ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆ.1ರಿಂದ ಹುಬ್ಬಳ್ಳಿ ವಿಮಾನ ನಿಲ್ದಾಣ ಬಂದ್

|
Google Oneindia Kannada News

ಹುಬ್ಬಳ್ಳಿ, ಜು. 16 : ಹುಬ್ಬಳ್ಳಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಕಾರ್ಯದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣ ಎರಡು ತಿಂಗಳ ಕಾಲ ಬಂದ್ ಆಗಲಿದೆ. ಆ.1ರಿಂದ ವಿಮಾನ ಹಾರಾಟ ಸ್ಥಗಿತಗೊಳಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಿರ್ಧರಿಸಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ದರ್ಜೆ ವಿಮಾನ ನಿಲ್ದಾಣವಾಗಿ ಮೇಲ್ದರ್ಜೇಗೇರಿಸುವ ಕಾಮಗಾರಿ ಆರಂಭವಾಗಿದೆ. ಸದ್ಯ ನಿಲ್ದಾಣದಲ್ಲಿರುವ 4500 ಅಡಿ ಉದ್ದರ ರನ್ ವೇಯನ್ನು 7500 ಅಡಿಗೆ ವಿಸ್ತರಣೆ ಮಾಡಲಾಗುತ್ತದೆ. ಒಟ್ಟು 60 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

Hubli

ರನ್ ವೇ ವಿಸ್ತರಣೆ ಕಾರ್ಯದ ಹಿನ್ನಲೆಯಲ್ಲಿ ಆ.1ರಿಂದ ನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸುವಂತೆ ವಿಮಾನ ನಿಲ್ದಾಣಗಳ ಪ್ರಾಧಿಕಾರ ಸೂಚನೆ ನೀಡಿದೆ. ಈ ಕಾಮಗಾರಿ ಸುಮಾರು ಎರಡು ತಿಂಗಳ ಕಾಲ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. [ಹುಬ್ಬಳ್ಳಿ-ಮುಂಬೈ-ನಾಂದೇಡ್ SpiceJet ಆರಂಭವಾಯ್ತು]

ಸ್ಪೈಸ್‌ಜೆಟ್‌ ಖಾಸಗಿ ವೈಮಾನಿಕ ಸಂಸ್ಥೆಯು ಹುಬ್ಬಳ್ಳಿ- ಬೆಂಗ­ಳೂರು ಹಾಗೂ ಹುಬ್ಬಳ್ಳಿ-ಮುಂಬೈ-ದೆಹಲಿ ಮಧ್ಯೆ ನಿತ್ಯ ವಿಮಾನಯಾನ ಸೇವೆ ನೀಡುತ್ತಿದೆ. ಎರಡು ತಿಂಗಳ ಅವಧಿಗೆ ವಿಮಾನ ಹಾರಾಟವನ್ನು ಬೆಳಗಾವಿಗೆ ಸ್ಥಳಾಂತರ ಮಾಡಲು ಉದ್ದೇಶಿಸಲಾಗಿದೆ.

ರನ್ ವೇ ವಿಸ್ತರಣೆ ಕಾರ್ಯ ನಡೆಯುತ್ತಿದ್ದರೂ ಹೆಲಿಕಾಪ್ಟರ್ ಮತ್ತು 4-6 ಸೀಟಿನ ಲಘುವಿಮಾನ ಇಳಿಯಲು ಯಾವುದೇ ತೊಂದರೆ ಇಲ್ಲ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಕೆ.ಎಂ.ಬಸವರಾಜು ಹೇಳಿದ್ದಾರೆ. ಆದರೆ, ಇದಕ್ಕಾಗಿ ಮೂರು ದಿನನ ಮುಂಚಿತವಾಗಿ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ.

English summary
Hubli airport is to shut for more than two months as part of work of runways. The airport will close from August 1. Runway expanding work will take in the cost of 60 core.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X