ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ಯಾಸ್ ಪೈಪ್ ಲೈನ್ ಸ್ಫೋಟ : ಮೋದಿ ಟ್ವಿಟ್

|
Google Oneindia Kannada News

ಹೈದರಾಬಾದ್, ಜೂ. 27 : ಆಂಧ್ರಪ್ರದೇಶದ ಘಟನೆ ಬಗ್ಗೆ ಟ್ವಿಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಈ ಸಂಬಂಧ ತಾವು ಇಂಧನ ಸಚಿವ ಧರ್ಮೇಂದರ್ ಪ್ರಧಾನ್ ಹಾಗೂ ಜಿಎಐಎಲ್ ಕಂಪನಿ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಪರಿಹಾರದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದ್ದಾರೆ.

ಮೃತಪಟ್ಟವರ ಗುರುತು ಪತ್ತೆ : ಗ್ಯಾಸ್ ಪೈಪ್ ಲೈನ್ ಸ್ಫೋಟದಲ್ಲಿ ಮೃತಪಟ್ಟವರ ಪೈಕಿ 12 ಜನರ ಗುರುತನ್ನು ಪತ್ತೆ ಹಚ್ಚಲಾಗಿದೆ. ರುದ್ರ ನಾಗವೇಣಿ, ವನರಸಿ ನಾಗೇಂದ್ರರಾವ್, ಗಾಡಿಗಂಟಿ ವಾಸು, ಅನಂತ ಲಕ್ಷ್ಮೀ, ಗಾಡಿಗಂಟಿ ಕೋಕಿಲ, ಸಾಯಿ ಗಣೇಶ್, ಇಂದುಪಲ್ಲಿ ಲಕ್ಷ್ಮೀ, ನರಸಿಂಹಮೂರ್ತಿ, ಚೆನ್ನ, ಬಾಲಜಿ, ಭೋಗಿಶೆಟ್ಟಿ ದಿವ್ಯತೇಜ ಮೃತಪಟ್ಟವರಾಗಿದ್ದಾರೆ.

ಹಿಂದಿನ ಸುದ್ದಿ : ಆಂಧ್ರ ಪ್ರದೇಶದ ಪೂರ್ವ ಗೋದಾವರಿಯ ನಗರಂ ಬಳಿ ಗ್ಯಾಸ್ ಕೊಳವೆ ಮಾರ್ಗ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಸುಮಾರು 14 ಜನರು ಸಾವನ್ನಪ್ಪಿದ್ದಾರೆ. ಅಗ್ನಿ ಶಾಮಕದ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಕೈಗೊಂಡಿವೆ.

Gas

ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಗೈಲ್) ಸೇರಿದ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ 5.30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು, ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಫೋಟದಿಂದಾಗಿ 14 ಜನರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸ್ಫೋಟಗೊಂಡ ತಕ್ಷಣ ಬೆಂಕಿಯ ಕೆನ್ನಾಲಿಗೆ ಸುತ್ತಮುತ್ತ ಚಾಚಿದ್ದು ಸುಮಾರು 50 ಮನೆಗಳು ಮತ್ತು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ. 8 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ಹತೋಟಿಗೆ ತರುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.

ಕೇಂದ್ರ ಇಂಧನ ಸಚಿವಾಲಯ ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದೆ. ಆಂಧ್ರ ಪ್ರದೇಶದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಇಂತಹ ಮೂರು ಗ್ಯಾಸ್ ಕೊಳವೆ ಮಾರ್ಗಗಳು ಸ್ಫೋಟಗೊಂಡಿವೆ.

English summary
In a major gas pipeline explosion at the site of the state-owned Gas Authority of India Limited (GAIL) in Nagaram in Andhra Pradesh, at least 14 people are feared to have been burnt alive on Friday, June 27 morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X