ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಣೇಹಳ್ಳಿಯಲ್ಲಿ ನ.2ರಿಂದ ರಾಷ್ಟ್ರೀಯ ನಾಟಕೋತ್ಸವ

|
Google Oneindia Kannada News

ಚಿತ್ರದುರ್ಗ, ಅ.27 : ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾಸಂಘದ ವತಿಯಿಂದ ಡಾ.ಶ್ರೀ ಪಂಡಿತಾರಾಧ್ಯ ಸ್ವಾಮಿಗಳ ಸಾನಿಧ್ಯದಲ್ಲಿ ನವೆಂಬರ್‌ 2ರಿಂದ 8ರವರೆಗೆ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ನಾಟಕೋತ್ಸವ ಉದ್ಘಾಟಿಸಲಿದ್ದಾರೆ.

ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದ್ದು, ಪ್ರತಿದಿನ ಸಾಮೂಹಿಕ ಪ್ರಾರ್ಥನೆ, ಚಿಂತನ, ವಚನ ಗೀತೆ, ಉಪನ್ಯಾಸ, ನಾಟಕ ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಚಿಂತನ ಕಾರ್ಯಕ್ರಮ ನಡೆಯಲಿದೆ. [ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ]

ನ.2ರ ಭಾನುವಾರ ಸಂಜೆ 6 ಗಂಟೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ನಾಟಕೋತ್ಸವ ಉದ್ಘಾಟಿಸಲಿದ್ದು, ರಾಜ್ಯೋತ್ಸವದ ಉದ್ಘಾಟನೆಯನ್ನು ಸಾಹಿತಿ ನಾ.ಡಿಸೋಜಾ ನೆರವೇರಿಸಲಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠಲಮೂರ್ತಿ ಅವರು ಶಿವಸಂಚಾರ ನಾಟಕಗಳನ್ನು ಉದ್ಘಾಟಿಸಲಿದ್ದಾರೆ. [ರಂಗಶಂಕರಕ್ಕೆ ಹತ್ತು, ವಿವಿಧ ನಾಟಕಗಳ ಗಮ್ಮತ್ತು]

Sanehalli

ವಿ.ಆರ್.ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ ವಿಜಯ್ ಸಂಕೇಶ್ವರ, ದಾವಣಗೆರೆ ವಿವಿ ಕುಲಪತಿ ಡಾ.ಬಿ.ಬಿ.ಕಲಿವಾಳ, ಪೂರ್ವವಲಯ ಐಜಿಪಿ ಡಾ.ಎಸ್.ಪರಶಿವಮೂರ್ತಿ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮುಂತಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ನ.2ರಂದು ಜಡಭರತ ರಚನೆಯ 'ಜರ್ಮನ್ ಬಂಗ್ಲೆ' ನಾಟಕವನ್ನು ಶಿವಸಂಚಾರ-14 ತಂಡ ಚಿದಂಬರರಾವ್ ಜಂಬೆ ನಿರ್ದೇಶದಲ್ಲಿ ಪ್ರದರ್ಶಿಸಲಿದೆ. ನ.3ರಂದು ಬಿ.ಚಂದ್ರೇಗೌಡರ 'ಬಯಲುಸೀಮೆ ಕಟ್ಟೆ ಪುರಾಣ' ನಾಟಕವನ್ನು ಶಿವಮೊಗ್ಗದ ನಂ ಟೀಮ್ ಪ್ರದರ್ಶಿಸಲಿದೆ.

ನ.4ರಂದು ಕಂದಗಲ್ ಹನುಮಂತರಾಯರು ರಚಿಸಿರುವ 'ರಕ್ತರಾತ್ರಿ' ನಾಟಕವನ್ನು ನಾಡೋಜ ಬೆಳಗಲ್ ವೀರಣ್ಣ ನಿರ್ದೇಶನದಲ್ಲಿ ಬೆಳಗಲ್ ವೀರಣ್ಣ ತಂಡ ಅಭಿನಯಿಸಲಿದೆ. ನ.5ರಂದು ಲಿಂಗದೇವರು ಹಳೇಮನೆ ಅವರ 'ಚಿಕ್ಕದೇವಭೂಪ' ನಾಟಕವನ್ನು ಶಿವಸಂಚಾರ-14ರ ತಂಡ ಗಂಗಾಧರಸ್ವಾಮಿ ನಿರ್ದೇಶನದಲ್ಲಿ ಪ್ರದರ್ಶಿಸಲಿದೆ.

ನ.6ರಂದು ದೆಹಲಿ ಕೇಂದ್ರ ಸಂಗೀತ ನಾಟಕ ಅಕಾಡಮೆ ಸಹಕಾರದಲ್ಲಿ 'ಸಂಗೀತ ಸೌಭದ್ರ' ನಾಟಕವನ್ನು ಕೀರ್ತಿ ಶಿಲೇದಾರ್ ನಿರ್ದೇಶನದಲ್ಲಿ ಪುಣೆಯ ಜೆ.ಜೆ.ಎಸ್.ಸಂಗೀತ ನಾಟ್ಯ ಸೇವಾ ಟ್ರಸ್ಟ್ ನವರು ಅಭಿನಯಿಸಲಿದ್ದಾರೆ. ನ.7ರಂದು 'ಕೈಲಾಸಂ ಕೀಚಕ' ನಾಟಕವನ್ನು ಬೆಂಗಳೂರು ಸಂಚಾರಿ ಥಿಯೇಟರ್ ಅಭಿನಯಿಸಲಿದೆ. ನ.8ರಂದು ಡಾ.ಕೆ.ವೈ.ನಾರಾಯಣಸ್ವಾಮಿ ಅವರ 'ವಿನುರ ವೇಮ' ನಾಟಕವನ್ನು ಸಿ.ಬಸವಲಿಂಗಯ್ಯ ನಿರ್ದೇಶನದಲ್ಲಿ ಶಿವಸಂಚಾರ ತಂಡ ಅಭಿನಯಿಸಲಿದೆ.

English summary
National Drama Festival 2014 from 2nd to 8th November at Sanehalli, Chitradurga district Karnataka. Minister for Law And Parliamentary Affairs T.B.Jayachandra will be inaugurate the event at November 2 at 6 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X