ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಮಂದಿಗೆ ಮಟನ್ ತಿನ್ನೋ ಭಾಗ್ಯವಿಲ್ಲ!

|
Google Oneindia Kannada News

ಹುಬ್ಬಳ್ಳಿ, ಆ.27 : ಮಟನ್ ತಿನ್ನಬೇಕು ಅಂದುಕೊಳ್ಳುವ ಹುಬ್ಬಳ್ಳಿ ಜನರಿಗೆ ನಿರಾಸೆ ಕಾದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುರಿ ಮಾಂಸ ಮಾರಾಟಗಾರರು ಮಂಗಳವಾರದಿಂದ ಮಾಂಸದಂಗಡಿ ಬಂದ್ ಮಾಡಿದ್ದಾರೆ.

ಮಹಾನಗರ ಪಾಲಿಕೆಯ ವಧಾಲಯ ಟೆಂಡರ್ ನೀಡುವುದರಲ್ಲಿ ಸರಿಯಾದ ಕ್ರಮ ಅನುಸರಿಸಿಲ್ಲ ಎಂದು ಆರೋಪಿಸಿರುವ ಅಂಗಡಿ ಮಾಲೀಕರು, ಪಾಲಿಕೆ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದ ಮಟನ್ ತಿನ್ನುವ ಜನರ ಆಸೆಗೆ ತಣ್ಣೀರು ಸುರಿದಂತಾಗಿದೆ.

Mutton

ಹುಬ್ಬಳ್ಳಿ ನಗರ ವ್ಯಾಪ್ತಿಯ ವಾರ್ಡ್ ನಂ.49ರಲ್ಲಿ ಪಾಲಿಕೆಗೆ ಸೇರಿದ ವಧಾಲಯವಿದೆ. ಟೆಂಡರ್ ಮೂಲಕ ಇದನ್ನು ವ್ಯಾಪಾರಸ್ಥರಿಗೆ ಹಂಚಿಕೆ ಮಾಡಲಾಗುತ್ತಿತ್ತು. ಮೂರು ವರ್ಷಗಳಿಂದ ಈ ಪದ್ಧತಿ ಜಾರಿಯಲ್ಲಿತ್ತು. ಆದರೆ, ಈ ಬಾರಿ ಟೆಂಡರ್ ಕರೆದಾಗ ಅದನ್ನು ಸರಿಯಾಗಿ ವಿತರಣೆ ಮಾಡಿಲ್ಲ ಎಂದು ಹುಬ್ಬಳ್ಳಿ ಮಟನ್ ಮಾರಾಟಗಾರರ ಸಂಘ ಆರೋಪಿಸಿದ್ದು, ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಬಾರಿ ಮಹಾನಗರ ಪಾಲಿಕೆ ಟೆಂಡರ್‌ಅನ್ನು ಆದರ್ಶ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಗೆ ನೀಡಿದೆ. ಇದರಿಂದಾಗಿ ಕುಲಕಸುಬಾಗಿ ಮಟನ್ ಮಾರುತ್ತಾ ಬಂದ ಹುಬ್ಬಳ್ಳಿ ಮಟನ್ ಮಾರಾಟಗಾರರ ಸಂಘದವರು ಟೆಂಡರ್‌ನಿಂದ ವಂಚಿತರಾಗಿದ್ದು, ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಪಾಲಿಕೆ ನಿಯಮದಂತೆ ಕುರಿಯೊಂದನ್ನು ವಧಿಸಲು ರು.10 ಪಡೆಯಬೇಕೆಂಬ ನಿಯಮವಿದ್ದರೂ ಹೊಸದಾಗಿ ಟೆಂಡರ್ ಪಡೆದವರು ಅಕ್ರಮವಾಗಿ ರು.20 ಪಡೆಯುತ್ತಿದ್ದಾರೆ ಎಂದು ವ್ಯಾಪಾರಸ್ಥರು ಆರೋಪಿಸುತ್ತಿದ್ದಾರೆ. ಆದ್ದರಿಂದ ವ್ಯಾಪಾರಸ್ಥರಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

English summary
Hubli Mutton vendors association protesting against Hubli-Dharwad Municipal Corporation in the issue distributing tender of Mutton stall. By the protest Mutton shops closed form two days in Hubli city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X