ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ಬರುವ ಮುನ್ನವೇ ಜಯಾ ರಾಜೀನಾಮೆ?

By Mahesh
|
Google Oneindia Kannada News

ಚೆನ್ನೈ, ಸೆ.23: ಅಕ್ರಮ ಆಸ್ತಿ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಶಿಕ್ಷೆಯಾಗಲಿ, ಬಿಡಲಿ ಅವರೇ ನಮ್ಮ ನಾಯಕಿ ಎಂದು ಎಐಎಡಿಎಂಕೆ ಘೋಷಿಸಿದೆ. ಆದರೆ, ಪ್ರತಿಷ್ಠೆಯನ್ನು ಹೊತ್ತು ಬೆಂಗಳೂರಿಗೆ ಬರುವ ಜಯಲಲಿತಾ ಅವರು ರಾಜೀನಾಮೆ ನೀಡಲು ಮುಂದಾಗಿರುವ ವಿಷಯ ಎಲ್ಲೆಡೆ ಹರಡಿದೆ. ಮಂಗಳವಾರ ತಮಿಳುನಾಡಿನ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಜಯಲಲಿತಾ ಅವರ ಮುಂದಿನ ನಡೆ ಭಾರಿ ಕುತೂಹಲ ಕೆರಳಿಸಿದೆ.

ಸೆ.27ರಂದು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ತಮಿಳುನಾಡಿನ ಸಿಎಂ ಜೆ ಜಯಲಲಿತಾ, ಶಶಿಕಲಾ ಇನ್ನಿಬ್ಬರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣ ತೀರ್ಪು ಹೊರಬೀಳಲಿದೆ. ಈ ಸಂದರ್ಭದಲ್ಲಿ ಜಯಲಲಿತಾ ಅವರು ಖುದ್ದು ಹಾಜರಾಗಬೇಕಿದೆ. ಇದಕ್ಕಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಕರ್ನಾಟಕ, ತಮಿಳುನಾಡು ಪೊಲೀಸರು ತಯಾರಿ ಪೂರ್ಣಗೊಳಿಸಿದ್ದಾರೆ. [ಆಸ್ತಿಗಳಿಕೆ ಪ್ರಕರಣ ತೀರ್ಪು ಸೆ.27ಕ್ಕೆ]

ಒಂದು ವೇಳೆ ಕೋರ್ಟಿನ ತೀರ್ಪು ಜಯಲಲಿತಾ ಅವರ ವಿರುದ್ಧ ಬಂದರೆ ತಮಿಳುನಾಡಿನಾದ್ಯಂತ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಜತೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಜನಜೀವನಕ್ಕೆ ತೊಂದರೆಯಾಗದಂತೆ ನಿಗಾ ವಹಿಸಬೇಕಾಗುತ್ತದೆ. ಜಯಲಲಿತಾ ಅವರಿಗೆ ಒದಗಿಸಿರುವ ಜಡ್ ಶ್ರೇಣಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಬೇಕಿದೆ. ಪರಪ್ಪನ ಅಗ್ರಹಾರದ ಗಾಂಧಿ ಭವನ ಆವರಣದ ಹತ್ತಿರ ಮಾಧ್ಯಮ ಪ್ರತಿನಿಧಿಗಳಿಗೂ ಪ್ರವೇಶ ಕಲ್ಪಿಸಬಾರದು ಎಂದು ತಮಿಳುನಾಡು ಪೊಲೀಸರು ಕರ್ನಾಟಕದ ಪೊಲೀಸರಿಗೆ ಕೇಳಿಕೊಂಡಿದ್ದಾರೆ.

Tamil Nadu CM Jayalalithaa may resign ahead of DA case verdict

ರಾಜೀನಾಮೆ ವಿಷಯ: ಜಯಲಲಿತಾ ಅವರಿಗೆ 2 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಯಾದರೆ ಅವರು ವಿಧಾನಸಭಾ ಸದಸ್ಯತ್ವ ಕಳೆದುಕೊಳ್ಳಲಿದ್ದು, ಮುಂದಿನ 6 ವರ್ಷಗಳ ಕಾಲ ಚುನಾವಣಾ ಸ್ಪರ್ಧೆಯಿಂದ ವಂಚಿತರಾಗಲಿದ್ದಾರೆ. ಹೀಗಾಗಿ ಈ ಅವಮಾನ ಹೊತ್ತುಕೊಂಡು ಇಲ್ಲಿಂದ ಚೆನ್ನೈಗೆ ಹೋಗುವ ಬದಲು ತೀರ್ಪು ಪ್ರಕಟಣೆಗೂ ಮುನ್ನವೇ ರಾಜೀನಾಮೆ ನೀಡುವ ಯೋಚನೆ ಜಯಲಲಿತಾ ಅವರ ಮನದಲ್ಲಿ ಸುಳಿದಿದೆ ಎಂದು ಆಪ್ತವಲಯ ಹೇಳಿದೆ.

ಇತಿಹಾಸ ಮರುಕಳಿಸುತ್ತದೆ ಎಂಬಂತೆ 2001ರಲ್ಲಿ ಇದೇ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ತೊಡಕು ಎದುರಾದಾಗ ಜಯಲಲಿತಾ ಅವರು ರಾಜೀನಾಮೆ ನೀಡಿದ್ದರು. ನಂತರ ತಮ್ಮ ಕೈಗೊಂಬೆಯಾಗಿ ಪನ್ನೀರ್ ಸೆಲ್ವಂರನ್ನು ಮುಖ್ಯಮಂತ್ರಿಯನ್ನಾಗಿಸಿದರು. ಈಗಲೂ ಇದೇ ತಂತ್ರವನ್ನು ಉಪಯೋಗಿಸುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಎಲ್ಲದ್ದಕ್ಕೂ ಮಂಗಳವಾರ ಸಂಜೆ ಉತ್ತರ ಸಿಗುವ ಸಾಧ್ಯತೆಗಳಿವೆ. ಕಾದು ನೋಡೋಣ.

English summary
Tamil Nadu CM Jayalalithaa may resign ahead of DA case verdict. A special court in Bangalore set to pass its judgement on September 27 in the disproportionate assets case against Tamil Nadu Chief Minister Jayalalithaa and three others. Tamil Nadu, Karnataka forces discuss security for September 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X