಹ ಇದನ್ನೇ ಬಯಸುತ್ತಿದ್ದಾರೆ ಎಂದು ಪವನ್ ಕಲ್ಯಾಣ್ ತಮ್ಮ ಭಾಷಣದಲ್ಲಿ ಹೇಳಿದರು.

English summary
Lok Sabha polls 2014 - NDA Narendra Modi speech at LB stadium Hyderabad. Narendra Modi in his speech at LB Stadium public meeting said that the chemistry of Chandrababu Naidu, Pawan Kalyan and himself matches. He said that the coming elections are crucial for Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X