ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ : ಹಣ ದೋಚುತ್ತಿದ್ದ ನಕಲಿ ಸ್ವಾಮೀಜಿ ಸರೆ

|
Google Oneindia Kannada News

ಚಿತ್ರದುರ್ಗ, ಜ. 5 : ನಿಮ್ಮ ಕುಟುಂಬ ಸದಸ್ಯರೊಬ್ಬರು ಒಂದು ವಾರದಲ್ಲಿ ಸಾವನ್ನಪ್ಪುತ್ತಾರೆ, ನಿಮ್ಮ ಮನೆಯಲ್ಲಿ ಅನಾರೋಗ್ಯ ಪೀಡಿತರಾದ ವ್ಯಕ್ತಿ 15 ದಿನದಲ್ಲಿ ಸಾಯುತ್ತಾರೆ, ನಿನ್ನ ಗಂಡ ಎರಡು ದಿನದಲ್ಲಿ ಸಾವನ್ನಪ್ಪುತ್ತಾನೆ ಎಂದು ಮಹಿಳೆಯರ ಬಳಿ ಹಣ ದೋಚುತ್ತಿದ್ದ ನಕಲಿ ಸ್ವಾಮೀಜಿಯನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದೆ.

ಬಾಲ ಬಸವೇಶ್ವರ ಎಂದು ಹೇಳಿಕೊಂಡು ಕಾವಿ ತೊಟ್ಟು ನಾಯಕನ ಹಟ್ಟಿ ಮತ್ತು ಸುತ್ತ-ಮುತ್ತ ತಿರುಗಾಡುತ್ತಿದ್ದ ಈ ನಕಲಿ ಸ್ವಾಮಿ, ಪುರುಷರು ಇಲ್ಲದ ಮನೆಗಳಿಗೆ ತೆರಳಿ, ಮಹಿಳೆಯರಿಗೆ ಭಯ ಹುಟ್ಟಿಸಿ, ಸಾವಿರಾರು ರೂ. ವಸೂಲಿ ಮಾಡುತ್ತಿದ್ದ. ಭಾನುವಾರ ಈತನ ಬಣ್ಣ ಬಯಲಾಗಿದ್ದು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ.

Chitradurga

ನಿಮ್ಮ ಕುಟುಂಬದಲ್ಲಿ ವ್ಯಕ್ತಿಯೊಬ್ಬ ಒಂದು ವಾರದಲ್ಲಿ ಸಾವನ್ನಪ್ಪುತ್ತಾನೆ. ನಿಮ್ಮ ಮನೆಯಲ್ಲಿ ಅನಾರೋಗ್ಯದಿಂದ ನರಳುತ್ತಿರುವ ವ್ಯಕ್ತಿ ಹದಿನೈದು ದಿನಗಳಲ್ಲಿ ಮರಣ ಹೊಂದುತ್ತಾರೆ ಎಂದು ಮಹಿಳೆಯರನ್ನು ಭಯಪಡಿಸುತ್ತಿದ್ದ ಈತ ವಿಶೇಷ ಪೂಜೆ ಮಾಡಿಸಿಕೊಡುವುದಾಗಿ ಹಣ ಸಂಗ್ರಹಣೆ ಮಾಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. [ಚಿತ್ರದುರ್ಗ : ಮಲಗಿದ್ದ ಮಕ್ಕಳನ್ನು ಕೊಂದ ದುಷ್ಕರ್ಮಿಗಳು]

ನಾಯಕನಹಟ್ಟಿ, ಚನ್ನಬಸಯ್ಯಹಟ್ಟಿ, ಚಿಕ್ಕಮಲ್ಲನಹೊಳೆ, ಮಲ್ಲೂರಹಳ್ಳಿ ಸೇರಿದಂತೆ ನಾನಾ ಗ್ರಾಮಗಳಲ್ಲಿ 15 ಸಾವಿರಕ್ಕೂ ಹೆಚ್ಚು ಹಣ ವಸೂಲಿ ಮಾಡಿದ್ದಾನೆ ಎಂದು ಸ್ಥಳೀರು ಹೇಳಿದ್ದಾರೆ. ಭಾನುವಾರ ಚನ್ನಬಸಯ್ಯನಹಟ್ಟಿ ಗ್ರಾಮದಲ್ಲಿ ಈತ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದು, ನಾಯಕನಹಟ್ಟಿ ಪೊಲೀಸರು ಬಂಧಿಸಿದ್ದಾರೆ. [ಕೊಪ್ಪಳದಲ್ಲಿ ಸಿಕ್ಕಿಬಿದ್ದ ನಕಲಿ ಕಾಮಿ ಸ್ವಾಮಿ]

ಚಿಕ್ಕಮಗಳೂರಿನವರು : ಬಾಲ ಬಸವೇಶ್ವರ ಸ್ವಾಮೀಯ ಮೂಲ ಹೆಸರು ಎಲ್.ಜಯಣ್ಣ. ಈತ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬರಗೇನಹಳ್ಳಿ ಗ್ರಾಮದವನು ಎಂದು ಪೊಲೀಸರು ತಿಳಿಸಿದ್ದಾರೆ. ಒಂದಷ್ಟು ದಿನ ರಕ್ಷಣಾ ವೇದಿಕೆ ಸದಸ್ಯ ಎಂದು ಹೇಳಿಕೊಳ್ಳುತ್ತಿದ್ದ ಈತ ನಂತರ ಬಾಲ ಬಸವೇಶ್ವರನಾಗಿ ಬದಲಾಗಿದ್ದ.

English summary
Nayakanahatti police arrested a fake swami Bala Basava Swamiji and recovered Rs.15,000 in cash in Chitradurga district on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X