ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ: ಶ್ರೀಲಂಕಾ ಮೂಲದ ಪಾಕ್ ಗೂಢಾಚಾರಿ ಬಂಧನ

By Mahesh
|
Google Oneindia Kannada News

ಚೆನ್ನೈ, ಸೆ.11: ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿಕೊಂಡು ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಲು ಪಾಕಿಸ್ತಾನ ಗೂಢಚಾರಿಯೊಬ್ಬನನ್ನು ನೇಮಿಸಿತ್ತು. ಶ್ರೀಲಂಕಾ ಮೂಲದ ಈ ಭಯಾನಕ ಗೂಢಚಾರಿಯನ್ನು ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಐಎಸ್​ಐ ಗೂಢಚಾರಿ ಶ್ರೀಲಂಕಾದ ಅರ್ಜುನ್ ಸೆಲ್ವರಾಜನ್​ನ್ನು ರಾಷ್ಟ್ರಿಯ ತನಿಖಾಧಿಕಾರಿ(NIA)ಗಳು ಬಂಧಿಸಿದ್ದು, ಈತನ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುವಂತೆ ಶ್ರೀಲಂಕಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಐಎಸ್​ಐಗೆ ಯುವಕರನ್ನು ಸೇರ್ಪಡೆಗೊಳಿಸುವುದು, ಸಂಘಟನೆ ಪ್ರಚಾರ, ವಿಸ್ತರಣೆ ಈತನ ಕರ್ತವ್ಯವಾಗಿತ್ತು. ಈತನಿಗೆ ನೇರವಾಗಿ ಪಾಕ್ ಹೈಕಮಿಷನರ್ ನಿಂದ ನೆರವು ದೊರೆಯುತ್ತಿತ್ತು ಎಂದು ತಿಳಿದು ಬಂದಿದೆ.

Sri Lankan spy on Pak rolls nabbed in Chennai,
ಬಂಧಿತ ಅರ್ಜುನ್ ನಿಂದ 2 ಪಾಸ್ ​ಪೋರ್ಟ್ ​ಗಳಿತ್ತು, ಶ್ರೀಲಂಕಾ ಹಾಗೂ ಭಾರತದಲ್ಲಿ ಓಡಾಡುತ್ತಿದ್ದ. ಈತನ ಬಳಿಯಿದ್ದ ಸಿಡಿ ಹಾಗೂ ಪೆನ್​ಡ್ರೈವ್ ಗಳನ್ನು ಎನ್.​ಐಎ ವಶಪಡಿಸಿಕೊಂಡು ತನಿಖೆ ಮುಂದುವರಿಸಿದೆ.

ವಿಶಾಖಪಟ್ಟಣಕ್ಕೆ ತೆರಳಿದ್ದ ಸೆಲ್ವರಾಜನ್ ಅಲ್ಲಿನ ನೌಕಾ ಪಡೆ, ಬಂದರುಗಳ ಚಿತ್ರಗಳನ್ನು ತೆಗೆದಿದ್ದ. ಮಾಹಿತಿಗಳನ್ನು ಗೌಪ್ಯವಾಗಿ ಸಂಗ್ರಹಿಸಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ. ಇತ್ತೀಚೆಗೆ ಬಂಧಿತನಾದ ಶ್ರೀಲಂಕಾ ಮೂಲದ ಮುಸ್ಲಿಂ ಶಕೀರ್ ಹುಸೇನ್ ಗೂ ಅರ್ಜುನ್ ಗೂ ಸಂರ್ಪಕವಿತ್ತು. ಚೆನ್ನೈನ ರಾಯಭಾರಿ ಕಚೇರಿ, ವೀಸಾ ಕೌನ್ಸಿಲರ್ ಚಿತ್ರಗಳನ್ನು ಪಾಕಿಸ್ತಾನದ ಹೈ ಕಮಿಷನ್ ಗೆ ಕಳಿಸಿದ್ದರು. ಎರಡು ವರ್ಷಕ್ಕೂ ಮುನ್ನ ಬಂಧಿತನಾಗಿದ್ದ ತಮೀಮ್ ಅನ್ಸಾರಿಗೂ ಸೆಲ್ವರಾಜನ್ ಗೂ ನಿಕಟ ಸಂಬಂಧಿವಿತ್ತು ಎಂದು ತಿಳಿದು ಬಂದಿದೆ.

English summary
The National Investigation Agency (NIA) has arrested a Sri Lankan national on charges of taking photos and videos of vital security installations in Chennai and passing them on to his handler in the Pakistani high commission in Colombo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X