ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಸುದ್ದಿ: ಒಡೆದ ಮನೆ ಆಂಧ್ರದಲ್ಲಿ ನೋವು-ನಲಿವು

By Mahesh
|
Google Oneindia Kannada News

ಹೈದರಾಬಾದ್, ಫೆ. 19: ರಾಯಲಸೀಮೆ ಹಾಗೂ ಆಂಧ್ರ ಕರಾವಳಿ ಭಾಗದ ಜನರ ನೋವು, ತೆಲಂಗಾಣ ಜನರ ಸಂಭ್ರಮ, ರಾಜಕೀಯ ಪಕ್ಷಗಳ ದೊಂಬರಾಟ, ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆ ವಿಧೇಯಕ ಮಂಡನೆ ವಿಧಾನಕ್ಕೆ ಆಕ್ಷೇಪ ಎಲ್ಲಕ್ಕೂ ಬುಧವಾರದ ಬಂದ್ ಸಾಕ್ಷಿಯಾಗಿದೆ.

ತೆಲಂಗಾಣ ಭಾಗದಲ್ಲಿ ಸಂಭ್ರಮ ಮುಗಿಲು ಮುಟ್ಟಿದರೆ, ಸೀಮಾಂಧ್ರದಲ್ಲಿ ಆಕ್ರೋಶ ಭುಗಿಲೆದ್ದಿದೆ. ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟು ಹೋರಾಟ ನಡೆಸುತ್ತಿದ್ದ ತೆಲಂಗಾಣ ರಾಷ್ಟ್ರ ಸಮಿತಿ ಕಾರ್ಯಕರ್ತರು ಹಾಗೂ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ರಸ್ತೆಗಳಲ್ಲಿ ವಿಜಯೋತ್ಸವದ ಘೋಷಣೆಗಳನ್ನು ಕೂಗುತ್ತ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.[ಕಿರಣ್ ರೆಡ್ಡಿ ರಾಜೀನಾಮೆ, ಕಾಂಗ್ರೆಸ್ ಗೆ ಗುಡ್ ಬೈ]

ಸೀಮಾಂಧ್ರದ 23 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟಿಡಿಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕೂಡ ಬಂದ್ ‌ಗೆ ಬೆಂಬಲ ಕೊಟ್ಟಿದ್ದು, ಸೀಮಾಂಧ್ರ ಭಾಗದ ಎಲ್ಲ ಜಿಲ್ಲೆ ಗಳಲ್ಲಿ ರಸ್ತೆ ತಡೆ, ನರೇಂದ್ರ ಮೋದಿ, ಸೋನಿಯಾಗಾಂಧಿ, ರಾಹುಲ್ ‌ಗಾಂಧಿ, ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್ ಮೊದಲಾದವರ ಪ್ರತಿಕೃತಿಗಳನ್ನು ದಹನ ಮಾಡಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೀಮಾಂಧ್ರ ಭಾಗದಲ್ಲಿ ವೈಎಸ್ ‌ಆರ್ ಕಾಂಗ್ರೆಸ್ ‌ನ ಕಾರ್ಯಕರ್ತರು ರಸ್ತೆ ತಡೆ ಮಾಡುತ್ತಿರುವುದರಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.[ಆಂಧ್ರ ವಿಭಜನೆ, ಕರ್ನಾಟಕ ದೊಡ್ಡಣ್ಣ, ಲಾಭ ಏನಣ್ಣ?]

ವಿಶಾಖಪಟ್ಟಣ್ಣಂ, ವಿಜಯವಾಡ, ಗುಂಟೂರು, ನೆಲ್ಲೂರು, ತಿರುಪತಿ, ಕರ್ನೂಲ್ ಹಾಗೂ ಅನಂತಪುರ ಭಾಗಗಳಲ್ಲಿ ಬಂದ್ ಬಿಸಿ ಹೆಚ್ಚಾಗಿದೆ. ಕರ್ನಾಟಕದಿಂದ ಹೊರಡುತ್ತಿದ್ದ 500ಕ್ಕೂ ಹೆಚ್ಚು ಸರ್ಕಾರಿ ಬಸ್ ಗಳು ಸೇವೆ ಸ್ಥಗಿತಗೊಳಿಸಿವೆ. ತಿರುಪತಿ, ಮಂತ್ರಾಲಯ, ಶ್ರೀಕಾಳಹಸ್ತಿ, ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳಿಗೆ ಸಂರ್ಪಕ ಸಿಗದೆ ಜನರು ಒದ್ದಾಡಿದ್ದಾರೆ. ಬಂದ್ ಬಿಸಿ ಚಿತ್ರಗಳು ಇಲ್ಲಿವೆ ನೋಡಿ....

ಸೀಮಾಂಧ್ರದ 23 ಜಿಲ್ಲೆಗಳಲ್ಲಿ ಜನರ ಆಕ್ರೋಶ

ಸೀಮಾಂಧ್ರದ 23 ಜಿಲ್ಲೆಗಳಲ್ಲಿ ಜನರ ಆಕ್ರೋಶ

ಸೀಮಾಂಧ್ರದ 23 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟಿಡಿಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕೂಡ ಬಂದ್ ‌ಗೆ ಬೆಂಬಲ ಕೊಟ್ಟಿದ್ದು, ಸೀಮಾಂಧ್ರ ಭಾಗದ ಎಲ್ಲ ಜಿಲ್ಲೆ ಗಳಲ್ಲಿ ರಸ್ತೆ ತಡೆ ನಡೆಸಿದ್ದಾರೆ.

ರಾಜಕೀಯ ನಾಯಕರ ಪ್ರತಿಕೃತಿ ದಹನ

ರಾಜಕೀಯ ನಾಯಕರ ಪ್ರತಿಕೃತಿ ದಹನ

ಸೋನಿಯಾಗಾಂಧಿ, ರಾಹುಲ್ ‌ಗಾಂಧಿ, ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್ ಮೊದಲಾದವರ ಪ್ರತಿಕೃತಿಗಳನ್ನು ದಹನ ಮಾಡಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ಅವರ ಭಾರತ ಗೆಲ್ಲಿಸಿ ಬ್ಯಾನರ್ ಕಥೆ

ಮೋದಿ ಅವರ ಭಾರತ ಗೆಲ್ಲಿಸಿ ಬ್ಯಾನರ್ ಕಥೆ

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಸಮಾವೇಶದ ಪ್ರಚಾರಕ್ಕೆ ಬಳಸಲಾಗಿದ್ದ ಬ್ಯಾನರ್ ಗಳನ್ನು ಹರಿದು ಹಾಕಲಾಗಿದೆ.

ಸ್ವಯಂಪ್ರೇರಿತರಾಗಿ ಜನರು ಬಂದ್ ಆಚರಿಸುತ್ತಿದ್ದಾರೆ

ಸ್ವಯಂಪ್ರೇರಿತರಾಗಿ ಜನರು ಬಂದ್ ಆಚರಿಸುತ್ತಿದ್ದಾರೆ

ವಿಶಾಖಪಟ್ಟಣ್ಣಂ, ವಿಜಯವಾಡ, ಗುಂಟೂರು, ನೆಲ್ಲೂರು, ತಿರುಪತಿ, ಕರ್ನೂಲ್ ಹಾಗೂ ಅನಂತಪುರ ಭಾಗಗಳಲ್ಲಿ ಬಂದ್ ಬಿಸಿ ಹೆಚ್ಚಾಗಿದೆ.

ರಾಜಕೀಯ ಪಕ್ಷಗಳಿಂದ ಬಂದ್ ಗೆ ಕರೆ

ರಾಜಕೀಯ ಪಕ್ಷಗಳಿಂದ ಬಂದ್ ಗೆ ಕರೆ

ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಜಗನ್ ಮೋಹನ್ ರೆಡ್ಡಿ ಅವರು ಬುಧವಾರದ ಬಂದ್ ಗೆ ಮೊದಲಿಗೆ ಕರೆ ನೀಡಿದರು. ನಂತರ ನಾನ್ ಗೆಜೆಟೆಡ್ ಅಧಿಕಾರಿಗಳ ಸಂಘಟನೆ, ತೆಲುಗು ದೇಶಂ ಪಕ್ಷ ಕೂಡಾ ಬಂದ್ ಗೆ ಬೆಂಬಲ ಘೋಷಿಸಿದರು.

ಸೀಮಾಂಧ್ರ ಸಂಚಾರ ವ್ಯವಸ್ಥೆ ಎಲ್ಲೆಡೆ ಅಸ್ತವ್ಯಸ್ತ

ಸೀಮಾಂಧ್ರ ಸಂಚಾರ ವ್ಯವಸ್ಥೆ ಎಲ್ಲೆಡೆ ಅಸ್ತವ್ಯಸ್ತ

ಆಂಧ್ರ ಪ್ರದೇಶದ ಸಾರಿಗೆ ಸಂಸ್ಥೆಯ 12 ಸಾವಿರಕ್ಕೂ ಅಧಿಕ ಬಸ್ ಗಳು ಕರ್ನಾಟಕದ 500ಕ್ಕೂ ಬಸ್ ಗಳು ಸಂಚಾರ ಸ್ಥಗಿತಗೊಳಿಸಿದ್ದು, ಸೀಮಾಂಧ್ರ ಬಂದ್ ನಿಂದ ತತ್ತರಿಸಿದೆ. ಇನ್ನಷ್ಟು ಚಿತ್ರಗಳು ನಿರೀಕ್ಷಿಸಿ

ಕಾಣದ ದೇವರಿಗೆ ಸಂಸದೆ ವಿಜಯಶಾಂತಿ ನಮನ

ಕಾಣದ ದೇವರಿಗೆ ಸಂಸದೆ ವಿಜಯಶಾಂತಿ ನಮನ

ನವದೆಹಲಿ : ಟಿಆರ್ ಎಸ್ ಸಂಸದೆ ವಿಜಯ ಶಾಂತಿ ಅವರು ತೆಲಂಗಾನ ವಿಧೇಯಕ ಅಂಗೀಕಾರವಾದ ಖುಷಿಯಲ್ಲಿ ಸಂಸತ್ತಿನ ಹೊರಗಡೆ ದೇವರಿಗೆ ನಮಿಸುತ್ತಿರುವುದು PTI Photo by Manvender Vashist

ಸಂಸದೆ ವಿಜಯಶಾಂತಿ ಗೆಲುವಿನ ಸಂಭ್ರಮ

ಸಂಸದೆ ವಿಜಯಶಾಂತಿ ಗೆಲುವಿನ ಸಂಭ್ರಮ

ನವದೆಹಲಿ : ಟಿಆರ್ ಎಸ್ ಸಂಸದೆ ವಿಜಯ ಶಾಂತಿ ಅವರು ತೆಲಂಗಾಣ ರಾಜ್ಯ ರಚನೆ ಖುಷಿಯಲ್ಲಿ ಕೈ ಎತ್ತಿ ಸಂಭ್ರಮಸಿದ್ದು ಹೀಗೆ

ರಾಜ್ಯಸಭೆಯಲ್ಲಿ ಆಂಧ್ರ ಸಂಸದರ ಗದ್ದಲ

ರಾಜ್ಯಸಭೆಯಲ್ಲಿ ಆಂಧ್ರ ಸಂಸದರ ಗದ್ದಲ

ನವದೆಹಲಿ: ಯುನೈಟೆಡ್ ಆಂಧ್ರ ಪ್ರದೇಶ ಬೆಂಬಲಿತ ಸಂಸದರು ರಾಜ್ಯಸಭೆ ಕಲಾಪಕ್ಕೆ ಅಡ್ಡಿಪಡಿಸಿ ಮಸೂದೆ ಪತ್ರವನ್ನು ಕಾರ್ಯದರ್ಶಿ ಅವರಿಂದ ಕಿತ್ತುಕೊಳ್ಳಲು ಯತ್ನಿಸಿದರು. PTI Photo/ TV GRAB

ದೆಹಲಿಯಲ್ಲಿ ಟಿಆರ್ ಎಸ್ ಕಾರ್ಯಕರ್ತರ ಸಂಭ್ರಮ

ದೆಹಲಿಯಲ್ಲಿ ಟಿಆರ್ ಎಸ್ ಕಾರ್ಯಕರ್ತರ ಸಂಭ್ರಮ

ದೆಹಲಿಯಲ್ಲಿ ಟಿಆರ್ ಎಸ್ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. PTI Photo by Shahbaz Khan

ಟಿಆರ್ ಎಸ್ ಕಾರ್ಯಕರ್ತರು ಸಂಭ್ರಮಾಚರಣೆ

ಟಿಆರ್ ಎಸ್ ಕಾರ್ಯಕರ್ತರು ಸಂಭ್ರಮಾಚರಣೆ

ನವದೆಹಲಿಯಲ್ಲಿ ಟಿಆರ್ ಎಸ್ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. PTI Photo by Shahbaz Khan

ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಪ್ರತಿಕ್ರಿಯೆ

ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಪ್ರತಿಕ್ರಿಯೆ

ನವದೆಹಲಿ: ವೈಎಸ್ಸಾರ್ ಕಾಂಗ್ರೆಸ್ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ವಿಧೇಯಕ ಅಂಗೀಕಾರವಾದ ಮೇಲೆ ನೀಡಿದ ಪ್ರತಿಕ್ರಿಯೆ.. ನಂತರ ಬಂದ್ ಗೆ ಕರೆ. PTI Photo by Kamal Singh

ಟಿಆರ್ ಎಸ್ ಕಾರ್ಯಕರ್ತರಿಂದ ಸಂಭ್ರಮ

ಟಿಆರ್ ಎಸ್ ಕಾರ್ಯಕರ್ತರಿಂದ ಸಂಭ್ರಮ

ಟಿಆರ್ ಎಸ್ ಕಾರ್ಯಕರ್ತರಿಂದ ಸಂಭ್ರಮ, ತೆಲಂಗಾಣದಲ್ಲ್ಲಿ ಎಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ. ಕಾರ್ಯಕರ್ತರು ಪರಸ್ಪರ ರಂಗು ಬಳಿದುಕೊಂಡು, ಸಿಹಿ ಹಂಚಿ ಸಂತಸಪಟ್ಟಿದ್ದಾರೆ.

English summary
Normal life came to a grinding halt in all 13 districts of Rayalaseema and coastal Andhra regions on Wednesday(Feb.19) to protest against UPA passing of the Telangana Bill. The shutdown was total in major towns like Visakhapatnam, Vijayawada, Guntur, Nellore, Tirupati, Kurnool and Anantapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X