ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಳ್ಳಕೆರೆ ದೊಡ್ಡ ಉಳ್ಳಾರ್ತಿ ಗೌರಮ್ಮನ ಜಾತ್ರೆ

By Mahesh
|
Google Oneindia Kannada News

ಬಯಲು ಸೀಮೆಯಲ್ಲೇ ವಿಶಿಷ್ಟ ಶುಷ್ಕ ಹುಲ್ಲುಗಾವಲು ಪರಿಸರದಲ್ಲಿ ಬರುವ ದೊಡ್ಡ ಉಳ್ಳಾರ್ತಿ ಎಂಬ ಗ್ರಾಮದ ಹೆಸರಿನ ಮೂಲ "ಉರಳು-ಆರತಿ" ಎಂಬ ಕನ್ನಡದ ಪದದಿಂದ ಬಂದಿದೆ. ಭಾರತೀಯ ಧಾರ್ಮಿಕ ಆಚರಣೆಗಳಲ್ಲಿ ತಮ್ಮ ಇಷ್ಟ ದೈವಕ್ಕೆ ಭಕ್ತಿಯನ್ನು ವ್ಯಕ್ತಪಡಿಸುವ ಪ್ರಾರ್ಥನೆ ಮತ್ತು ಸಾಧನೆಯ ಕ್ರಮದಲ್ಲಿ ಒಂದಾದ ದೈಹಿಕ ಉರಳು ಸೇವೆ ಎಂಬ ಮೂಲದಿಂದ ಬಂದಿದೆ.

ಸಮೀಪದಲ್ಲಿರುವ ಚಿಕ್ಕ ಉಳ್ಳಾರ್ತಿ ಗ್ರಾಮದ ಹೆಸರು ಕೂಡ ಭಕ್ತಿಯ ಇದೇ ಆಶಯವನ್ನು ಹೊಂದಿದ್ದು ಸಣ್ಣ ಪ್ರಮಾಣದಲ್ಲಿ ಧಾರ್ಮಿಕ ಆಚರಣೆಗಳನ್ನು ಇಲ್ಲಿ ಅದು ಸೂಚಿಸುತ್ತದೆ. ಈ ಗ್ರಾಮಗಳ ವಿಶಿಷ್ಟ ಭೌಗೋಳಿಕ ಪರಿಸರದಲ್ಲಿರುವ ಅಧ್ಬತವೆನಿಸುವ ದಂತಕತೆಗಳೊಂದಿಗೆ ಹಲವು ಪೌರಾಣಿಕ ಮತ್ತು ನಂಬಿಕೆಗಳು ಬೆಸೆದು ಕೊಂಡಿದ್ದು, ಇಲ್ಲಿನ ಜನರ ವಿಸ್ಮಯಗೊಳೀಸುವ ನೆನಪುಗಳ ಮತ್ತು ಸಂಕಿರ್ಣ ಚರಿತ್ರೆಗಳು ಕೇಳುಗರನ್ನು ಮೂಕವಿಸ್ಮತರನ್ನಾಗಿಸುತ್ತವೆ.

ದೊಡ್ಡ ಉಳ್ಳಾರ್ತಿ ಗ್ರಾಮದ ಜನರ ರಕ್ಷಣೆಗೆ ನಿಂತಿರುವ ಪ್ರಮುಖ ದೇವತಯಾದ ಗೌರಮ್ಮ ದೇವಿಯು ಊರಿನ ಮಧ್ಯಭಾಗದಲ್ಲಿ ನೆಲೆಸಿದ್ದು ಅವಳಿಗಾಗಿ ಗ್ರಾಮಸ್ತರು ಗುಡಿಯನ್ನು ಕಟ್ಟಿಸಿದ್ದಾರೆ. ಇಲ್ಲಿನ ಜನರು ಹೇಳುವ ಪ್ರಕಾರ ಹಲವು ಶತಮಾನಗಳಿಂದೆ ಬಾವಿಯೊಂದರಿಂದ ಮೂರು ಕನ್ಯಾ ದೇವತೆಗಳು ಮೂಡಿಬಂದು, ಸದ್ಗಣ ಮತ್ತು ಸನ್ನಡೆತೆಯನ್ನು ಸ್ಥಾಪಿಸಲು ಅವರ ಪೂರ್ವಜರನ್ನು ಜಾಗವನ್ನು ಕೋರಿಕೊಂಡಾಗ ಅವರು ಈಗಿರುವ ಜಾಗದಲ್ಲಿ ಸ್ಥಾಪನೆಯಾಗಲು ಅವರ ಪೂರ್ವಜರು ಕೊರಿಕೊಳ್ಳುತ್ತಾರೆ.

ಆಗ ಅಲ್ಲಿ ಸ್ಥಾಪನೆಯಾದ ದೇವತಗಳು ಅವರ ಪೂರ್ವಜರನ್ನು ಹರಸಿದಾಗ ಅವರುಗಳು ಕೃತ್ಞತೆಗಾಗಿ ದೊಡ್ಡ ಉರಳು-ಆರತಿ ಸೇವೆಮಾಡಲು ಆ ಉರಿಗೆ ದೊಡ್ಡ ಉಳ್ಳಾರ್ತಿ ಎಂಬ ಅಸ್ಥಿತ್ವಕ್ಕೆ ಬಂದಿತು ಎಂದು ತಿಳಿಸುತ್ತಾರೆ. ನಂತರ ಅವರುಗಳ ತಮ್ಮ ಹಳೆ ಗ್ರಾಮವನ್ನು ಬಿಟ್ಟು ಈ ಸ್ಥಳದಲ್ಲಿ ಹೊಸ ಗ್ರಾಮವನ್ನು ಸ್ಥಾಪಿಸಿಕೊಂಡರು. ಅಂದಿನಿಂದಲು ಈ ಗ್ರಾಮಸ್ಥರು ಆ ಕನ್ಯಾದೇವತೆಗಳು ಹರಸಿದ ಜಾಗದ ಗಾಳಿ-ನೀರುನೊಂದಿಗೆ ಬಾಳುತ್ತಾ ಸಂತಾನ ಶಕ್ತಿಯ ಸ್ವರೂಪಳಾದ ಗೌರಮ್ಮಳನ್ನು ಆರಾಧಿಸುತ್ತಿದ್ದಾರೆ. ದೊಡ್ಡ ಉಳ್ಳಾರ್ತಿ ಗೌರಮ್ಮಳ ಹಬ್ಬದ ಇನ್ನಷ್ಟು ವಿಶೇಷ ಹಾಗೂ ಮಾಹಿತಿ ಮುಂದೆ ಇದೆ ಓದಿ...

ಮಣ್ಣಿನ ಗೌರಿ ಪೂಜೆ

ಮಣ್ಣಿನ ಗೌರಿ ಪೂಜೆ

ಪ್ರತೀವರ್ಷದಂತೆ ಗೌರಮ್ಮಳ ವಾರ್ಷಿಕ ಹಬ್ಬವು ಈ ಬಾರಿ ದಿನಾಂಕ 17ನೇ ನವೆಂಬರನಲ್ಲಿಅಮೃತ್ ಮಹಲ್ ಕಾವಲಿನ ಮಣ್ಣಿನಿಂದ ಗೌರಮ್ಮ ಮೂರ್ತಿಯನ್ನು ಮಾಡಿ ಗ್ರಾಮಕ್ಕೆ ತಂದು ಸೋಬಾನೆ, ಮೆರವಣಿಗೆ, ಅಲಂಕಾರ, ಉಪವಾಸ ಮತ್ತು ಇತರೆ ವಿವಿಧ ರೀತಿಯ ಸಾತ್ವಿಕ ಭಕ್ತಿಯನ್ನು ಸಮರ್ಪಿಸುತ್ತ 20ನೇ ತಾರೀಖಿನಂದು ಹುಣ್ಣೀಮೆಯ ಚಂದ್ರನು ಪೂರ್ಣ ಪ್ರಮಾಣದಲ್ಲಿ ಮಾಡಿದ ದಿನ ರಾತ್ರಿ ಅದೇ ಅಮೃತ್ ಮಹಲ್ ಕಾವಲಿನಲ್ಲಿರುವ ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ.

ಅಮೃತ್ ಮಹಲ್ ಕಾವಲಿನ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರುಗಳು ತಮ್ಮ ಜಾನುವಾರುಗಳೊಂದಿಗೆ ಬಂದು ಭಕ್ತಿ ಪೂರ್ವಕ ಪೂಜೆ-ಪ್ರದಕ್ಷಿಣೆಯನ್ನ, ಮಾಡಿ ದೇವಿಯ ದಯಾಪರತೆಯ ಕೃತಜ್ಞತೆಗಾಗಿ ಮೆರವೆಣಿಗೆಯ ಮೂಲಕ ಕಾವಲಿನಲ್ಲಿರುವ ಕೆರೆಯಲ್ಲಿ ದೇವಿಯ ವಿಸರ್ಜನೆಗಾಗಿ ಅವಳೊಂದಿಗೆ ತೆರಳುತ್ತಾರೆ. ವಿಸರ್ಜನೆ ಹಿಂದಿನ ದಿನ ಇಡೀ ರಾತ್ರಿ ಸೋಬಾನೆ, ಕುಣೀತ, ಮೂಂತಾದ ಸಡಗರ ಸಂಭ್ರಮಗಳಿಂದಮುಳುಗಿದ್ದು ಮೆರವಣಿಗೆಯು ನಸುಕಿನವರೆಗು ನಡೆಯುತ್ತದೆ.

ವಿಸರ್ಜನೆ ದಿನದಂದು

ವಿಸರ್ಜನೆ ದಿನದಂದು

ವಿಸರ್ಜನೆ ದಿನದಂದು ಜನರು ತಮ್ಮ ದನ-ಕರು ಕುರಿಗಳನ್ನು ಕಾವಲಿನಲ್ಲಿ ಸ್ವೇಚ್ಛೆಯಾಗಿ ಮೇಯಲು ಬಿಡುತ್ತಾರೆ. ಅದೆ ದಿನ ಸಂಜೆ ಹುಲ್ಲಿನಿಂದ ಮಾಡಿದ ದೊಡ್ಡ ಬೆಂಕಿ ಕೆಂಡಗಳ ಮುಂದೆ ಶಕ್ತಿ ದೇವಿಯಲ್ಲಿ ಪ್ರಾರ್ಥಿಸುತ್ತ ತಮ್ಮ ಕಾವಲು, ದನ-ಕರುಗಳು, ಜನರನ್ನ ಮತ್ತು ತಮ್ಮ ಬದುಕ್ನು ಹಸನಗೋಳಿಸುವಂತೆ ಬೇಡುತ್ತ ಆ ಬೆಂಕಿ ಕೆಂಡಗಳಲ್ಲಿ ಆ ದನ-ಕರುಗಳನ್ನು ಒಮ್ಮೇಲೆ ಹಾಯಿಸುತ್ತಾರೆ.

ಅಂದು ಗ್ರಾಮವು ಚಟುವಟಿಕೆಯಿಂದ ಕೂಡಿದ ದೊಡ್ಡ ಜೇನು ಗುಡಿನ ರೀತಿಯಾಗಿದ್ದು, ನಾಡಿನ ಪ್ರಸಿದ್ದ ಕರಿಕುರಿ ಕಂಬಳಿಗಳು, ಕರಕುಶಲ ವಸ್ತುಗಳು, ಮಡಿಕೆ-ಕುಡಿಕೆಗಳು, ಬಿದಿರು ಬುಟ್ಟಿಗಳು, ಸಿಹಿ ತಿಂಡಿಗಳು, ಮತ್ತು ದನಕರುವಿನ ಸಂತೆಯಿಂದ ವೈವಿಧ್ಯಮಯವಾಗಿ ಝೇಂಕರಿಸುತ್ತಿರುತ್ತದೆ.

ಅಮೃತ್ ಮಹಲ್ ಕಾವಲುಗಳು

ಅಮೃತ್ ಮಹಲ್ ಕಾವಲುಗಳು

ಕರ್ನಾಟಕ ರಾಜ್ಯದ ಕೊನೆ ಹಾಗು ಬಹು ವಿಸ್ತಾರವದ ಹುಲ್ಲುಗಾವಲುಗಳ ಜೈವಿಕ ಪರಿಸರ ವ್ಯವಸ್ಥೆಯಾಗಿದೆ. ಇಲ್ಲಿನ ಸ್ಥಳೀಯ ಸಮುದಾಯಗಳು ಈ ಕಾವಲುಗಳನ್ನು ಬಳಸುತ್ತ ಮತ್ತು ಪೂಜಿಸುತ್ತಾ ಸಂರಕ್ಷಿಸಿಕೊಂಡು ಬಂದಿದ್ದಾರೆ. ಈ ಕಾವಲುಗಳು ತೀವ್ರವಾಗಿ ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ನ ಬಸ್ಟ್ ಡ್, ಲೆಸ್ಸರ್ ಫ್ಲೋರಿಕಾನ್ ಹಕ್ಕಿಗಳು ಮತ್ತು ಅಳಿವಿನ ಅಪಾಯದಲ್ಲಿರುವ ಕೃಷ್ಣಮೃಗ ಮತ್ತು ತೋಳಗಳ ಆವಾಸಸ್ಥಾನವಾಗಿವೆ.

ನೂರಾರು ವರ್ಷಗಳಿಂದಲೂ ಮಾಂಸ, ಹಾಲು, ಉಣ್ಣೆ, ಗೊಬ್ಬರ, ಔಷಧ ಸಸ್ಯಗಳು, ನೀರು ನೆರಳನ್ನು ತನ್ನ ಜೈವಿಕ ಪರಿಸರ ವ್ಯವಸ್ಥೆಯ ಮೂಲಕ ಲಕ್ಷಾಂತರ ಜನಜೀವಗಳನ್ನು ಪೊರೆಯುತ್ತ ಬಂದಿದೆ. ಈ ಕಾವಲಿನೊಂದಿಗಿನ ಹೊಂದಿರುವ ಅವಿನಾಭಾವ ಸಂಭಂದದಿಂದಾಗಿ ಇಲ್ಲಿನ ಕೃಷಿಕರು ಮತ್ತು ಪಶುಪಾಲಕರುಗಳು ತಮ್ಮ ಘನತೆಯುಕ್ತ ಬದುಕಿನ ಸಾಧ್ಯತೆಯನ್ನು ಕಂಡುಕೊಂಡಿದ್ದು ಹಾಗು ಕಾವಲುಗಳ ವೈವಿಧ್ಯತೆಯ ಕಾಣಿಕೆಯನ್ನು ಗೌರವದಿಂದ ಪಡೆಯುತ್ತ ಅದಕ್ಕೆ ಋಣವಾಗಿ ಸಮೃದ್ದ ಸಂಪ್ರದಾಯ ಮತ್ತು ನಂಬಿಕೆಗಳ ಮೂಲಕ ಅವುಗಳನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಕಾವಲುಗಳಿಗೆ ಭೀತಿ

ಕಾವಲುಗಳಿಗೆ ಭೀತಿ

ಈಗ ಈ ಕಾವಲುಗಳಲ್ಲಿ ಸರ್ಕಾರವು ಪರಮಾಣು, ರಕ್ಷಣ ಸಂಸ್ಥೆ ಮತ್ತು ಇತರೆ ಅಭಿವೃದ್ದಿ ಯೋಜನೆಗಳಿಗೆ ಇಲ್ಲಿನ ಸಮುದಾಯಗಳೊಂದಿಗೆ ಚರ್ಚಿಸದೆ ಅಥವ ಕಾನೂನು ಪ್ರಕ್ರಿಯೆಗಳಿಗೆ ಅನುಗುಣವಾಗಿರದೆ ಅವಕಾಶ ಮಾಡುತ್ತಿದ್ದು ಇಂದು ಈ ಜನರ ಸಂಸ್ಕೃತಿ, ಬದುಕ, ದೇಶಿ ಜ್ಞಾನದೊಂದಿಗೆ ಈ ಕಾವಲುಗಳು ಅಳಿವಿನ ಅಪಾಯದಲ್ಲಿರುತ್ತದೆ.

ಈಗ ಚಳ್ಳಕೆರೆಯ ಕೃಷಿಕ ಮತ್ತು ಪಶುಪಾಲನ ಸಮುದಾಯಗಳ ಸಾಂಪ್ರದಾಯಿಕ ಜ್ಞಾನ ಭರಿತ ಜೀವನವನ್ನು ಮತ್ತು ಅವರ ಸ್ವಾಲಂಬದ ಬದುಕನ್ನು ಸಂಭ್ರಮಿಸಲು ಹಾಗೆ, ಈ ಅದ್ಭುತ ಜೈವಿಕ ಸಂಸ್ಕೃತಿಯ ಪರಂಪರೆಯನ್ನು ಉಳಿಸಲು ಕೈ ಜೋಡಿಸುವ ಸಮಯವಾಗಿದೆ. ಇದಕ್ಕಾಗಿ ESG ಮುಂತಾದ ಸಂಸ್ಥೆಗಳು ಸತತ ಹೋರಾಟ ನಡೆಸುತ್ತಿವೆ. ವಿವರ ಇಲ್ಲಿ ಓದಿ

ತಲುಪುವುದು ಹೇಗೆ?

ತಲುಪುವುದು ಹೇಗೆ?

ದೊಡ್ಡ ಉಳ್ಳಾರ್ತಿ ಗ್ರಾಮವು ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಿಂದ ಸುಮಾರು 15 ಕಿ.ಮಿ. ದೂರದಲ್ಲಿರುತ್ತದೆ.

ಬೆಂಗಳೂರುನಿಂದ ಸುಮಾರು 204 ಕಿ.ಮಿ ದೂರದಲ್ಲಿರುತ್ತದೆ. ದಾರಿ : ಬೆಂಗಳೂರಿನಿಂದ-ನೆಲಮಂಗಲ-ತುಮಕೂರು-ಸಿರ- ಹಿರಿಯೂರು-ಚಳ್ಳಕೆರೆ. ಹೆಚ್ಚಿನ ಮಾಹಿತಿಗಾಗಿ : ಕರಿಯಣ್ಣ : 9900954664, ಜಿ.ಹೆಚ್. ಹನುಮಂತರಾಯಪ್ಪ :990104588

English summary
Dodda Ullarthi in Challakere, Chitradurga districtcelebrating a Jathre. Gowramma: deity for Shakti/female power a fair to celebrate the Goddess of Power from the 19th to the 21st of November 2013 at Dodda Ullarthi. The name Dodda Ullarthi comes from the longer Kannada word Urulu-arathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X